Advertisement
ಚಕ್ರವರ್ತಿ ದಶರಥನು ರಾಜ್ಯಭಾರವನ್ನು ಹಿರಿಯ ಪತ್ನಿ ಕೌಸಲ್ಯಾ ದೇವಿಯ ಪುತ್ರನಾದ ಶ್ರೀ ರಾಮಚಂದ್ರನಿಗೆ ವಹಿಸಿಕೊಡಲು ಉತ್ಸುಕನಾಗಿ ಮೂಹೂರ್ತ ನಿಗದಿಪಡಿಸುತ್ತಾನೆ. ವಿಚಾರ ತಿಳಿದ ಕೈಕೇಯಿಯ ದಾಸಿ ಮಂಥರೆಯು ಕೈಕೇಯಿಯ ಮನಸ್ಸನ್ನು ಕೆಡಿಸಿ ಹುಳಿ ಹಿಂಡುತ್ತಾಳೆ.ಹೀಗೆ ಮಂಥರೆಯಿಂದ ಮನ ಪರಿವರ್ತನೆಗೊಂಡ ಕೈಕೇಯಿಯು ಪಟ್ಟಾಭಿಷೇಕದ ದಿನ, ಸಮಾರಂಭಕ್ಕೆ ಹೋಗದೆ ತನ್ನ ಸೌಂದರ್ಯವನ್ನು ಏಕಾಏಕಿ ಅಸ್ತವ್ಯಸ್ತಗೊಳಿಸಿ ಶೋಕಾಗಾರದಲ್ಲಿ ಮಲಗಿದ್ದ ಸಂದರ್ಭದಲ್ಲಿ ತನ್ನನ್ನು ಕಾಣಲು ಬಂದ ದಶರಥನಲ್ಲಿ ಅಂದು ಕೊಟ್ಟ ನ್ಯಾಸವಾಗಿ ಉಳಿದಿರುವ ಎರಡು ವರವನ್ನು ಕೇಳಲು ಇದೀಗ ಬಯಸಿದ್ದು ಆ ಪ್ರಕಾರ ನಿಗದಿತ ಮೂಹೂರ್ತದಲ್ಲಿ ತನ್ನ ಮಗನಾದ ಭರತನಿಗೆ ಪಟ್ಟ ಕಟ್ಟಬೇಕು ಹಾಗೂ ರಾಮನನ್ನು ಕಾಡಿಗಟ್ಟಬೇಕು ಎಂದು ಹೇಳುತ್ತಾಳೆ.ಈ ಅನಿರೀಕ್ಷಿತ ಆಘಾತದಿಂದ ದುಃಖೀತನಾಗಿ ಮರುಗುತ್ತಿದ್ದ ತಂದೆಯನ್ನು ರಾಮನು ಸಮಾಧಾನಪಡಿಸಿ, ಪತ್ನಿ ಸೀತೆ, ತಮ್ಮ ಲಕ್ಷ್ಮಣನೊಂದಿಗೆ ಕಾಡಿಗೆ ಹೊರಡಲು ಸಿದ್ಧವಾಗುತ್ತಾನೆ.ಹೀಗೆ ಮಂಥರೆಯ ಕುತಂತ್ರದಿಂದ ಶ್ರೀ ರಾಮ ಪಟ್ಟಾಭಿಷೇಕ ಮುರಿದು ಬೀಳುತ್ರದೆ.
ಕೈಕೇಯಿಯಾಗಿ ತಾರಾನಾಥ ವರ್ಕಾಡಿ ಮತ್ತು ದಶರಥನಾಗಿ ಶಂಭು ಶರ್ಮ ವಿಟ್ಲರವರ ಸಂವಾದ ದೀರ್ಘಕಾಲದವರೆಗೆ ನಡೆದು ಪ್ರಬುದ್ಧತೆ ಮೆರೆಯಿತು. ನ್ಯಾಸವಾಗಿ ಉಳಿದುಕೊಂಡಿದ್ದ ಮತ್ತೆರಡು ವರಗಳನ್ನು ಅನ್ಯಾಯವಾದಾಗ ತಾನು ಕೇಳುವುದು ತನ್ನ ಹಕ್ಕು,ಕೊಡುವುದು ಅದು ನಿಮ್ಮ ಔದಾರ್ಯವಲ್ಲ ,ಬದ್ಧತೆ ಎಂದು ಕೈಕೇಯಿ ಕೆಣಕಿದುದು ಮಾರ್ಮಿಕವಾಗಿತ್ತು.ಮಂಗಳಕರವಾದ ವಾತಾವರಣದಲ್ಲಿ ನಮ್ಮ ಹೃದಯವನ್ನು ಕೂಡ ಮಂಗಳಕರವಾಗಿ ಅಂತರಂಗದಲ್ಲಿ ಶುದ್ಧವನ್ನಿಟ್ಟುಕೊಳ್ಳಬೇಕು. ಅಂತಹ ಅಂತರಂಗ ಶುದ್ಧಿಯಿಂದ ಏನೂ ಬೇಕಾದರೂ ಕೇಳು ಕೊಡುತ್ತೇನೆ.ಅದು ನಿನ್ನದಾಯಿತೆಂದು ತಿಳಿ ಎಂದು ಅಷ್ಟೇ ಮಾರ್ಮಿಕವಾದ ನುಡಿ ದಶರಥನಾಗಿ ಶಂಭು ಶರ್ಮಾರ¨ªಾಗಿತ್ತು.ಶ್ರೀ ರಾಮನಾಗಿ ಯುವ ಅರ್ಥದಾರಿ ಸುನಿಲ್ ಹೊಲಾಡು ದಶರಥನನ್ನು ಸಮಾಧಾನಪಡಿಸಿದ ರೀತಿ, ಕೈಕೆಯಿಯೊಂದಿಗಿನ ಸಂವಾದ ಮರ್ಯಾದಾ ಪುರುಷೋತ್ತಮನ ದಾಟಿಯಲ್ಲಿ ಅರ್ಥ ಹೇಳಿ ಅರ್ಥಗಾರಿಕೆಯಲ್ಲಿ ಉತ್ತಮ ಭವಿಷ್ಯವಿದೆ ಎಂದು ಶ್ರುತ ಪಡಿಸಿದರು.ಲಕ್ಷ್ಮಣನಾಗಿ ಹಿರಿಯ ಅರ್ಥದಾರಿ ದಾಮೋದರ ಸಫಲಿಗರವರು ತಮಗೆ ಒದಗಿ ಬಂದ ಎರಡು ಪದ್ಯಗಳಲ್ಲಿ ಅರ್ಥ ಪ್ರಬುದ್ಧತೆ ಮೆರೆದರು.ಉತ್ತಮ ರಸದೌತಣ ಒದಗಿಸಿದ ಈ ಕಥಾನಕದ ಹಿಮ್ಮೇಳದಲ್ಲಿ ಮೊದಲಾರ್ಧದಲ್ಲಿ ಭಾಗವತರಾಗಿ ಗಿರೀಶ್ ರೈ ಕಕ್ಕೆಪದವು,ಅನಂತರದ ಮಾಧವ ಆಚಾರ್ಯ ಸಂಪಿಗೆ ಸುಮಧುರವಾಗಿ ಹಾಡಿದರು.ಚೆಂಡೆಯಲ್ಲಿ ರವಿರಾಜ್ ಜೈನ್,ಮದ್ದಳೆಯಲ್ಲಿ ಆನಂದ ಗುಡಿಗಾರ ಮತ್ತು ಶ್ರವಣ ಕುಮಾರ್‌ರವರು ಸಾಥ್ ನೀಡಿದರು.
Related Articles
Advertisement