Advertisement

ಚುನಾವಣಾ ಪ್ರಚಾರ ವೇಳೆ ಪಕ್ಷೇತರ ಅಭ್ಯರ್ಥಿಗೆ ಹೂಮಾಲೆ ಹಾಕಿ ಪೇಚಿಗೆ ಸಿಲುಕಿದ ಶ್ರೀರಾಮುಲು

03:21 PM Dec 21, 2021 | Team Udayavani |

ಗದಗ : ಗದಗ-ಬೆಟಗೇರಿ ನಗರಸಭೆ ಚುನಾವಣಾ ಪ್ರಚಾರದ ನಡೆಸಿದ ಸಾರಿಗೆ ಸಚಿವ ಶ್ರೀರಾಮುಲು ಅವರು ವಾರ್ಡ್‌ವೊಂದರಲ್ಲಿ ಪಕ್ಷೇತರ ಅಭ್ಯರ್ಥಿಗೆ ಹೂಮಾಲೆ ಹಾಕಿದ್ದು ಚರ್ಚೆಗೆ ಗ್ರಾಸವಾಗಿದೆ.

Advertisement

ನಗರದ 15ನೇ ವಾರ್ಡ್‌ನಲ್ಲಿ ಸೋಮವಾರ ಸಂಜೆ ಚುನಾವಣಾ ಪ್ರಚಾರ ನಡೆಸಿದ ಸಚಿವ ಶ್ರೀರಾಮುಲು, ಪಕ್ಷದ ಅಭ್ಯರ್ಥಿ ಚಂದ್ರು ತಡಸದ ಅವರ ಪರ ಮತಯಾಚಿಸಿದರು. ಇದೇ ವೇಳೆ ಅದೇ ವಾರ್ಡ್‌ನ ಪಕ್ಷೇತರ ಅಭ್ಯರ್ಥಿ ವಿಶ್ವನಾಥ ಶೀರಿ ಆಗಮಿಸಿದ್ದು,ಈಹಿಂದೆ ರಾಮುಲು ಅವರು ಸಂಸದರಾಗಿದ್ದ ಸಂದರ್ಭದಲ್ಲಿ ರಾಮುಲು ಅವರೊಂದಿಗೆ ತೆಗೆಸಿಕೊಂಡಿದ್ದ ಫೋಟೋ, ಡಾ| ಅಂಬೇಡ್ಕರ್‌ ಅವರ ಪುಟ್ಟ ಪ್ರತಿಮೆ ಹಾಗೂ ಕೆಲ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದರು. ಅದಕ್ಕೆ ಮೆಚ್ಚುಗೆ ಸೂಚಿಸಿದ ಶ್ರೀರಾಮುಲು, ಏಕಾಏಕಿ ಹೂವಿನ ಹಾರ ಹಾಕಿದ್ದಾರೆ.

ರಾಮುಲು ಅವರ ಈ ನಡೆಯಿಂದ ಪಕ್ಷದ ಅಭ್ಯರ್ಥಿ ಹಾಗೂ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ. ಬಳಿಕ ಶೀರಿ ಪಕ್ಷೇತರ ಅಭ್ಯರ್ಥಿ ಎಂಬುದನ್ನು ತಿಳಿದ ಸಚಿವ ರಾಮುಲು ಪೇಚಿಗೆ ಸಿಲುಕಿದರು ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಸ್ವತಂತ್ರ ಅಭ್ಯರ್ಥಿ ವಿಶ್ವನಾಥ ಶೀರಿ, ಅವರೊಟ್ಟಿಗೆ ತೆಗೆಸಿಕೊಂಡಿದ್ದ ನನ್ನ ಫೋಟೋ, ಅಂಬೇಡ್ಕರ್‌ ಪ್ರತಿಮೆಯನ್ನು ಅಭಿಮಾನದಿಂದ ನೀಡಿದ್ದೇನೆ. ಇಷ್ಟಕ್ಕೆ ರಾಜಕೀಯ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ : ವಜಾಗೊಂಡ ಸಾರಿಗೆ ನೌಕರರ ಮರು ನೇಮಕ: ಸಿಹಿ ಸುದ್ದಿ ನೀಡಿದ ಸಚಿವ ಶ್ರೀರಾಮುಲು

Advertisement

Udayavani is now on Telegram. Click here to join our channel and stay updated with the latest news.

Next