Advertisement

ಪ್ರಿಯಕರನ ಪಡೆಯಲು ಐವರ ಹತ್ಯೆ: ಮಾಂಸ ಕತ್ತರಿಸುವ ಮಚ್ಚು, ಸುತ್ತಿಗೆಯಿಂದ ಕೊಲೆಗೈದ ಹಂತಕಿ

02:12 PM Feb 10, 2022 | Team Udayavani |

ಮಂಡ್ಯ: ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಗ್ರಾಮದಲ್ಲಿ ನಡೆದಿದ್ದ ಮಹಿಳೆ ಸೇರಿದಂತೆ ಐವರ ಹತ್ಯೆ ಪ್ರಕರಣವನ್ನು ಬೇಧಿಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೈಸೂರು ತಾಲೂಕು ಬೆಲವೆತ್ತ ಗ್ರಾಮದ ಸುನೀಲ್‌ ಪತ್ನಿ ಲಕ್ಷ್ಮೀ ಎಂಬಾಕೆಯೇ ಬಂಧಿತ ಆರೋಪಿಯಾಗಿದ್ದಾಳೆ.

Advertisement

ಎಂದು ಜಿಲ್ಲಾ ಪೊಲೀಸ್‌ ಅಧೀಕ್ಷಕ ಎನ್‌.ಯತೀಶ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಳೆದ ಫೆ.6ರಂದು ಕೆಆರ್‌ಎಸ್‌ ಗ್ರಾಮದ ಬಜಾರ್‌ ಲೈನ್‌ನ ವಾಸಿ ಗಂಗಾರಾಮ್‌ನ ಪತ್ನಿ ಲಕ್ಷ್ಮೀ (27), ಈಕೆಯ ಮೂವರು ಮಕ್ಕಳಾದ ರಾಜ್‌(10), ಕೋಮಲ್‌(8), ಕುನಾಲ್‌(6), ಗಂಗಾರಾಮ್‌ ಅಣ್ಣನ ಮಗ ಗೋವಿಂದ (13) ಎಂಬುವರನ್ನು ಆರೋಪಿ ಲಕ್ಷ್ಮೀ ಹತ್ಯೆ ಮಾಡಿ ಪರಾರಿಯಾಗಿದ್ದಳು ಎಂದು ಹೇಳಿದರು.

ಘಟನೆ ವಿವರ: ಆರೋಪಿ ಲಕ್ಷ್ಮೀ ಹಾಗೂ ಮೃತ ಲಕ್ಷ್ಮೀ ಇಬ್ಬರೂ ಸೋದರ ಸಂಬಂಧಿಗಳಾಗಿದ್ದು, ಆರೋಪಿ ಲಕ್ಷ್ಮೀ ಮೃತಳ ಗಂಡ ಗಂಗಾರಾಮ್‌ನ ಆಕರ್ಷಣೆಗೆ ಒಳಗಾಗಿದ್ದಳು. ಅಲ್ಲದೆ, ಸಲುಗೆಯಿಂದ ಇದ್ದು, ತನ್ನ ದಾರಿಗೆ ಅಡ್ಡವಾಗಿದ್ದ ಲಕ್ಷ್ಮೀಯನ್ನು ಗಂಗಾರಾಮ್‌ನಿಂದ ದೂರ ಮಾಡಲು ಗಂಡ-ಹೆಂಡತಿ ನಡುವೆ ಭಿನ್ನಾಭಿಪ್ರಾಯ ತರಲು ಪ್ರಯತ್ನಿಸಿದ್ದಳು. ಆದರೆ ಅದು ಸಫಲವಾಗಿರಲಿಲ್ಲ.

ಮಚ್ಚಿನೊಂದಿಗೆ ಬಂದಿದ್ದಳು: ಈ ಹಿನ್ನೆಲೆಯಲ್ಲಿ ಆಕೆಯನ್ನು ಕೊಲೆ ಮಾಡುವ ತೀರ್ಮಾನಕ್ಕೆ ಬಂದು ತನ್ನ ಗ್ರಾಮವಾದ ಮೈಸೂರು ತಾಲೂಕು ಬೆಲವೆತ್ತ ಗ್ರಾಮದ ಕೋಳಿ ಅಂಗಡಿಯೊಂದರಲ್ಲಿ ಮಾಂಸ ಕತ್ತರಿಸುವ ಮಚ್ಚನ್ನು ಪಡೆದು, ಇದರೊಂದಿಗೆ ದೊಡ್ಡ ಸುತ್ತಿಗೆಯ ಜತೆ ಶನಿವಾರ ರಾತ್ರಿ ಕೆಆರ್‌ಎಸ್‌ನಲ್ಲಿರುವ ಗಂಗಾರಾಮ್‌ ಮನೆಗೆ ಬಂದಿದ್ದಾಳೆ.

ಹೆಣದ ಮುಂದೆ ಇದ್ದಳು: ಮುಂಜಾನೆ ಸುಮಾರು 3 ಗಂಟೆ ಸಮಯದಲ್ಲಿ ಆರೋಪಿ ಲಕ್ಷ್ಮೀ, ಗಂಗಾರಾಮ್‌ ಪತ್ನಿ ಮತ್ತು ಮಕ್ಕಳನ್ನು ಹತ್ಯೆ ಮಾಡಿದ ಬಳಿಕ ಸುಮಾರು ಒಂದೂವರೆ ಗಂಟೆಗಳ ಕಾಲ ಅಲ್ಲೇ ಇದ್ದು, ಕೃತ್ಯವನ್ನು ಮರೆಮಾಚುವ ಉದ್ದೇಶದಿಂದ ಮೃತರ ಮೇಲೆ ಬ್ಲಾಂಕೇಟ್‌ ಹೊದಿಸಿ ಅವರ ಮನೆಯ ಅಲ್ಮೇರಾದಲ್ಲಿದ್ದ ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಕಳ್ಳತನಕ್ಕೆ ಬಂದವರ ಕೃತ್ಯವೆಂಬ ನಂಬಿಕೆ ಬರುವಂತೆ ಮಾಡಿದ್ದಾಳೆ ಎಂದು ಹೇಳಿದರು.

Advertisement

ಮುಂಜಾನೆ 4.30ರ ಸಮಯದಲ್ಲಿ ತನ್ನ ರಕ್ತಸಿಕ್ತ ಬಟ್ಟೆಗಳ ಮೇಲೊಂದು ಬಟ್ಟೆಯನ್ನು ಸುತ್ತಿಕೊಂಡು ಮನೆಯಿಂದ ಹೊರ ಹೋಗಿದ್ದಾಳೆ. ಹೋಗುವ ವೇಳೆ ತಾನು ಧರಿಸಿದ್ದ ಬಟ್ಟೆಗಳನ್ನು ಬೇರೆಡೆ ಇಟ್ಟು, ನಂತರ ಯಾವುದೋ ವಾಹನದಲ್ಲಿ ತನ್ನ ಗ್ರಾಮ ಸೇರಿಕೊಂಡಿದ್ದಾಳೆ ಎಂದು ಹೇಳಿದರು.

ಸುತ್ತಿಗೆ ವಶ: ಗ್ರಾಮದ ಕೋಳಿ ಅಂಗಡಿಯಲ್ಲಿ ಪಡೆದಿದ್ದ ಮಾಂಸ ಕತ್ತರಿಸುವ ಮಚ್ಚನ್ನು ಸ್ವತ್ಛಗೊಳಿಸಿ ಅಂಗಡಿಯವರಿಗೆ ವಾಪಸ್‌ ನೀಡಿದ್ದಾಳೆ. ಸುತ್ತಿಗೆಯನ್ನು ಬಿಸಾಡಿದ್ದಳು. ಅದನ್ನೂ ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಪೊಲೀಸ್‌ ವಶಕ್ಕೆ: ಪ್ರಕರಣದಲ್ಲಿ ಮತ್ತೆ ಇನ್ನು ಯಾರಾದರೂ ಭಾಗಿಯಾಗಿದ್ದಾರೆಯೇ, ಇದರಲ್ಲಿ ಆರೋಪಿ ಲಕ್ಷ್ಮೀಯ ಗಂಡ ಮತ್ತು ಮೃತ ಲಕ್ಷ್ಮೀಯ ಗಂಡ ಗಂಗಾರಾಮ್‌ ಪಾತ್ರವೇನು ಸೇರಿದಂತೆ ವಿವಿಧ ದೃಷ್ಟಿಕೋನದಲ್ಲಿ ತನಿಖೆ ಮುಂದುವರಿಸಲಾಗಿದೆ. ಆರೋಪಿಯನ್ನು ಮಂಗಳವಾರ ಬಂ ಧಿಸಿ ವಿಚಾರಣೆ ನಡೆಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ, ನಂತರ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್‌ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ಪ್ರಕರಣವನ್ನು ಬೇಧಿಸುವ ಸಲುವಾಗಿ ಶ್ರೀರಂಗಪಟ್ಟಣ ಡಿವೈಎಸ್ಪಿ ಎಸ್‌.ಸಂದೇಶ್‌ ಕುಮಾರ್‌ ನೇತೃತ್ವದಲ್ಲಿ 6 ತಂಡಗಳನ್ನು ರಚಿಸಲಾಗಿತ್ತು. ಸಿಪಿಐಗಳಾದ ವಿವೇಕಾನಂದ, ಡಿ.ಯೋಗೇಶ್‌, ಸುಮಾರಾಣಿ, ಟಿ.ಎಂ.ಪುನೀತ್‌, ಪಿಎಸ್‌ಐಗಳಾದ ಮಂಜುನಾಥ್‌, ಗಿರೀಶ್‌, ಲಿಂಗರಾಜು, ರೇಖಾ, ಎಚ್‌.ಎಸ್‌.ರಮೇಶ್‌ ಮತ್ತು ಸಿಬ್ಬಂದಿ ಭಾಗವಹಿಸಿದ್ದರು ಎಂದರು. ಶ್ರೀರಂಗಪಟ್ಟಣ ಡಿವೈಎಸ್ಪಿ ಎಸ್‌.ಸಂದೇಶ್‌ಕುಮಾರ್‌ ಗೋಷ್ಠಿಯ ಲ್ಲಿದ್ದರು.

ಲಕ್ಷ್ಮೀಯಿಂದ ತಪ್ಪೊಪ್ಪಿಗೆ : ತಡರಾತ್ರಿವರೆಗೂ ಗಂಗಾರಾಮ್‌ ಪತ್ನಿ ಲಕ್ಷ್ಮೀಯೊಂದಿಗೆ ವಾಗ್ವಾದ ನಡೆಸಿದ್ದಾಳೆ.ಬಳಿಕ ಮೊದಲೇ ನಿರ್ಧರಿಸಿದಂತೆ ಲಕ್ಷ್ಮೀಮತ್ತು ಮಕ್ಕಳು ಮಲಗಿದ ನಂತರ ಆರೋಪಿಲಕ್ಷ್ಮೀ ಸುತ್ತಿಗೆ ಹಾಗೂ ಮಚ್ಚಿನಿಂದ ಲಕ್ಷ್ಮೀಯ ಮೇಲೆ ಹಲ್ಲೆ ನಡೆಸಿದ್ದಾಳೆ.ಶಬ್ಧದಿಂದ ಮಕ್ಕಳು ಏಳುತ್ತಿದ್ದನ್ನು ಗಮನಿಸಿತನ್ನ ಗುರುತು ಹಿಡಿಯುತ್ತಾರೆಂಬ ಕಾರಣಕ್ಕೆ ಅವರ ಮೇಲೂ ಮಾರಣಾಂತಿಕ ಹಲ್ಲೆನಡೆಸಿ ಹತ್ಯೆಗೈದಿದ್ದಾಗಿ ವಿಚಾರಣೆ ವೇಳೆತಪ್ಪೊಪ್ಪಿಕೊಂಡಿದ್ದಾಳೆ ಎಂದು ವಿವರಿಸಿದರು.

ಹೆಣದ ಮುಂದೆ ರೋದಿಸಿದ್ದಳು :  ಮಕ್ಕಳು ಸೇರಿ ಐದು ಮಂದಿಯ ಹತ್ಯೆನಡೆದಿರುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಬೆಲವತ್ತಗ್ರಾಮದಿಂದ ಅವರನ್ನು ನೋಡುವರೀತಿಯಲ್ಲಿ ಬಂದು ಜನರ ಮಧ್ಯದಲ್ಲಿ ಕುಳಿತು ಏನೂ ತಿಳಿಯದವಳಂತೆ ರೋದಿಸಿದ್ದಳು. ಬಳಿಕ ಅಂತ್ಯಸಂಸ್ಕಾರ ಮಾಡುವವರೆಗೂ ಅಲ್ಲೇ ಇದ್ದು, ಎಲ್ಲವನ್ನೂ ಮುಗಿಸಿಕೊಂಡು ತನ್ನ ಗ್ರಾಮ ಸೇರಿಕೊಂಡಿದ್ದಳು.

Advertisement

Udayavani is now on Telegram. Click here to join our channel and stay updated with the latest news.

Next