ನಾಯಕನಹಟ್ಟಿ: ಸಚಿವ ಬಿ. ಶ್ರೀರಾಮುಲು ಅವರ ಗನ್‌ಮ್ಯಾನ್ ಆಗಿದ್ದ ಪಾಪೇಶ ನಾಯಕ ಇದೀಗ ವೃತ್ತಿ ತ್ಯಜಿಸಿ ಜಿಪಂ ಚುನಾವಣೆಗೆ ಸ್ಪರ್ಧಿಸಲು ಅಣಿಯಾಗಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ 19 ವರ್ಷಗಳ ಕಾಲ ಕಾರ್ಯನಿರ್ವಹಿಸಿರುವ ಪಾಪೇಶ್, ಇತ್ತೀಚೆಗೆ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಸಚಿವ ಬಿ. ಶ್ರೀರಾಮುಲು ಅವರಿಗೆ ಗನ್‌ಮ್ಯಾನ್ ಆಗಿ ಸುದೀರ್ಘ ಅವಧಿಗೆ ಕಾರ್ಯ ನಿರ್ವಹಿಸಿದ್ದಾರೆ.ಚಿತ್ರದುರ್ಗದ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷಕ್ಕೆ ಅ ಧಿಕೃತವಾಗಿ ಸೇರ್ಪಡೆಗೊಂಡರು.
ಸಚಿವ ಬಿ. ಶ್ರೀರಾಮುಲು, ಬಿಜೆಪಿ ಜಿಲ್ಲಾಧ್ಯಕ್ಷ ಮುರಳಿ, ಮುಖಂಡರಾದ ಸಿದ್ದೇಶ್ ಯಾದವ್, ಜಯಪಾಲಯ್ಯ ಸೇರಿದಂತೆ ನಾನಾ ಮುಖಂಡರು
ಅವರಿಗೆ ಬೆಂಬಲವಾಗಿ ನಿಂತಿದ್ದಾರೆ.
ಇದನ್ನೂ ಓದಿ:ಕಾಳಸರ್ಪದೋಷ – ನಾಗದೋಷ ಎರಡೂ ಒಂದೇ ?
ಶೀಘ್ರದಲ್ಲಿ ಜರುಗಲಿರುವ ಜಿಪಂ ಚುನಾವಣೆಗಳ ಮೇಲೆ ಕಣ್ಣಿಟ್ಟಿರುವ ಪಾಪೇಶ ನಾಯಕ, ದೊಡ್ಡ ಉಳ್ಳಾರ್ತಿ ಜಿಪಂ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ಮೊಳಕಾಲ್ಮೂರು ತಾಲೂಕಿನ ಬೊಮ್ಮನಹಳ್ಳಿ ಸೇರಿದಂತೆ ಮೊಳಕಾಲ್ಮೂರು ಕ್ಷೇತ್ರದಲ್ಲಿ ಸ್ನೇಹಿತರು, ಸಂಬಂ ಕರನ್ನು ದೊಡ್ಡ ಪ್ರಮಾಣದಲ್ಲಿ ಹೊಂದಿದ್ದಾರೆ. ಜತೆಗೆ ಸಚಿವ ಬಿ. ಶ್ರೀರಾಮುಲು ಅಭಿಮಾನಿಗಳ ವಿಶ್ವಾಸ ಗಳಿಸಿದ್ದಾರೆ. ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಿ. ಶ್ರೀರಾಮುಲು ಜಯ ಸಾಧಿಸಿದ ನಂತರ ಪೂರ್ಣ ಪ್ರಮಾಣದಲ್ಲಿ ಅವರ ಗನ್‌ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಬಿ. ಶ್ರೀರಾಮುಲು ಆರೋಗ್ಯ ಸಚಿವರಾದ ನಂತರ ಪಾಪೇಶ್ ನಾಯಕ ಪೊಲೀಸ್ ಇಲಾಖೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಅವರು ಕೇವಲ ಗನ್ ಮ್ಯಾನ್ ಆಗಿರಲಿಲ್ಲ. ಮೊಳಕಾಲ್ಮೂರು ಕ್ಷೇತ್ರದ ಎಲ್ಲ ಕೆಲಸ-ಕಾರ್ಯಗಳು ಅವರಿಂದಲೇ ನಿರ್ಧಾರವಾಗುತ್ತಿದ್ದವು.
ಸಚಿವರ ವೇಳಾಪಟ್ಟಿ, ಕಾರ್ಯಕ್ರಮ, ಭೇಟಿ, ಅಭಿವೃದ್ಧಿ ಯೋಜನೆಗಳಿಗೆ ಹಣ ಬಿಡುಗಡೆ ಸೇರಿದಂತೆ ಎಲ್ಲ ವಿಷಯಗಳನ್ನು ಪಾಪೇಶ್
ನಿರ್ಧರಿಸುತ್ತಿದ್ದರು. ವಿರೋಧ ಪಕ್ಷಗಳು ಮೊಳಕಾಲ್ಮೂರು ಕ್ಷೇತ್ರದಲ್ಲಿ ಗನ್‌ಮ್ಯಾನ್ ಆಡಳಿತ ನಡೆಯುತ್ತಿದೆ ಎನ್ನುವಷ್ಟರ ಮಟ್ಟಿಗೆ ಅವರ ಪ್ರಭಾವ ಹೆಚ್ಚಾಗಿತ್ತು. ಇದೀಗ ಜಿಪಂ ಚುನಾವಣೆಗೆ ಸ್ಪರ್ಧಿಸಲು ಸಿದ್ಧವಾಗಿದ್ದಾರೆ.