Advertisement

ಜಿಲ್ಲಾ ಉಸ್ತುವಾರಿ ಸಚಿವರು ರಾಜೀನಾಮೆ ನೀಡಲಿ

04:04 PM May 31, 2020 | Naveen |

ಶೃಂಗೇರಿ: ಜಿಲ್ಲೆಯಲ್ಲಿ ಆತಂಕ ಪರಿಸ್ಥಿತಿಯಿದೆ. ಆದರೂ, ಜಿಲ್ಲಾ ಕೇಂದ್ರದಲ್ಲಿ ಕೋವಿಡ್ ಪರೀಕ್ಷಾ ಕೇಂದ್ರವನ್ನು ಇನ್ನೂ ಆರಂಭಿಸದಿರುವ ಜಿಲ್ಲಾ ಉಸ್ತುವಾರಿ ಸಚಿವರು ರಾಜೀನಾಮೆ ನೀಡಬೇಕೆಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಂದೀಪ್‌ ಆಗ್ರಹಿಸಿದರು.

Advertisement

ಪಟ್ಟಣದ ಶಾರದಾನಗರದ ಕಾಂಗ್ರೆಸ್‌ ಭವನದಲ್ಲಿ ನಡೆದ ಡಿಕೆಶಿ ಪದಗ್ರಹಣ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಭಯದ ವಾತಾವರಣವಿದ್ದು, ಕೊವಿಡ್‌ ವಾರಿಯರ್ಸ್‌ಗೆ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕಿದೆ. ಹೊರರಾಜ್ಯದ 800 ಕಾರ್ಮಿಕರನ್ನು ಸೂಕ್ತ ವ್ಯವಸ್ಥೆ ಇಲ್ಲದೇ ಕ್ವಾರಂಟೈನ್‌ ಮಾಡಲಾಗಿತ್ತು. ಜಿಲ್ಲಾ ಉತ್ಸವದಲ್ಲಿ ವಿಶೇಷ ಆಸಕ್ತಿ ತೋರಿದ್ದ ಉಸ್ತುವಾರಿ ಸಚಿವರು, ಕೋವಿಡ್ ವಿಷಯದಲ್ಲಿ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಕಿಟ್‌ ಖರೀದಿಯಲ್ಲೂ ಸರಕಾರ ಅವ್ಯವಹಾರ ನಡೆಸಿದೆ. ಕಳಪೆ ಕಿಟ್‌ನಿಂದಾಗಿ ವರದಿಗಳು ತಪ್ಪಾಗಿ ಬರುತ್ತಿವೆ. ಇದರಿಂದ ಅವಘಡಗಳು ಸಂಭವಿಸುತ್ತಿವೆ. ಕೋವಿಡ್ ವಿಷಯದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದ ವೈಫಲ್ಯ ಎದ್ದು ಕಾಣುತ್ತಿದೆ ಎಂದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಕೋವಿಡ್ ವಿಚಾರದಲ್ಲಿ ಕಾಂಗ್ರೆಸ್‌ ಸಂಪೂರ್ಣ ಬೆಂಬಲ ನೀಡಿದೆ. ಶಾಸಕರ ಅನುದಾನವನ್ನು ಸರಕಾರಕ್ಕೆ ನೀಡಲಾಗಿದೆ. ಕಾರ್ಮಿಕರನ್ನು ಊರಿಗೆ ಮರಳಿಸಲು ಸರಕಾರ ಹೆಚ್ಚಿನ ದರ ವಿಧಿಸಲು ಮುಂದಾದಾಗ ಕಾಂಗ್ರೆಸ್‌ ಒಂದು ಕೋಟಿ ರೂ. ನೀಡಿ, ಅವರ ಪ್ರಯಾಣ ವೆಚ್ಚ ಭರಿಸಿದೆ ಎಂದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ| ಅಂಶುಮಾಂತ್‌ ಮಾತನಾಡಿ, ತಾಲೂಕಿನಲ್ಲಿ 11 ಸ್ಥಳದಲ್ಲಿ ಡಿಕೆಶಿ ಪದಗ್ರಹಣ ಸಮಾರಂಭವನ್ನು ಜೂ.7 ರಂದು ಏರ್ಪಡಿಸಲಾಗಿದೆ ಎಂದರು. ಸಭೆಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನಟರಾಜ್‌, ಕಡ್ತೂರು ದಿನೇಶ್‌, ಕೆ.ಆರ್‌.ವೆಂಕಟೇಶ್‌, ಎಚ್‌.ಕೆ.ದಿನೇಶ್‌ ಹೆಗ್ಡೆ, ಉಮೇಶ್‌ ಪುದುವಾಳ್‌, ಕೆ.ಸಿ.ವೆಂಕಟೇಶ್‌, ರಮೇಶ್‌ ಭಟ್‌, ಸ್ಟೈಲೋ ದಿನೇಶ್‌ ಶೆಟ್ಟಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next