Advertisement

ಶ್ರೀರಂಗ ಜೊತೆಗೆ ವಂದನಾರ್ಪಣೆ

02:54 PM Jul 20, 2022 | Team Udayavani |

ವೆಂಕಟ್‌ ಭಾರದ್ವಾಜ್‌ ನಿರ್ದೇಶನದ “ಶ್ರೀರಂಗ’ ಚಿತ್ರ ಜು. 22ಕ್ಕೆ ತೆರೆ ಕಾಣುತ್ತಿದೆ. “ಶ್ರೀರಂಗ’ ಚಿತ್ರದಲ್ಲಿ ಶಿನವ್‌ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದಲ್ಲಿ ವಂದನಾ ಶೆಟ್ಟಿ, ರಚನಾ ರಾಯ್ ಮತ್ತು ರೂಪ ರಾಯಪ್ಪ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

Advertisement

ಉಳಿದಂತೆ ವೆಂಕಟ್‌ ಭಾರದ್ವಾಜ್‌, ಗುರುರಾಜ್‌ ಹೊಸಕೋಟೆ, ಯಮುನಾ ಶ್ರೀನಿಧಿ, ಸಾಗರ್‌ ಜಯರಾಮ್, ಚಿಪ್ಸ್‌ ಬಾಬು, ಗಿರೀಶ್‌, ಮಣಿ ಮಾರನ್‌, ಮಾ. ಚಿರಾಯು ಚಕ್ರವರ್ತಿ, ತ್ರಿಧಾರ ಲಕ್ಷ್ಮಣ್‌, ಪುಶ್ಕಲ್‌ ಪ್ರೀತ್‌, ರಜತ್‌ ರಿತಿಕ್‌, ಐಶಾನಿ ಮತ್ತಿತರರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇನ್ನು ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಪರಿಚಯವಾಗಿರುವ ನಟಿ ವಂದನಾ ಶೆಟ್ಟಿ, “ಶ್ರೀರಂಗ’ ಚಿತ್ರದಲ್ಲಿ ಮೂವರು ನಾಯಕಿಯರ ಪೈಕಿ ಒಬ್ಬರಾಗಿ ಬೆಳ್ಳಿತೆರೆಗೆ ಪ್ರವೇಶಿಸುತ್ತಿದ್ದಾರೆ.

ತಮ್ಮ ಚೊಚ್ಚಲ ಚಿತ್ರದ ಬಗ್ಗೆ ಮಾತನಾಡುವ ವಂದನಾ ಶೆಟ್ಟಿ, “ಇದೊಂದು ಕಾಮಿಡಿ ಕಂ ಕ್ರೈಂ-ಥ್ರಿಲ್ಲರ್‌ ಶೈಲಿಯ ಸಿನಿಮಾ. ಮೂವರು ಹೀರೋಯಿನ್‌ಗಳ ಪೈಕಿ ನಾನು ಸ್ವಾತಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಯಾವಾಗಲೂ ಖುಷಿಯಾಗಿರುವಂಥ, ಚೆನ್ನಾಗಿ ಮಾತನಾಡಿಕೊಂಡು ಲೈವ್ಲಿಯಾಗಿರುವಂಥ ಪಾತ್ರ ನನ್ನದು. ಸಿನಿಮಾದ ಪ್ರತಿ ಪಾತ್ರಗಳಿಗೂ ಇರುವಂತೆ, ನನ್ನ ಪಾತ್ರಕ್ಕೂ ಅದರದ್ದೇ ಆದಪ್ರಾಮುಖ್ಯತೆ ಇದೆ. ನನ್ನ ರಿಯಲ್‌ ಲೈಫ್ಗೆ ತುಂಬಹತ್ತಿರವಿರುವಂಥ ಪಾತ್ರ ಇದಾಗಿದೆ. ನಿರ್ದೇಶಕ ವೆಂಕಟ್‌ ಭಾರದ್ವಾಜ್‌ ಆಡಿಷನ್‌ ಕೂಡ ಮಾಡದೆ ಈ ಪಾತ್ರಕ್ಕೆ ನನ್ನನ್ನು ಸೆಲೆಕ್ಟ್ ಮಾಡಿದರು’ ಎನ್ನುತ್ತಾರೆ.

“ಈಗಾಗಲೇ ರಿಲೀಸ್‌ ಆಗಿರುವ “ಶ್ರೀರಂಗ’ ಸಿನಿಮಾದ ಪೋಸ್ಟರ್‌, ಟ್ರೇಲರ್‌ ಎಲ್ಲದಕ್ಕೂ ಒಳ್ಳೆಯ ರೆಸ್ಪಾನ್ಸ್‌ಸಿಗುತ್ತಿದೆ. ಒಳ್ಳೆಯ ಸಿನಿಮಾದ ಮೂಲಕ ನಟಿಯಾಗಿ ಬಿಗ್‌ ಸ್ಕ್ರೀನ್‌ಗೆಎಂಟ್ರಿಯಾಗುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಸಿನಿಮಾದ ಬಗ್ಗೆ ಎಲ್ಲರೂ ನಿರೀಕ್ಷೆಯ ಮಾತುಗಳನ್ನಾಡುತ್ತಿದ್ದಾರೆ. ಅದರಂತೆಸಿನಿಮಾ ಕೂಡ ಆಡಿಯನ್ಸ್‌ಗೆ ಇಷ್ಟವಾಗುತ್ತದೆ’ ಎಂಬ ವಿಶ್ವಾಸದಮಾತುಗಳನ್ನಾಡುತ್ತಾರೆ ವಂದನಾ ಶೆಟ್ಟಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next