ಹೈದರಾಬಾದ್: ʼಬಾಹುಬಲಿʼ ಮೂಲಕ ಪ್ಯಾನ್ ಇಂಡಿಯಾದಲ್ಲಿ ಮಿಂಚಿದ ನಿರ್ದೇಶಕ ಎಸ್. ಎಸ್. ರಾಜಮಾಳಿ ಸದ್ಯ ಮಹೇಶ್ ಬಾಬು ಅವರ ಜೊತೆಗಿನ ಸಿನಿಮಾದ ಕೆಲಸದಲ್ಲಿ ನಿರತರಾಗಿದ್ದಾರೆ.
ʼಬಾಹುಬಲಿ: ಕ್ರೌನ್ ಆಫ್ ಬ್ಲಡ್ʼ ಅನಿಮೇಟೆಡ್ ಸರಣಿಯ ಬಿಡುಗಡೆ ಸಮಾರಂಭದಲ್ಲಿ ʼಬಾಹುಬಲಿʼ ಸಿನಿಮಾವನ್ನು ಹೇಗೆ ಪ್ರಚಾರ ಮಾಡಿದರು ಎನ್ನುವುದರ ಬಗ್ಗೆ ಮಾತನಾಡಿದ್ದಾರೆ.
ʼಬಾಹುಬಲಿʼ ಸಿನಿಮಾಕ್ಕೆ ನಾವು ಒಂದೂ ಪೈಸೆಯನ್ನು ಖರ್ಚು ಮಾಡಿಲ್ಲ. ಇಡೀ ಹಣ ಸಿನಿಮಾ ನಿರ್ಮಾಣಕ್ಕೆ ಖರ್ಚಾಗಿದೆಯೇ ಹೊರತು ಪ್ರಚಾರಕ್ಕೆ ಅಲ್ಲ. ನಾನು ನನ್ನ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ನಾನು ನನ್ನ ಬಗ್ಗೆ ಕೀಳಾಗಿ ಯೋಚಿಸುವುದಿಲ್ಲ. ನನ್ನ ಮುಂದಿನ ಯೋಜನೆಯು ಹೊರಬರುತ್ತಿದ್ದರೆ, ಎಲ್ಲರೂ ಅದಕ್ಕಾಗಿ ಕಾಯುತ್ತಾರೆ ಎಂದು ನಾನು ಭಾವಿಸುವುದಿಲ್ಲ” ಎಂದಿದ್ದಾರೆ.
“ನಾನು ಯಾವಾಗಲೂ ಹೊಸ ಪ್ರೇಕ್ಷಕರನ್ನು ಹುಡುಕಲು ಪ್ರಯತ್ನಿಸುತ್ತೇನೆ. ನಾನು ಹೊಸ ಪ್ರೇಕ್ಷಕರನ್ನು ಹೇಗೆ ತಲುಪಬಹುದು ಮತ್ತು ಅವರು ಬಂದು ನನ್ನ ಸಿನಿಮಾ ನೋಡುವಂತೆ ಮಾಡುವುದು ಹೇಗೆ? ಎನ್ನುವ ಏಕೈಕ ಯೋಚನೆ ಪ್ರಚಾರದ ಸಮಯದಲ್ಲಿ ಬರುತ್ತದೆ” ಎಂದಿದ್ದಾರೆ.
“ನಾವು ‘ಬಾಹುಬಲಿ’ ಪ್ರಚಾರಕ್ಕೆ ಒಂದು ಪೈಸೆಯನ್ನು ಖರ್ಚು ಮಾಡಿಲ್ಲ. ನಾವು ಯಾವುದೇ ಸ್ಪಾಟ್ ಗಳನ್ನು ಖರೀದಿಸಿಲ್ಲ, ಪೋಸ್ಟರ್ ಗಳನ್ನು ಹಾಕಲು ನಾವು ಯಾವುದೇ ಪೇಪರ್ಸ್ ಮತ್ತು ವೆಬ್‌ಸೈಟ್‌ಗಳಿಗೆ ಪಾವತಿಸಿಲ್ಲ. ಆದರೆ ನಾವು ಹಲವಾರು ಮೇಕಿಂಗ್ ವೀಡಿಯೊಗಳನ್ನು ಬಿಡುಗಡೆ ಮಾಡಿದ್ದೇವೆ. ನಾವು ಡಿಜಿಟಲ್ ಪೋಸ್ಟರ್‌ಗಳನ್ನು ಮಾಡಿದ್ದೇವೆ. ಕ್ಯಾರೆಕ್ಟರ್ ಲುಕ್ ರಿಲೀಸ್ ಮಾಡಿದ್ದೇವೆ. ಆದ್ದರಿಂದ ಇದೇ ನಮಗೆ ಪ್ರಚಾರವಾಯಿತು. ಈ ಕಾರಣದಿಂದ ನಾವು ಪ್ರತ್ಯೇಕವಾಗಿ ಪ್ರಚಾರಕ್ಕೆ ಹಣ ಖರ್ಚು ಮಾಡಿಲ್ಲ. ನಮ್ಮ ತಲೆ ಹಾಗೂ ಸಮಯವನ್ನು ಉಪಯೋಗಿಸಿಕೊಂಡು ನಾವು ಈ ರೀತಿಯಾಗಿ ಪ್ರಚಾರ ಮಾಡಿದ್ದೇವೆ” ಎಂದು ಅವರು ಹೇಳಿದ್ದಾರೆ.
‘ಬಾಹುಬಲಿ: ದಿ ಬಿಗಿನಿಂಗ್’ ಮತ್ತು ‘ಬಾಹುಬಲಿ: ದಿ ಕನ್‌ಕ್ಲೂಷನ್’ ಚಿತ್ರದಲ್ಲಿ ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ, ರಮ್ಯಾ ಕೃಷ್ಣನ್, ನಾಸರ್ ಮತ್ತು ಸತ್ಯರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಎರಡು ಸಿನಿಮಾಗಳು ವರ್ಲ್ಡ್ ವೈಡ್ 2,000 ಕೋಟಿ ರೂ. ಗಳಿಸಿತ್ತು.