Advertisement

ದಾಂಪತ್ಯ ಪ್ರೀತಿ

10:21 AM Feb 26, 2020 | mahesh |

ಶ್ರೀನಿವಾಸ ರಾಮಾನುಜನ್‌, ಅಂದಿನ ಕಾಲದ ಭಾರತೀಯ ಪದ್ಧತಿಯಂತೆ ಇನ್ನೂ ಕನ್ಯೆಯರಾಗಿದ್ದ 9 ವರ್ಷದ ಪುಟ್ಟ ಹುಡುಗಿ ಜಾನಕಿಯನ್ನು ಮದುವೆಯಾದವರು. ಆಗ, ರಾಮಾನುಜನ್‌ ರಿಗೆ 22 ವರ್ಷ ವಯಸ್ಸು. ಅವರ ತಾಯಿ ಕೋಮಲತ್ತಮ್ಮಾಳ್‌, ಹೆಸರಲ್ಲಷ್ಟೇ ಕೋಮಲರಾಗಿದ್ದವರು. ಜಾನಕಿಯನ್ನು ಮನೆ ತುಂಬಿಸಿಕೊಂಡ ಮೇಲೆ ತನ್ನ ಅತ್ತೆಯ ದರ್ಪವನ್ನೆಲ್ಲ ಆ ಹುಡುಗಿಯ ಮೇಲೆ ತೋರಿಸುತ್ತಲೇ ಇದ್ದರು. ರಾಮಾನುಜನ್‌ ಎದುರಿರುವಾಗ ತುಂಬ ಪ್ರೀತಿಯಿದೆ ಎನ್ನುವಂತೆ ವರ್ತಿಸುತ್ತ, ಅವರಿಲ್ಲದಾಗ ಜೋರಾಗಿ ಗದರಿಸುತ್ತ ಒಂದು ರೀತಿಯಲ್ಲಿ ಆ ಕಾಲದ ಟಿಪಿಕಲ್‌ ಅತ್ತೆಯಾಗಿ ಬದುಕುತ್ತಿದ್ದವರು ಕೋಮಲತ್ತಮ್ಮಾಳ್‌. ಕಾಲಕ್ರಮೇಣ ಈ ಇಬ್ಬಗೆಯ ನೀತಿಯ ಪರಿಚಯ ರಾಮಾನುಜನ್‌ರಿಗೆ ಆಯಿತು. ಆದರೆ, ತನ್ನ ತಾಯಿಯನ್ನು ಧಿಕ್ಕರಿಸಿ ಹೋಗುವಷ್ಟು ಕಟುವಾಗಿರದ ರಾಮಾನುಜನ್‌ ಹೆಂಡತಿಯನ್ನು ತುಂಬ ಪ್ರೀತಿಸುತ್ತಿದ್ದರು. ಈ ಅತ್ತೆ-ಸೊಸೆಯರು ಒಡಕಲು ಸಂಬಂಧ ಎಂದಾದರೂ ಸರಿಯಾದೀತಪ್ಪ ಎಂದು ಮನಸ್ಸಲ್ಲೇ ವ್ಯಾಕುಲರಾಗಿ ಯೋಚಿಸುತ್ತಲೂ ಇದ್ದರೇನೋ.

Advertisement

ರಾಮಾನುಜನ್‌ ಇಂಗ್ಲೆಂಡ್‌ಗೆ ಹೋಗಬೇಕಾಗಿ ಬಂದಾಗ, ಅವರಿಗೆ ತನ್ನ ಪತ್ನಿಯನ್ನು ಅಗಲಿರಬೇಕಲ್ಲ ಎನ್ನುವ ಚಿಂತೆಯೇ ಎಲ್ಲಕ್ಕಿಂತ ಹೆಚ್ಚು ದುಃಖ ತಂದದ್ದು. ಅಲ್ಲದೇ, ತಾನಿರದಾಗ ತನ್ನ ತಾಯಿ, ಪತ್ನಿಯನ್ನು ಬೆಂಡೆತ್ತುತ್ತಾರೆನ್ನುವ ಸತ್ಯವೂ ಅವರಿಗೆ ತಿಳಿದಿತ್ತು. ಹೊರಡಲು ಒಂದು ವಾರ ಇರುವಾಗಲೇ ಅವರು ಹಡಗು ಮದರಾಸಿನ ಬಂದರು ಕಟ್ಟೆಗೆ ಬಂದು ನಿಂತಿತ್ತು. ಬಂದರಿನಲ್ಲಿ ಕೆಲಸ ಮಾಡುತ್ತಿದ್ದವರಾದ್ದರಿಂದ ರಾಮಾನುಜನ್‌ರಿಗೆ ಲ್ಲಿಗೆ ಒಳ ಹೋಗುವ ಅನುಮತಿ ಇತ್ತು. ಅವರು ಒಂದು ಜಾನಕಿಯನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಹಡಗಿನ ಒಳಗನ್ನೆಲ್ಲ ತೋರಿಸಿದರು. ತಾನು ಎಲ್ಲಿ ಮಲಗುತ್ತೇನೆ, ಎಲ್ಲಿ ಊಟಕ್ಕೆ ಕೂರುತ್ತೇನೆ ಎಂಬ ಎಲ್ಲ ಸಣ್ಣ ಪುಟ್ಟ ಮಾಹಿತಿಗಳನ್ನೂ ಹಡಗೆಂಬ ಹೊಸ ಪ್ರಪಂಚವನ್ನು ಬೆಕ್ಕಸ ಬೆರಗಾಗಿ ನೋಡುತ್ತಿದ್ದ ಜಾನಕಿಗೆ ಕೊಟ್ಟರು. ಕೊನೆಗೆ ಆಕೆಯ ತೋಳು ಹಿಡಿದು, ” ಜಾನಕಿ, ನೀನು ಇಲ್ಲಿರುವಾಗ ನಾನು ಹೇಗೆ ಅಷ್ಟು ದೂರದ ವಿದೇಶಕ್ಕೆ ಪ್ರವಾಸ ಹೊರಡಲಿ? ನಿನ್ನ ಮುಖ ನೋಡುತ್ತಿದ್ದರೆ ನಾನು ಹೊರಡುವ ದಿನ ನೀನು ಇಲ್ಲಿ ಇರಲೇಬಾರದು’ ಎಂದು ಗದ್ಗಿತರಾಗಿ ನುಡಿದರು. ಅಷ್ಟೇ ಅಲ್ಲ, ಹಡಗು ಹೊರಡುವ ಎರಡು ದಿನ ಮುಂಚೆಯೇ ಆಕೆಯನ್ನು ದೂರದ ತವರು ಮನೆಗೆ ಕಳುಹಿಸಿಕೊಟ್ಟರು.

ರೋಹಿತ್‌ ಚಕ್ರತೀರ್ಥ

Advertisement

Udayavani is now on Telegram. Click here to join our channel and stay updated with the latest news.

Next