Advertisement

BJP ಬ್ರಹ್ಮಾವರ: ನೂತನ ಜನಪ್ರತಿನಿಧಿಗಳಿಗೆ ಸಮ್ಮಾನ

12:06 AM Sep 02, 2024 | Team Udayavani |

ಬ್ರಹ್ಮಾವರ: ಬಿಜೆಪಿ ನೂತನ ಜನಪ್ರತಿನಿಧಿಗಳ ಅಭಿನಂದನ ಸಮಾರಂಭ ರವಿವಾರ ಬ್ರಹ್ಮಾವರದ ನಾರಾಯಣ ಗುರು ಸಭಾಭವನದಲ್ಲಿ ಜರಗಿತು.

Advertisement

ಸಂಸದ ಕೋಟ ಶ್ರೀನಿವಾಸ ಪೂಜಾರಿ, ಪದವೀಧರ ಕ್ಷೇತ್ರ ಶಾಸಕ ಡಾ| ಧನಂಜಯ ಸರ್ಜಿ, ಶಿಕ್ಷಕರ ಕ್ಷೇತ್ರದ ಶಾಸಕ ಎಸ್‌. ಎಲ್‌. ಭೋಜೇ ಗೌಡ ಹಾಗೂ ಉಡುಪಿ ನಗರಸಭೆಯ ನೂತನ ಅಧ್ಯಕ್ಷ ಪ್ರಭಾಕರ ಪೂಜಾರಿ ಮತ್ತು ಉಪಾಧ್ಯಕ್ಷೆ ರಜನಿ ಹೆಬ್ಬಾರ್‌ ಅವರನ್ನು ಸಮ್ಮಾನಿಸಲಾಯಿತು.

ಕಾಂಗ್ರೆಸ್‌ ತಪ್ಪುಗಳ ಸರಮಾಲೆಯ ನ್ನೇ ಮಾಡುತ್ತಿದೆ. ಪತ್ನಿ, ಮಕ್ಕಳು ಹಾಗೂಸೈಟ್‌ಗೊಸ್ಕರ ರಾಜಕಾರಣ ಮಾಡುವ
ಮುಖ್ಯಮಂತ್ರಿಯನ್ನು ರಾಜ್ಯದಲ್ಲಿಕಾಣುತ್ತಿದ್ದೇವೆ. ಆದರೆ ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ಜನರಿ ಗೋಸ್ಕರ ಕೆಲಸ ಮಾಡುತ್ತಿರುವುದರಿಂದ ದೇಶ ವಿಶ್ವದಲ್ಲೇ ಗುರುತಿಸಲ್ಪಡುತ್ತಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಪಕ್ಷದ ಇಂದಿನ ಯಶಸ್ಸಿಗೆ ಹಿರಿಯರ ಶ್ರಮ, ಕೊಡುಗೆ ಮುಖ್ಯ ಕಾರಣ ಎಂದು ಭೋಜೇ ಗೌಡ ಹೇಳಿದರು.

ಕಾಂಗ್ರೆಸ್‌ ಭಾರತವನ್ನು ತುಂಡರಿ ಸಿದರೆ ಬಿಜೆಪಿ ಜೋಡಿಸಿತು. ರಾ.ಹೆ. ನಿರ್ಮಾಣ, 70ರಿಂದ 150ಕ್ಕೆ ವಿಮಾನ ನಿಲ್ದಾಣಗಳ ಹೆಚ್ಚಳ, 5ಜಿ ಸಂಪರ್ಕ, ನದಿಗಳ ಜೋಡಣೆಯಿಂದ ಭಾರತ್‌ ಜೋಡೋ ಮಾಡಿದ್ದು ಬಿಜೆಪಿಯೇ ಹೊರತು ಕಾಂಗ್ರೆಸ್‌ ಅಲ್ಲ ಎಂದು ಧನಂಜಯ ಸರ್ಜಿ ಹೇಳಿದರು.

Advertisement

ಶಾಸಕ ಯಶಪಾಲ್‌ ಸುವರ್ಣ ಪ್ರಾಸ್ತಾವಿಕ ಮಾತನಾಡಿ, ಬಿಜೆಪಿಗೆ ಕಾರ್ಯಕರ್ತರೇ ಆಸ್ತಿ. ನಾಯಕನಾಗಲು ಕಾರ್ಯಕರ್ತರ ಪರಿಶ್ರಮವೇ ಕಾರಣ ಎಂದರು.

ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಮಾತನಾಡಿ, ರಸ್ತೆಯ ಗುಂಡಿಗಳನ್ನು ಮುಚ್ಚಿಸುವಷ್ಟೂ ಹಣವಿಲ್ಲದೆ ರಾಜ್ಯ ಸರಕಾರ ದಿವಾಳಿಯಾಗಿದೆ. ಇದನ್ನು ಕಾರ್ಯಕರ್ತರು ಜನಸಾಮಾನ್ಯರಿಗೆ ಮನಗಾಣಿಸಬೇಕಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್‌ ಕುಮಾರ್‌, ಪ್ರಮುಖರಾದ ಕುಯಿಲಾಡಿ ಸುರೇಶ್‌ ನಾಯಕ್‌, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಬಿ.ಎನ್‌. ಶಂಕರ್‌ ಪೂಜಾರಿ, ಪ್ರತಾಪ್‌ ಹೆಗ್ಡೆ ಮಾರಾಳಿ, ಸುಪ್ರಸಾದ್‌ ಶೆಟ್ಟಿ, ದಿನಕರ ಶೆಟ್ಟಿ ಹೆರ್ಗ, ಇರ್ಮಾಡಿ ತಿಮ್ಮಪ್ಪ ಹೆಗ್ಡೆ, ಕಿರಣ್‌ ಕುಮಾರ್‌, ಧನಂಜಯ ಅಮೀನ್‌, ಜ್ಞಾನ ವಸಂತ ಶೆಟ್ಟಿ, ಹರಿಮಕ್ಕಿ ರತ್ನಾಕರ ಶೆಟ್ಟಿ, ದಿನೇಶ್‌ ಅಮೀನ್‌, ರಾಘವೇಂದ್ರ ಕುಂದರ್‌, ಕಮಲಾಕ್ಷ ಹೆಬ್ಟಾರ್‌, ಪ್ರಥ್ವಿರಾಜ್‌ ಶೆಟ್ಟಿ, ವಿಜಯ ಕೊಡವೂರು, ವೀಣಾ ವಿ. ನಾಯ್ಕ, ಸಚಿನ್‌ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಗ್ರಾಮಾಂತರ ಬಿಜೆಪಿ ನೂತನ ಕಚೇರಿ ಉದ್ಘಾಟಿಸಲಾಯಿತು.ಗ್ರಾಮಾಂತರ ಅಧ್ಯಕ್ಷ ರಾಜೀವ ಕುಲಾಲ್‌ ಸ್ವಾಗತಿಸಿ, ಮನೋಜ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.