Advertisement

ಕಿರುಚಿತ್ರ ತಂಡದಿಂದ ಕೋವಿಡ್ ಜಾಗೃತಿ

12:34 PM May 18, 2020 | Naveen |

ಶೃಂಗೇರಿ: ಕೋವಿಡ್‌-19 ಸಾಕಷ್ಟು ಸಮಸ್ಯೆ ಹುಟ್ಟುಹಾಕಿದ್ದು, ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕಿರುಚಿತ್ರ ಮಾಡಲಾಗುತ್ತಿದೆ ಎಂದು ಕೊಪ್ಪ ಗಾಯತ್ರಿ ಸೌಹರ್ದ ಸಹಕಾರ ಬ್ಯಾಂಕ್‌ ಅಧ್ಯಕ್ಷ ಸಸಿಮನೆ ವಿಶ್ವನಾಥ್‌ ಹೇಳಿದರು.

Advertisement

ಮೆಣಸೆ ಗ್ರಾಪಂಯ ಸಸಿಮನೆಯಲ್ಲಿ ಕೋವಿಡ್ ಬಗ್ಗೆ ಸಾಮಾಜಿಕ ಸಂದೇಶ ನೀಡುವ ಕಿರುಚಿತ್ರ ಚಾಲನೆ ನೀಡಿ ಮಾತನಾಡಿದರು. ವಿಶ್ವದಲ್ಲಿ ವ್ಯಾಪಕವಾಗಿ ಹರಡಿರುವ ಕೋವಿಡ್ ವೈರಸ್‌ನಿಂದ ಸಮಾಜದಲ್ಲಿ ಆರ್ಥಿಕ ಹಿನ್ನಡೆಯಾಗಿದೆ. ಜಾಗೃತಿ ಮೂಡಿಸಲು ಪರಿಣಾಮಕಾರಿ ಮಾಧ್ಯಮವಾದ ಕಿರುಚಿತ್ರದಿಂದ ಸಾಧ್ಯ ಎಂದರು.

ಕಿರುಚಿತ್ರ ನಿರ್ದೇಶಕ ರಮೇಶ್‌ ಬೇಗಾರ್‌ ಮಾತನಾಡಿ, ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇದೀಗ ಕೋವಿಡ್ ವೈರಸ್‌ನಿಂದ ಆತಂಕಕ್ಕೆ ಒಳಗಾಗಿರುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಹಿರಿಯರ ಬಗ್ಗೆ ಹೆಚ್ಚು ಕಾಳಜಿ ವಹಿಸುವಂತೆ ಕರೆ ನೀಡಿದ್ದಾರೆ. ಸರಕಾರದೊಂದಿಗೆ ನಾವೆಲ್ಲರೂ ಕೈಜೊಡಿಸಬೇಕಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಮೂರು ದಿನ ಚಿತ್ರಿಕರಣ ನಡೆಸಿ,ಯೂಟ್ಯೂಬ್‌ ಮೂಲಕ ಸಾರ್ವಜನಿಕರು ವೀಕ್ಷಿಸಬಹುದಾಗಿದೆ ಎಂದರು.

ಭಾರತೀತೀರ್ಥ ಕಲ್ಚರಲ್‌ ಟ್ರಸ್ಟ್‌ ನಿರ್ಮಿಸುತ್ತಿರುವ ಶುದ್ದ ಕಾವೇರಿ ಕಿರುಚಿತ್ರಕ್ಕೆ ಸಸಿಮನೆ ವಿಶ್ವನಾಥ್‌ ನಿರ್ಮಾಪಕರಾಗಿದ್ದಾರೆ. ಸಹ ನಿರ್ದೇಶಕರಾಗಿ ಪ್ರವೀಶ್‌, ಶಿಶಿರ ಛಾಯಾಗ್ರಹಕರಾಗಿದ್ದಾರೆ. ಬಿ.ಎಲ್‌. ರವಿಕುಮಾರ್‌, ನಯನ, ಸಸಿಮನೆ ಕೃಷ್ಣಮೂರ್ತಿ, ವೈಶಾಲಿ ನಟಶೇಕರ್‌, ಸುನೀತನವೀನ್‌, ಸ್ವಾತಿ, ನಾಗಶ್ರೀ, ಸುಬ್ರಮಣ್ಯಚಾರ್ಯ ನಟಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next