ನಂಜನಗೂಡು: ಮಹಾಭಾರತದ ಸ್ವಹಿತಾಸಕ್ತಿ ಇಂದು ಪರಾಕಾಷ್ಠೆ ತಲುಪಿದೆ. ನೀವು ಬಣ್ಣ ಹಾಕಿಕೊಂಡು ನಾಟಕ ಪ್ರದರ್ಶನ ಮಾಡುತ್ತಿದ್ದೀರಿ. ನಾವು ರಾಜಕಾರಣಿಗಳು ಪ್ರತಿನಿತ್ಯ ವೇಷ ಹಾಕದೇ ಸ್ವಂತ ಹಿತಾಸಕ್ತಿಗಾಗಿ ಅಬಿನಯಿಸುತ್ತೇವೆ ಎಂದು ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ ಹೇಳಿದರು.
ಪ್ರಸಾದರ ಶಿಷ್ಯಗಣ ಶ್ರೀ ಮಹದೇಶ್ವರ ಕಲಾ ಬಳಗದ ನೇತೃತ್ವದಲ್ಲಿ ನಗರದ ಊಟಿ ರಸ್ತೆಯಲ್ಲಿರುವ ವಿದ್ಯಾವರ್ಧಕ ಶಾಲೆಯ ಪಕ್ಕದಲ್ಲಿರುವ ಮೈದಾನದಲ್ಲಿ ಆಯೋಜಿಸಿದ್ದ ಕುರುಕ್ಷೇತ್ರ ಪೌರಾಣಿಕ ನಾಟಕಕ್ಕೆ ಬಿಲ್ಲು ಹೆದೇಗೇರಿಸಿ ಬಾಣ ಹೂಡಿ ಚಾಲನೆ ನೀಡಿ, ಮಾತನಾಡಿದರು.
ನಾಟಕ ಜಾನಪದ ಸಂಸ್ಕೃತಿ ನಶಿಸುತ್ತಿರುವ ಸಂದರ್ಭದಲ್ಲಿ ಅನೇಕ ಬಿಜೆಪಿ ಮುಖಂಡರು, ವಕೀಲರು ಕೋಟು ಕಳಚಿ, ಬಣ್ಣ ಹಚ್ಚಿ, ಗೆಜ್ಜೆ ಕಟ್ಟಿ ನಾಟಕದಲ್ಲಿ ಅಭಿನಯಿಸುತ್ತಿರುವುದು ಶ್ಲಾಘನೀಯ. ನಮ್ಮ ಸಂಪ್ರದಾಯ ಕಲೆಗಳನ್ನು ಇಂದಿಗೂ ಜನತೆ ಆರಾಧಿಸುತ್ತಾರೆ ಎನ್ನುವದಕ್ಕೆ ಇಲ್ಲಿ ಸೇರಿದ ಜನತೆಯೇ ಸಾಕ್ಷಿ ಎಂದರು.
ವೇದಿಕೆಯಲ್ಲಿ ಜಿಲ್ಲಾ ಗ್ರಾಮಾಂತರ ಉಪಾಧ್ಯಕ್ಷ ಎಸ್.ಮಹದೇವಯ್ಯ, ಜಿಪಂ ಸದಸ್ಯ ಸಿ.ಚಿಕ್ಕರಂಗನಾಯಕ, ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಹರ್ಷವರ್ಧನ್, ಎಚ್.ಎಸ್.ದಯಾನಂದಮೂರ್ತಿ, ಯು.ಎನ್,ಪದ್ಮನಾಭರಾವ್, ಕುಂಬ್ರಳ್ಳಿ ಸುಬ್ಬಣ್ಣ,
ದೇವಿರಮ್ಮನಹಳ್ಳಿ ಬಸವರಾಜು, ತಾಪಂ ಅಧ್ಯಕ್ಷ ಬಿ.ಎಸ್.ಮಹದೇವಪ್ಪ, ಉಪಾಧ್ಯಕ್ಷ ಗೋವಿಂದರಾಜನ್, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಣ್ಣ, ತಾಪಂ ಸದಸ್ಯ ಸಿಎಂ.ಮಹದೇವಯ್ಯ, ವಕೀಲ ನಂಜುಂಡಸ್ವಾಮಿ, ನಿಧಿ ಸುರೇಶ್ ಮುಂತಾದವರು ಇದ್ದರು.