Advertisement

11ರಂದು ಶೃಂಗೇರಿ ಶಾರದಾಂಬೆ ರಥೋತ್ಸವ

11:04 PM Feb 03, 2020 | Lakshmi GovindaRaj |

ಶೃಂಗೇರಿ: ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ಫೆ.11ರಂದು ಶ್ರೀ ಶಾರದಾಂಬಾ ರಥೋತ್ಸವ ನಡೆಯಲಿದೆ. ರಥೋತ್ಸವದ ಅಂಗವಾಗಿ ಶ್ರೀಮಠದಲ್ಲಿ ಶತಚಂಡಿ ಮಹಾಯಾಗ ಹಮ್ಮಿಕೊಳ್ಳಲಾಗಿದೆ. ಫೆ.8ರಂದು ಧ್ವಜಾರೋಹಣ, ಸಹಸ್ರ ಗಣಪತಿ ಮೋದಕ ಹೋಮ, ಯಾಗಶಾಲಾ ಪ್ರವೇಶ, ಶತಚಂಡಿ ಮಹಾಯಾಗದ ಸಂಕಲ್ಪ, ಚಂಡಿ ಪಾರಾಯಣ ನಡೆಯಲಿದೆ.

Advertisement

ಫೆ.9ರಂದು ಬ್ರಹ್ಮದೇವರಿಗೆ ವಿಶೇಷ ಪೂಜೆ, ಮಂಗಳಾರತಿ, ಸಂಜೆ ಶ್ರೀ ಶಾರದಾಂಬಾ ಬೀದಿ ಉತ್ಸವ ನಡೆಯಲಿದೆ. ಫೆ.10ರಂದು ಬೆಳಗ್ಗೆ ಬೆಟ್ಟದ ಶ್ರೀ ಮಲಹಾನಿಕರೇಶ್ವರ ದೇವಸ್ಥಾನದಿಂದ ಶ್ರೀ ಭವಾನಿ ಅಮ್ಮನವರನ್ನು ಶ್ರೀ ಶಾರದಾಂಬಾ ಸನ್ನಿ ಧಿಗೆ ಆಗಮಿಸುವ ಉತ್ಸವ ನಡೆಯಲಿದ್ದು, ಅದೇ ದಿನ ಮಧ್ಯಾಹ್ನ 12ಕ್ಕೆ ಜಗದ್ಗುರುಗಳು ಶ್ರೀ ಶಾರದಾ ಸನ್ನಿ ಧಿಯಲ್ಲಿ ವಿಶೇಷ ಪೂಜೆ ನೆರವೇರಿಸುವರು. ನಂತರ ಸುಹಾಸಿನಿ ಪೂಜೆ, ಸಂತರ್ಪಣೆ ನಡೆಯಲಿದೆ.

ಫೆ.11ರಂದು ಉಭಯ ಜಗದ್ಗುರುಗಳ ಉಪಸ್ಥಿತಿಯಲ್ಲಿ ಪಟ್ಟಣದ ರಾಜಬೀದಿಯಲ್ಲಿ ಅಮ್ಮನವರ ಮಹಾರಥೋತ್ಸವ ನಡೆಯಲಿದೆ. ಫೆ.12ರಂದು ಶತಚಂಡಿ ಮಹಾಯಾಗದ ಪೂರ್ಣಾಹುತಿ, ಓಕುಳಿ ಉತ್ಸವ ಸಂಜೆ ತೆಪ್ಪೋತ್ಸವ, ಬೀದಿ ಉತ್ಸವ ನಡೆಯಲಿದೆ. ಫೆ.13ರಂದು ಅಮ್ಮನವರ ರಥೋತ್ಸವದ ಅಂಗವಾಗಿ ಮಹಾ ಸಂಪ್ರೋಕ್ಷಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next