Advertisement
ನವಿಮುಂಬಯಿ ಮತ್ತು ಮುಂಬಯಿಯ ಆಹ್ವಾನಿತ 17 ವಿವಿಧ ಭಜನ ತಂಡಗಳಿಂದ 12 ಗಂಟೆಗಳ ಕಾಲ ಕುಣಿತ ಭಜನೆ ನೆರವೇರಿತು. ಶ್ರೀರಾಮ ನವಮಿ ಪ್ರಯುಕ್ತ ಭವನದಲ್ಲಿ ಸ್ಥಾಪಿಸಲ್ಪಟ್ಟ ಶ್ರೀರಾಮ ದೇವಸ್ಥಾನವನ್ನು ಹೂವಿನಿಂದ ಅಲಂಕರಿಸಲಾಗಿತ್ತು. ಬೆಳಗ್ಗೆ 8ಕ್ಕೆ ಶ್ರೀರಾಮ ದೇವರ ಪೂಜೆ ನಡೆಸಿ ಬಳಿಕ ಶಂಖ, ಜಾಗಟೆ, ಚಂಡೆ, ಭಜನೆಯೊಂದಿಗೆ ಮಂಡಳಿಯ ಮುಖ್ಯಸ್ಥ ನ್ಯಾಯವಾದಿ ಪ್ರಭಾಕರ ದೇವಾಡಿಗ, ಅರ್ಚಕ ಭೋಜ ದೇವಾಡಿಗ, ಹಿರಿಯ ಭಜಕ ಶಂಕರ ದೇವಾಡಿಗ, ಚಂದ್ರಶೇಖರ್ ದೇವಾಡಿಗ ಮೊದಲಾದವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
Related Articles
Advertisement
ಲತಾ ಮತ್ತು ಆನಂದ್ ಶೇರಿಗಾರ್ ಖಾರ್‌ಘರ್, ಸರಸ್ವತಿ ಮತ್ತು ಭೋಜ ದೇವಾಡಿಗ ವಾಶಿ, ಪೂರ್ಣಿಮಾ ಮತ್ತು ದಯಾನಂದ ದೇವಾಡಿಗ ನೆರೂಲ…, ಶುಭಾವತಿ ಮತ್ತು ಚಂದ್ರಶೇಖರ ದೇವಾಡಿಗ ಉಳ್ವೆ, ವಿಟuಲ್ ದೇವಾಡಿಗ ಐರೋಲಿ, ಸುರೇಶ್ ದೇವಾಡಿಗ ಬಾಕೂìರು, ಸುರೇಶ್ ದೇವಾಡಿಗ ಹಳೆಯಂಗಡಿ, ಶಂಕರ್ ದೇವಾಡಿಗ ಐರೋಲಿ, ಶಾಂತಾ ಪಿ. ದೇವಾಡಿಗ, ಸುಂದರಿ ದೇವಾಡಿಗ, ಗೀತಾ ಮತ್ತು ಹರೀಶ್ ದೇವಾಡಿಗ, ಕಲಾ ಜಿ. ಶೇರಿಗಾರ್, ಅಂಬಿಕಾ ಮತ್ತು ಜನಾರ್ದನ ದೇವಾಡಿಗ, ಆಶಾ ದೇವಾಡಿಗ ಸಾನಾ³ಡಾ, ಶಾಂತಾ ದೇವಾಡಿಗ ನೆರೂಲ…, ತನ್ವಿ ಡಿ. ದೇವಾಡಿಗ, ಕ್ಷಿತಿ ಜೆ. ದೇವಾಡಿಗ, ಶ್ವೇತಾ ದೇವಾಡಿಗ, ರಮೇಶ್ ಐರೋಲಿ, ರವಿಕಲಾ ದೇವಾಡಿಗ, ವನಿತಾ ಆರ್. ದೇವಾಡಿಗ, ಆಶಾ. ದೇವಾಡಿಗ ನೆರೂಲ…, ಅಶ್ವಿನಿ ಮತ್ತು ಕರಣ್ ದೇವಾಡಿಗ ಐರೋಲಿ, ಶಾಂಭವಿ ದೇವಾಡಿಗ ವಾಶಿ, ಪ್ರಿಯಾ ದೇವಾಡಿಗ ಖಾರ್‌ಘರ್, ಸಚಿನ್ ದೇವಾಡಿಗ ಐರೋಲಿ, ಜಾರಪ್ಪ ಮೊಲಿ ಸಹಿತ ಅನೇಕ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಪ್ರಭಾಕರ್ ದೇವಾಡಿಗ ಅವರು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಕುಣಿತ ಭಜನೆ : ಅತಿಥಿ ತಂಡಗಳಾದ ಶ್ರೀ ಚಾಮುಂಡೇಶ್ವರೀ ಭಜನ ಮಂಡಳಿ ಸಾಕಿನಾಕಾ, ಶ್ರೀ ಅಯ್ಯಪ್ಪ ಸೇವಾ ಭಜನ ಮಂಡಳಿ ಐರೋಲಿ, ಜೈ ಅಂಬೆ ಚಾರಿಟೆಬಲ್ ಟ್ರಸ್ಟ್ ಸಾನ್‌ಪಾಡಾ, ಬಿಎಸ್‌ಕೆಬಿ ಗೋಕುಲ ಭಜನ ಮಂಡಳಿ ಸಯನ್, ಶ್ರೀ ಶನೀಶ್ವರ ಭಜನ ಮಂಡಳಿ ನೆರೂಲ್, ಶ್ರೀ ಗಣೇಶ ಅಯ್ಯಪ್ಪ ದುರ್ಗಾ ಕ್ಷೇತ್ರ ನೆರೂಲ್, ಗುರುವಂದನ ಭಜನ ಮಂಡಳಿ, ಕುಲಾಲ ಸಂಘ ಇವರು ತಮ್ಮ ಪಾರಂಪರಿಕ ಭಜನೆ ಮತ್ತು ಕುಣಿತ ಭಜನೆ ಪ್ರದರ್ಶಿಸಿದರು.
ಭಜನ ಕಾರ್ಯಕ್ರಮ :
ಸಂಘದ 10 ಸ್ಥಳೀಯ ಸಮನ್ವಯ ಸಮಿತಿಗಳ ಹತ್ತು ಭಜನ ತಂಡಗಳ ಅಧ್ಯಕ್ಷರಾದ ಅಶೋಕ್ ದೇವಾಡಿಗ ಡೊಂಬಿವಲಿ, ಬಾಲಚಂದ್ರ ದೇವಾಡಿಗ ಸಿಟಿ, ಯೋಗೇಶ್ ಎಸ್. ದೇವಾಡಿಗ ಅಸಲ್ಪಾ, ಭಾಸ್ಕರ್ ದೇವಾಡಿಗ ಬೊರಿವಲಿ, ಎಂ. ಸಿ. ಹೆಮ್ಮಾಡಿ ಮೀರಾರೋಡ್, ಯೋಗೇಶ್ ಶ್ರೀಯಾನ್ ಜೋಗೇಶ್ವರಿ, ವಿಶ್ವನಾಥ ಪಿ. ದೇವಾಡಿಗ ಭಾಂಡೂಪ್, ಪ್ರವೀಣ್ ಸಾಲ್ಯಾನ್ ಥಾಣೆ, ಯಶವಂತ ದೇವಾಡಿಗ ಚೆಂಬೂರು ತಂಡಗಳಿಂದ ಭಜನ ಕಾರ್ಯಕ್ರಮ ನೆರವೇರಿತು.