ಶಿರಸಿ : ಜೀವ ಜಲದ ಸಂರಕ್ಷಣೆ, ಗೋವಿನ ಮೇಲೆ ಪ್ರೇಮ ಇಟ್ಟು ಕೆಲಸ ಮಾಡುತ್ತಿರುವ ಶಿರಸಿ ಜೀವ ಜಲಕಾರ್ಯಪಡೆ ಈಗ ಇನ್ನೊಂದು ವಿಶಿಷ್ಟ ಕಾಯಕಕ್ಕೆ ಮುಂದಾಗಿದೆ. ನಗರದ ಆರ್ ಟಿಓ ಕಚೇರಿ ಸಮೀಪ ಇರುವ ಪ್ರಾಚೀನ ಕೆರೆಗಳಲ್ಲಿ ಒಂದಾದ ಬಶೆಟ್ಟಿ ಕೆರೆ ಅಭಿವೃದ್ದಿ ಹಾಗೂ ನಗರದ ಚಿಪಗಿ ಬಳಿ ಅಳವಡಿಸಲಾದ ಅತ್ಯಾಧುನಿಕ ಸಿಸಿಟಿವಿ.. ಇದರ ಅಳವಡಿಕೆಯಿಂದ ಚೋರರಿಗೂ ಬಿಸಿತುಪ್ಪವಾಗಿ ಪರಿಣಮಿಸಿದೆ.
ಬಶೆಟ್ಟಿಕೆರೆಯ ದಂಡೆಯ ಸ್ವಚ್ಛವನ್ನು ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರರು ಮಾಡಿಸುತ್ತಿದ್ದು, ನೀರು ಕಡಿಮೆ ಆದ ಬಳಿಕ ಅದರ ಹೂಳೆತ್ತಲೂ ಚಿಂತಿಸಿದ್ದಾರೆ.
ಇತ್ತ ಜಿಲ್ಲೆಯಲ್ಲಿಯೇ ಮೊದಲ ಬಾರಿ ಹೆಬ್ಬಾರ್ ಅವರ ಕೊಡುಗೆಯಿಂದ ಪೊಲೀಸ್ ಇಲಾಖೆಯಿಂದ ಹೊಸ ಪ್ರಯೋಗ ಅಕೋಮೆಟಿಕ್ ನಂಬರ್ ಪ್ಲೇಟ್ ರೆಕಾರ್ಡಿಂಗ್ ಕ್ಯಾಮರಾ ಅಳವಡಿಸಿದೆ. ನಗರದ ಚಿಪಗಿ ನಾಕಾ ಬಳಿ ಎರಡುವರೆ ಲಕ್ಷ ರೂ. ಮೌಲ್ಯದ ಅಕೋಮೆಟಿಕ್ ನಂಬರ್ ಪ್ಲೇಟ್ ರೆಕಾರ್ಡಿಂಗ್ ಕ್ಯಾಮರಾವನ್ನು ಅಳವಡಿಕೆ ಮಾಡಲಾಗಿದೆ.
ಕ್ಯಾಮರಾದ ವಿಶೇಷತೆಗಳು
ಈ ಕ್ಯಾಮರಾವು ಯಾವುದೇ ವಾಹನ ಸುಮಾರು 80 ಕಿ.ಮಿ ವೇಗದಲ್ಲಿ ಹೋದರೂ ಸಹ ಸ್ವಯಂ ಚಾಲಿತವಾಗಿ ನಂಬರ್ ಪ್ಲೇಟ್ ಗುರುತಿಸುವಿಕೆಯನ್ನು ಮಾಡಿ, ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತದೆ. ವಾಹನ ಚಾಲಕನ ಛಾಯಾಚಿತ್ರ ಸಹ ಸಂಗ್ರಹಿಸುವ ವಿಶಿಷ್ಟ ಚಾಕಚಕ್ಯತೆ ಹೊಂದಿದೆ.