ಶೃಂಗೇರಿ: ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಶಾರದಾಂಬಾ ಮಹಾರಥೋತ್ಸವ ಫೆ.22ರಂದು ಜಗದ್ಗುರು ಭಾರತೀತೀರ್ಥ ಮಹಾಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಬೆಳಗ್ಗೆ 11 ಗಂಟೆಗೆ ನೆರವೇರಲಿದೆ.
ರಥೋತ್ಸವದ ಅಂಗವಾಗಿ ಫೆ.20ರಂದು ಶತಚಂಡಿ ಪುರಶ್ಚರಣೆ, ಶ್ರೀ ಬ್ರಹ್ಮದೇವರಿಗೆ ವಿಶೇಷ ಪೂಜೆ ಮತ್ತು ಮಂಗಳಾರತಿ, ಬ್ರಹ್ಮಸಂತರ್ಪಣೆ ಹಾಗೂ ಸಂಜೆ 6 ಗಂಟೆಗೆ ಶ್ರೀ ಶಾರದಮ್ಮನವರ ಬೀದಿ ಉತ್ಸವ ನಡೆಯಲಿದೆ.
ಫೆ.21ರಂದು ಶತಚಂಡಿ ಪುರಶ್ಚರಣೆ ಬಳಿಕ ಶ್ರೀ ಭವಾನಿ ಅಮ್ಮನವರು ಶ್ರೀ ಶಾರದಾಂಬಾ ಸನ್ನಿಧಿ ಗೆ ಉತ್ಸವದ ಮೂಲಕ ಚಿತ್ತೆ$çಸುವ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ನಂತರ, ಮಧ್ಯಾಹ್ನ 12ಕ್ಕೆ ಶ್ರೀಭಾರತೀತೀರ್ಥ ಮಹಾಸ್ವಾಮೀಜಿಯಿಂದ ಶ್ರೀ ಶಾರದಾಂಬೆಗೆ ವಿಶೇಷ ಪೂಜೆ, ಮಹಾಮಂಗಳಾರತಿ,ಸುವಾಸಿನಿಯರ ಪೂಜೆ ಮತ್ತು ಸಂತರ್ಪಣೆ, ಸಂಜೆ 6.30ಕ್ಕೆ ಶ್ರೀಶಾರದಮ್ಮನವರ ಬೀದಿ ಉತ್ಸವ ನಡೆಯಲಿದೆ.
ಫೆ.22ರಂದು ಬೆಳಗ್ಗೆ 11ಕ್ಕೆ ಜಗದ್ಗುರುಗಳ ಉಪಸ್ಥಿತಿಯಲ್ಲಿ ಶಾರದಾಂಬಾ ರಥೋತ್ಸವ ನೆರವೇರಲಿದೆ. ಫೆ.23ರಂದು ಶತಚಂಡಿಯಾಗದ ಪೂರ್ಣಾಹುತಿ, ಓಕಳಿ ಉತ್ಸವ, ಸಂಜೆ ತೆಪೊ³àತ್ಸವ ಬಳಿಕ ಬೀದಿ
ಉತ್ಸವ ಹಾಗೂ ಧ್ವಜಾರೋಹಣ ನಡೆಯಲಿದೆ. ಫೆ.24ರಂದು ರಥೋತ್ಸವ ಸಂಬಂಧ ಮಹಾಸಂಪ್ರೋಕ್ಷಣೆ ನಡೆಯಲಿದೆ.