Advertisement

SSLC ಪರೀಕ್ಷೆ-2 ಜೂನ್‌ 7ರಿಂದ ; ನೋಂದಣಿಗೆ ಮೇ 16ರ ವರೆಗೆ ಅವಕಾಶ

01:37 AM May 10, 2024 | Team Udayavani |

ಬೆಂಗಳೂರು: ಎಸೆಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿ ಗಳ ಒಟ್ಟಾರೆ ಪ್ರದರ್ಶನ ಉತ್ತಮವಾಗಿಲ್ಲ ದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಶಾಲಾ ಶಿಕ್ಷಣ ಇಲಾಖೆ, ಮುಂದಿನ ವಾರ್ಷಿಕ ಪರೀಕ್ಷೆ 2 ಮತ್ತು 3ಕ್ಕೆ ಮಕ್ಕಳನ್ನು ಸಿದ್ಧಪಡಿಸಲು ಪರಿಹಾರ ಬೋಧನೆ ನಡೆಸಲು ಮುಂದಾಗಿದೆ.

Advertisement

ಪರೀಕ್ಷೆ-1ರಲ್ಲಿ ಉತ್ತಮ ಸಾಧನೆ ಮಾಡದೆ ಮುಂದಿನ ಪರೀಕ್ಷೆ ಗಳಲ್ಲಿ ತಮ್ಮ ಅಂಕಗಳನ್ನು ಉತ್ತಮ ಪಡಿಸಿಕೊಳ್ಳಲು ಬಯಸುವ, ಅನು ತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಮುಂದಿನ 1 ತಿಂಗಳಲ್ಲಿ ಪರಿಹಾರ ಬೋಧನೆ ಯನ್ನು ಶಿಕ್ಷಣ ಇಲಾಖೆ ಆಯೋಜಿಸಲಿದೆ. ವಾರ್ಷಿಕ ಪರೀಕ್ಷೆ- 2ಕ್ಕೆ ನೋಂದಣಿ ಮಾಡಿಕೊಳ್ಳಲು ಮೇ 16 ಕೊನೆಯ ದಿನವಾಗಿದೆ.

ಮರು ಮೌಲ್ಯಮಾಪನ
ಎಸೆಸೆಲ್ಸಿ ಪರೀಕ್ಷೆ-1ರ ಮೌಲ್ಯ ಮಾಪನಗೊಂಡ ಉತ್ತರ ಪತ್ರಿಕೆಗಳ ಸ್ಕ್ಯಾನ್‌ ಪ್ರತಿ, ಮರು ಎಣಿಕೆ ಹಾಗೂ ಮರು ಮೌಲ್ಯಮಾಪನಕ್ಕಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ವೇಳಾಪಟ್ಟಿ ಪ್ರಕಟಿಸಲಾಗಿದೆ.
ಉತ್ತರ ಪತ್ರಿಕೆಗಳ ಸ್ಕ್ಯಾನ್‌ ಪ್ರತಿ ಪಡೆಯಲು ಅರ್ಜಿ ಸಲ್ಲಿಸಲು ಮೇ 16, ಶುಲ್ಕ ಪಾವತಿಸಲು ಮೇ 17ರ ಕೊನೆಯ ದಿನ. ಉತ್ತರ ಪತ್ರಿಕೆಗಳ ಮರು ಎಣಿಕೆ ಮತ್ತು ಮರು ಮೌಲ್ಯಮಾಪನಕ್ಕೆ ಮೇ 13ರಿಂದ ಮೇ 22ರ ವರೆಗೆ ಅರ್ಜಿ ಸಲ್ಲಿಸಬಹುದು. ಶುಲ್ಕ ಪಾವತಿಸಲು ಮೇ 23 ಕೊನೆಯ ದಿನ.

ಮರು ಎಣಿಕೆಗೆ ಭೌತಿಕವಾಗಿ ಅರ್ಜಿ ಸ್ವೀಕರಿಸುವುದನ್ನು ರದ್ದುಗೊಳಿ ಸಲಾಗಿದೆ. ಬದಲಿಗೆ ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ. ಮರು ಎಣಿಕೆ ಬಯಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಸಂಬಂಧಪಟ್ಟ ವಿಷಯದ ಉತ್ತರ ಪತ್ರಿಕೆಯ ಸ್ಕ್ಯಾನ್‌ ಪ್ರತಿಯನ್ನು ಪಡೆಯಬೇಕು. ಸ್ಕ್ಯಾನ್‌ ಪ್ರತಿಯನ್ನು ಪಡೆದ ಬಳಿಕ ಅಂಕಗಳ ಎಣಿಕೆಯಲ್ಲಿ ವ್ಯತ್ಯಾಸವಿದ್ದರೆ, ಅದನ್ನೂ ಖಚಿತಪಡಿಸಿಕೊಂಡ ಬಳಿಕವಷ್ಟೇ ಮರುಎಣಿಕೆಗಾಗಿ ಅರ್ಜಿಯನ್ನು ಸಲ್ಲಿಸಬೇಕು. ಇನ್ನೂ ಮರುಎಣಿಕೆಯು ಉಚಿತವಾಗಿದ್ದು ಪ್ರತ್ಯೇಕ ಶುಲ್ಕವಿರುವುದಿಲ್ಲ. ಮರು ಎಣಿಕೆ ಅಂಕಗಳ ಎಣಿಕೆಯಲ್ಲಿ ವ್ಯತ್ಯಾಸ ವಿದ್ದಲ್ಲಿ ಪರಿಶೀಲಿಸಿ, ಬಳಿಕ ಪರಿಷ್ಕೃತ ಪಟ್ಟಿ ಬಿಡುಗಡೆ ಮಾಡಲಾಗುವುದು.

ಸಹಾಯವಾಣಿಗೆ ಕರೆ ಮಾಡಿ
ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಯನ್ನು ಆರಂಭಿಸಲಾಗಿದೆ. ಸಹಾಯ ವಾಣಿ ಸಂಖ್ಯೆ 080-23310075, 23310076ಕ್ಕೆ ಕರೆ ಮಾಡಬಹುದು.

Advertisement

ವೇಳಾಪಟ್ಟಿ
ಎಸೆಸೆಲ್ಸಿ ಪರೀಕ್ಷೆ-2 ಜೂ.7ರಿಂದ 14ರ ವರೆಗೆ ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರ ವರೆಗೆ ನಡೆಯಲಿವೆ.
ಜೂ.7: ಪ್ರಥಮ ಭಾಷೆ (ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್‌, ಇಂಗ್ಲಿಷ್‌ (ಎನ್‌ಸಿಇಆರ್‌ಟಿ), ಸಂಸ್ಕೃತ
ಜೂ.8: ತೃತೀಯ ಭಾಷೆ (ಹಿಂದಿ ಎನ್‌ಸಿಇಆರ್‌ಟಿ), ಹಿಂದಿ, ಕನ್ನಡ, ಇಂಗ್ಲಿಷ್‌, ಅರೇಬಿಕ್‌, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಎನ್‌ಎಸ್‌ಕ್ಯುಎಫ್‌ ವಿಷಯಗಳು
ಜೂ.10: ಗಣಿತ, ಸಮಾಜ ವಿಜ್ಞಾನ
ಜೂ.11: ಅರ್ಥಶಾಸ್ತ್ರ, ಎಲಿಮೆಂಟ್ಸ್‌ ಆಫ್ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌, ಮೆಕಾನಿಕಲ್‌, ಎಂಜಿನಿಯರಿಂಗ್‌ ಗ್ರಾಫಿಕ್ಸ್‌, ಕಂಪ್ಯೂಟರ್‌ ಸೈನ್ಸ್‌ ವಿಷಯ.
ಜೂ.12: ವಿಜ್ಞಾನ, ರಾಜ್ಯಶಾಸ್ತ್ರ; ಹಿಂದೂಸ್ಥಾನಿ ಮತ್ತು ಕರ್ನಾಟಕ ಸಂಗೀತ
( ಮ. 2ರಿಂದ ಸಂ 5.15)
ಜೂ.13: ದ್ವಿತೀಯ ಭಾಷೆ, ಇಂಗ್ಲಿಷ್‌, ಕನ್ನಡ
ಜೂ.14: ಸಮಾಜ ವಿಜ್ಞಾನ

Advertisement

Udayavani is now on Telegram. Click here to join our channel and stay updated with the latest news.

Next