Advertisement

“ಶ್ರೀನಿವಾಸ ಪ್ರಸಾದರನ್ನು ಸೋಲಿಸುವುದೇ ನಮ್ಮೆಲ್ಲರ ಗುರಿ’

12:47 PM Feb 13, 2017 | Team Udayavani |

ನಂಜನಗೂಡು: ಮಾಜಿ ಸಚಿವ ವಿ. ಶ್ರೀನಿವಾಸ್‌ ಪ್ರಸಾದರನ್ನು ಸೋಲಿಸುವುದೇ ನಮ್ಮೆಲ್ಲರ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಭಾನುವಾರ ಗುಂಡ್ಲುಪೇಟೆಗೆ ತೆರಳಬೇಕಾಗಿದ್ದ ಮುಖ್ಯಮಂತ್ರಿಗಳು ನಗರದ ವಿಶ್ವಕರ್ಮ ಸಂಘದ ಜಿಲ್ಲಾಧ್ಯಕ್ಷ, ಗುತ್ತಿಗೆದಾರ ನಂದಕುಮಾರ್‌ ಮನೆಗೆ ಭೇಟಿ ನೀಡಿ ಅಲ್ಲಿ ಸೇರಿದ್ದ ಜನತೆಯನ್ನುದ್ದೇಶಿಸಿ ಮಾತನಾಡಿದರು.

Advertisement

ಚುನಾವಣೆ ಬೇಕಾಗಿರಲಿಲ್ಲ. ನಾವೇನು ಶ್ರೀನಿವಾಸ್‌ ಪ್ರಸಾದರನ್ನು ಶಾಸಕತ್ವಕ್ಕೆ ರಾಜೀನಾಮೆ ನೀಡಿ ಎಂದು ಹೇಳಿರಲಿಲ್ಲ. ಪಕ್ಷದಿಂದಲೂ ಹೊರ ಹಾಕಿರಲಿಲ್ಲ ಎಂದ ಮುಖ್ಯಮಂತ್ರಿಗಳು, ಯಾರ ಪಾಲಿಗೂ ಬೇಡವಾದ ಚುನಾವಣೆಯನ್ನು ತಂದಿಟ್ಟವರು ಪ್ರಸಾದ್‌ ಎಂದು ದೂಷಿಸಿದರು.

ಈ ಮಹಾಶಯರನ್ನು ಮಂತ್ರಿ ಮಾಡುವಾಗ ಬಿಜೆಪಿಯವರು ಎಲ್ಲಿದ್ದರು? ಮಾಡಿದ್ದೂ ನಾವೇ ಕೈ ಬಿಟ್ಟಿದ್ದೂ ನಾವೇ. ಆದರೆ ಇವರು ಶಾಸಕತ್ವ ಹಾಗೂ ಪಕ್ಷಕ್ಕೆ ರಾಜೀನಾಮೆ ಇತ್ತು ಈಗ ಬಿಜೆಪಿ ಸೇರಿದ್ದಾರೆ ಎಂದು ಕಿಡಿಕಾರಿದರು. ಹಾಗಂತ ಯಾರೂ ಅವರನ್ನು ಬಯ್ಯಬೇಡಿ. ಅವರ ಆರೋಪಗಳಿಗೆಲ್ಲ ಅವರನ್ನು ಸೋಲಿಸುವುದರ ಮುಖಾಂತರವೇ ಉತ್ತರ ನೀಡೋಣ. ಅದೇ ಈಗ ತನ್ನ ಹಾಗೂ ನಿಮ್ಮೆಲ್ಲರ ಗುರಿಯಾಗಬೇಕಿದೆ ಎಂದರು.

ಗುಂಡ್ಲುಪೇಟೆ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಘೋಷಣೆ ಯಾವುದೇ ಕ್ಷಣದಲ್ಲಿ ಹೊರಬೀಳ ಬಹುದು. ನಾವೀಗ ಇಲ್ಲಿನ ಸ್ಥಾನಗಳನ್ನು ಉಳಿಸಿಕೊಳ್ಳಬೇಕು. ಅದಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ನಿಂತು ಕೆಲಸ ಮಾಡಬೇಕಿದೆ. ಈ ವಿಷಯದಲ್ಲಿ ಅಪಸ್ವರ ಬೇಡ ಎಂದು ಹೇಳಿದರು.

ಸರ್ಕಾರವೇ ಇಲ್ಲಿ ಠಿಕ್ಕಾಣಿ: ಚುನಾವಣೆ ಘೋಷಣೆಯಾದ ನಂತರ ತಾನು, ತನ್ನ ಸಚಿವರು, ಪಕ್ಷದ ರಾಜಾÂಧ್ಯಕ್ಷರು, ಕಾರ್ಯಾಧ್ಯಕ್ಷರು, ಪದಾಧಿಕಾರಿಗಳೆಲ್ಲ ವಾರಗಟ್ಟಲೇ ಇಲ್ಲೇ ಠಿಕ್ಕಾಣಿ ಹೂಡಿ ರಣ ಕಹಳೆ ಮೊಳಗಿಸುತ್ತೇವೆ. ಇದೇನು ಪ್ರತಿಷ್ಠಿತ ಚುನಾವಣೆ ಆಗಿರಲಿಲ್ಲ. ಆದರೆ ಆ ಮಹಾಶಯ ಬಿಜೆಪಿ ಸೇರಿ ಇದನ್ನು ಪ್ರತಿಷ್ಠೆಯ ಚುನಾವಣೆಯಾಗಿಸಿದ್ದಾರೆ. ಇಷ್ಟೆಲ್ಲಾ ರದ್ಧಾಂತಕ್ಕೆ ಕಾರಣರಾದ ಪ್ರಸಾದರನ್ನು ಸೋಲಿಸದೇ ಇರಲಾಗುತ್ತಾ? ನೋಡಿಯೇ ಬಿಡೋಣ.

Advertisement

ಉಪ ಚುನಾವಣೆ ತಂದಿಕ್ಕಿದ ಅವರಿಗೊಂದು ಸೋಲುಣಿಸಿ ಉತ್ತರ ನೀಡಿಯೇ ವಿರಮಿಸೋಣ ಎಂದು ಅವರು ನೆರದಿದ್ದ ಕಾರ್ಯಕರ್ತರಿಗೆ ಕರೆ ನೀಡಿದರು. ನಂದಕುಮಾರ ತನ್ನ ಹಳೆಯ ಸ್ನೇಹಿತ. ಹಾಗಾಗಿ ಇಲ್ಲಿಗೆ ಬಂದಿದ್ದೇನೆ. ಸದ್ಯದಲ್ಲೇ ಈತನಿಗೊಂದು ಅಧಿಕಾರ ಸ್ಥಾನ ನೀಡಲಾಗುತ್ತದೆ ಎಂದು ಘೋಷಿಸಿದ ಮುಖ್ಯಮಂತ್ರಿಗಳು, ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಹಾಗೂ ಶಾಸಕ ವೆಂಕಟೇಶರೊಂದಿಗೆ ಗುಂಡ್ಲುಪೇಟೆಯತ್ತ ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next