Advertisement

Sringeri; ನಡುರಾತ್ರಿ ಕಾಡಿನಲ್ಲಿ ಕಾಣಿಸಿದ ಟಾರ್ಚ್‌ ಬೆಳಕು: ನಕ್ಸಲರಿಗೆ ಶೋಧ

12:12 AM Dec 01, 2024 | Team Udayavani |

ಶೃಂಗೇರಿ: ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕೆರೆಕಟ್ಟೆ ಸುತ್ತಮುತ್ತಲಿನ ಅರಣ್ಯದಲ್ಲಿ ಶುಕ್ರವಾರ ಮಧ್ಯರಾತ್ರಿ ಕಾಡಿನ ನಡುವೆ ಟಾರ್ಚ್‌ ಬೆಳಕು ಕಾಣಿಸಿದ ಹಿನ್ನೆಲೆಯಲ್ಲಿ ಎಎನ್‌ಎಫ್‌ ಪೊಲೀಸರಿಂದ ತೀವ್ರ ಕಾರ್ಯಾ ಚರಣೆ ನಡೆಯುತ್ತಿದೆ.

Advertisement

ಕೊಪ್ಪ ತಾಲೂಕು ಮುಂಡಗಾರು ಲತಾ, ಕಳಸ ತಾಲೂಕಿನ ಬಾಳೆಹೊಳೆಯ ವನಜಾಕ್ಷಿ, ದಕ್ಷಿಣ ಕನ್ನಡ ಜಿಲ್ಲೆಯ ವೇಣೂರು ಗ್ರಾಮದ ಸುಂದರಿ, ರಾಯಚೂರು ಮೂಲದ ಜಯಣ್ಣ, ಶೃಂಗೇರಿ ತಾಲೂಕಿನ ಹಿತ್ತಲಮನೆಯ ರವೀಂದ್ರ ಸಹಿತ ಐವರು ನಕ್ಸಲರ ತಂಡ ಅಡಗಿರುವ ಅನುಮಾನದ ಹಿನ್ನೆಲೆ ಯಲ್ಲಿ ತೀವ್ರ ಕಾರ್ಯಾಚರಣೆ ನಡೆಸ ಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಇನ್ನೊಂದೆಡೆ ನಕ್ಸಲ್‌ ವಿಕ್ರಂ ಗೌಡ ಎನ್‌ಕೌಂಟರ್‌ ಬಳಿಕ ಈ ತಂಡಕ್ಕೆ ಮುಂಡಗಾರು ಲತಾ ನಾಯಕಿಯಾಗಿದ್ದಾಳೆ ಎಂಬ ಮಾತು ಕೇಳಿ ಬರುತ್ತಿದೆ. ಅಲ್ಲದೆ ಈ ತಂಡ ದಕ್ಷಿಣ ಕನ್ನಡ, ಶಿವ ಮೊಗ್ಗ ಅಥವಾ ಕೊಡಗು ಭಾಗಕ್ಕೆ ತೆರಳಿರ ಬಹುದು ಎಂಬ ಶಂಕೆ ದಟ್ಟವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next