Advertisement

Sringeri: ಇಂದಿನಿಂದ ನವರಾತ್ರಿ ಉತ್ಸವ

11:30 PM Oct 14, 2023 | Team Udayavani |

ಶೃಂಗೇರಿ: ಶ್ರೀ ಶಾರದಾ ಪೀಠದಲ್ಲಿ ಅ.15 ರಿಂದ 25 ರವರೆಗೆ ಶರನ್ನವರಾತ್ರಿ ಉತ್ಸವ ನಡೆಯಲಿದೆ. ನವರಾತ್ರಿ ಹಿಂದಿನ ದಿನ ಅ.14 ರಂದು ಭಾದ್ರಪದ ಅಮಾವಾಸ್ಯೆಯ ದಿನ ಜಗನ್ಮಾತೆಗೆ ಮಹಾಭಿಷೇಕ ನೆರವೇರಿತು.

Advertisement

ಶ್ರೀ ಶಾರದೆಗೆ ಅನೇಕ ವಿಧವಾದ ಫಲ- ಪಂಚಾಮೃತ ಅಭಿಷೇಕದ ಬಳಿಕ ಮಹಾನ್ಯಾಸಪೂರ್ವಕ ಶತರುದ್ರಾಭಿಷೇಕ ಹಾಗೂ 108 ಶ್ರೀಸೂಕ್ತ ಪಠಣದಿಂದ ಅಭಿಷೇಕ ನೆರವೇರಿತು. ಅಂದು ಶ್ರೀಶಾರದೆ ಜಗತøಸೂತಿಕಾ ಅಲಂಕಾರದಲ್ಲಿ ಕಂಗೊಳಿ­ಸಿದಳು.

ಅ.15ರಂದು ಶ್ರೀ ಶಾರದಾಪ್ರತಿಷ್ಠೆ, ಬ್ರಾಹ್ಮಿ ಅಲಂಕಾರ, ಅ.16 -ಹಂಸವಾಹಿನಿ, ಅ.17-ಮಾಹೇಶ್ವರೀ, ಅ.18 ಮಯೂರ­ವಾಹನಾಲಂಕಾರ, ಅ.19-ವೈಷ್ಣವೀ ಅಲಂಕಾರ, ಶತಚಂಡೀಯಾಗದ ಪ್ರಯುಕ್ತ ಶಾಲಾ ಪ್ರವೇಶ, ಪುರಶ್ಚರಣಾರಂಭ, ಅ.20-ಸರಸ್ವತ್ಯಾವಾಹನೆ, ವೀಣಾ ಶಾರದಾ­ಲಂಕಾರ, ಅ.21-ಮೋಹಿನೀ ಅಲಂಕಾರ, ಅ.22- ರಾಜರಾಜೇಶ್ವರಿ ಅಲಂಕಾರ, ಅ.23-ಮಹಾನವಮಿ, ಸಿಂಹವಾಹನಾಲಂಕಾರ, ಶತಚಂಡೀಯಾಗದ ಪೂರ್ಣಾಹುತಿ, ಗಜಾಶ್ವಪೂಜೆ, ಸಂಜೆ ವಿಜಯೋತ್ಸವ, ಶಮೀಪೂಜೆ, ಅ.24- ವಿಜಯದಶಮಿ, ಗಜಲಕ್ಷಿ  ಅಲಂಕಾರ, ಲಕ್ಷ್ಮಿ ನಾರಾಯಣ ಹೃದಯಹೋಮ, ರಾಮಪಟ್ಟಾಭಿಷೇಕ ಸರ್ಗ ಪಾರಾಯಣಿ, ಅ.25-ಗಜಲಕ್ಷಿ  ಅಲಂಕಾರ, ಶ್ರೀ ಶಾರದಾಂಬಾ ಮಹಾ­ರಥೋತ್ಸವ, ಶ್ರೀ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ.

ಪಾರಾಯಣಗಳು
ನವರಾತ್ರಿ ಸಂದ­ರ್ಭದಲ್ಲಿ ಶ್ರೀಮಠದಲ್ಲಿ ನಾಲ್ಕು ವೇದಗಳ ಪಾರಾಯಣ, ವಾಲ್ಮೀಕಿ ರಾಮಾಯಣ, ದೇವೀ ಭಾಗವತ, ದುರ್ಗಾಸಪ್ತಶತಿ, ವಾಲ್ಮೀಕಿ ರಾಮಾಯಣ, ಶ್ರೀ ಸೂಕ್ತ ಜಪ, ಭುವನೇಶ್ವರಿ ಜಪ, ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ಶತರುದ್ರಾಭಿಷೇಕ, ಶ್ರೀ ಚಕ್ರಕ್ಕೆ ನವಾಹರಣ ಪೂಜೆ, ಕುಮಾರೀ, ಸುವಾಸಿನೀ ಪೂಜೆ ನೆರವೇರುತ್ತದೆ.

ರಾಜಬೀದಿಯಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ನಡೆಯಲಿರುವ ರಥೋತ್ಸವ ಅತ್ಯಂತ ವೈಭವವಾಗಿ ನೆರವೇರುತ್ತದೆ. ದರ್ಬಾರು ನವರಾತ್ರಿಯ ವಿಶೇಷ ಕಾರ್ಯಕ್ರಮ ನಡೆಯಲಿದೆ. ಈ ದರ್ಬಾರು ಶ್ರೀ ವಿದ್ಯಾರಣ್ಯರ ಕಾಲದಿಂದಲೂ ನಡೆದು ಬಂದಿದೆ. ಜಗದ್ಗುರುಗಳು ಶ್ರೀಮಠದ ಸಂಪ್ರದಾಯಕ್ಕೆ ಅನುಸಾರವಾಗಿ ಕಿರೀಟ,ಆಭರಣಗಳನ್ನು ಧರಿಸಿ ಸ್ವರ್ಣ ಸಿಂಹಾಸನದಲ್ಲಿ ಅಸೀನರಾಗುತ್ತಾರೆ. ಸಂಜೆ 6 ಕ್ಕೆ ಶ್ರೀಮಠದ ಆವರಣದಲ್ಲಿ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next