Advertisement

Sringeri: ಆದಿ ಶಂಕರಾಚಾರ್ಯರ ಮೂರ್ತಿ ಅನಾವರಣ

11:58 PM Nov 10, 2023 | Team Udayavani |

ಶೃಂಗೇರಿ: ಅದ್ವೈತ ತತ್ವ ಪ್ರತಿಪಾದಕ ಆದಿ ಶಂಕರಾಚಾರ್ಯರ 32 ಅಡಿ ಎತ್ತರದ ಶಿಲಾಮಯ ಮೂರ್ತಿಯನ್ನು ಶಾರದಾ ಪೀಠದ ಜಗದ್ಗುರು ಭಾರತೀತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರ ಭಾರತೀ ಸ್ವಾಮೀಜಿ ಶುಕ್ರವಾರ ಅನಾವರಣಗೊಳಿಸಿದರು.

Advertisement

ಶಂಕರಾಚಾರ್ಯರ ವಿಗ್ರಹದೊಂದಿಗೆ ಅವರ ಶಿಷ್ಯರಾದ ಶ್ರೀ ಸುರೇಶ್ವರಾ ಚಾರ್ಯರು, ಶ್ರೀ ಪದ್ಮಪಾದಾಚಾರ್ಯರು, ಶ್ರೀ ಹಸ್ತಮಲಕಾಚಾರ್ಯರು ಹಾಗೂ ವಿಜಯನಗರ ಸಾಮ್ರಾಜ್ಯದ ರೂವಾರಿಯಾದ ಜಗದ್ಗುರು ಶ್ರೀ ವಿದ್ಯಾ ರಣ್ಯರ 12 ಅಡಿ ಎತ್ತರದ ಶಿಲಾಮಯ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಜತೆಗೆ ಶ್ರೀ ಆಂಜನೇಯ ವಿಗ್ರಹವೂ ಇದೆ. ಪಟ್ಟಣದ ಹೊರವಲಯದ ಮಾರುತಿ ಬೆಟ್ಟದಲ್ಲಿ ಸ್ಥಾಪಿಸಲಾಗಿರುವ ಶಂಕರಾಚಾರ್ಯರ ಶಿಲಾಮಯ ಮೂರ್ತಿಯ ಈ ಪ್ರದೇಶಕ್ಕೆ ಜಗದ್ಗುರುಗಳು ಶಂಕರಗಿರಿ ಎಂದು ನಾಮಕರಣ ಮಾಡಿದ್ದಾರೆ. ಶಂಕರಗಿರಿಯಲ್ಲಿ ಮ್ಯೂಸಿಯಂ, ಗ್ರಂಥಾಲಯ, ಸಭಾಂಗಣ, ನೀರಿನ ಕಾರಂಜಿ ನಿರ್ಮಿಸಲಾಗಿದೆ. ಇಲ್ಲಿಗೆ ಒಂದು ತಿಂಗಳ ಬಳಿಕವಷ್ಟೇ ಸಾರ್ವಜನಿಕರಿಗೆ ಪ್ರವೇಶ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next