Advertisement
ನಗರದ ಕವಿಸಂನ ಪುಂಡರೀಕ್ಷಕ ಸಭಾಂಗಣದ ವ್ಯಾಸಪೀಠ ವೇದಿಕೆಯಲ್ಲಿ ಲೋಕ ಕಲ್ಯಾಣಾರ್ಥ ಮೇ 22ರಿಂದ ಮೇ 26ರವರೆಗೆ ಹಮ್ಮಿಕೊಂಡ ಪಂಡಿತ ಕಂಠಪಲ್ಲಿ ಸಮೀರಾಚಾರ್ಯ ಅವರಿಂದ ನಾಲ್ಕು ವರ್ಷಗಳ ಪರ್ಯಂತ ನಡೆದ ಶ್ರೀಮನ್ಮಹಾಭಾರತ ಮಂಗಳ್ಳೋತ್ಸವಕ್ಕೆ ಚಾಲನೆ ನೀಡಿ ಅವರು ಆರ್ಶೀವಚನ ನೀಡಿದರು.
Related Articles
Advertisement
ಬೆಂಗಳೂರಿನ ಜಯತೀರ್ಥ ವಿದ್ಯಾಪೀಠದ ಡಾ|ಸತ್ಯಧ್ಯಾನಾಚಾರ್ಯ ಕಟ್ಟಿ ಮಾತನಾಡಿ, ಮಕ್ಕಳು ಪೋಷಕರು ಮಾತು ಕೇಳುತ್ತಿಲ್ಲ. ಮನೆಯಲ್ಲಿ ಸಮ್ಮತಿಯ ಮದುವೆಗಳೇ ಆಗುತ್ತಿಲ್ಲ. ಆದ ಮದುವೆಗಳು ಮುರಿದು ಬೀಳುತ್ತಿವೆ. ಪೋಷಕರನ್ನು ವೃದ್ಧಾಶ್ರಮಕ್ಕೆ ಹಾಕಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸಮಾಜದಲ್ಲಿ ಮೌಲ್ಯಗಳು ನಶಿಸಿ ಹೋಗುತ್ತಿವೆ. ಹೀಗಾಗಿ ಸಮಾಜದಲ್ಲಿ ಮತ್ತೆ ಮೌಲ್ಯಗಳ ಪುನರ್ ಸ್ಥಾಪಿಸಲು ಮಕ್ಕಳಿಗೆ ನಮ್ಮ ಸಂಸ್ಕೃತಿ ಪರಿಚಯಿಸುವ ಕೆಲಸ ಆಗಬೇಕಿದೆ ಎಂದರು.
ರಾಮಾಯಣ, ಮಹಾಭಾರತದಂತಹ ಶ್ರೇಷ್ಠ ಗ್ರಂಥಗಳನ್ನು ಬರೀ ಪತಿ-ಪತ್ನಿ, ಸಹೋದರರ ಜಗಳದ ಮನೋಭಾವಕ್ಕೆ ಹೋಲಿಸುತ್ತಿರುವುದು ವಿಷಾದನೀಯ. ಮೊಬೈಲ್, ಟಿವಿಗಳಿಂದ ಎಂದಿಗೂ ಮನಸ್ಸಿಗೆ ನೆಮ್ಮದಿ, ಸುಖ, ಶಾಂತಿ ಲಭಿಸಲಾರದು. ಬದಲಾಗಿ ಈ ಗ್ರಂಥಗಳಿಂದ ಮಾತ್ರವೇ ಸುಖ-ಶಾಂತಿ ಪಡೆಯಲು ಸಾಧ್ಯ. ಮಹಾಭಾರತ, ರಾಮಾಯಣದಂತಹ ಶ್ರೇಷ್ಠ ಗ್ರಂಥಗಳಿಂದ ಸಮಾಜ ದೂರವಾದಷ್ಟು ದುಃಖ, ಅಶಾಂತಿಗೆ ಸ್ವಾಗತ ಕೋರಿದಂತೆ ಎಂದರು.
ಪಂ|ಸಮೀರಾಚಾರ್ಯ ಕಂಠಪಲ್ಲಿ, ಡಾ|ಆರ್. ಜಿ. ಜೋಶಿ, ಎಸ್.ಎಂ.ಸರಾಫ್, ಪ್ರಕಾಶ ಬೇಗೂರ, ಕೃಷ್ಣಮೂರ್ತಿ, ಎಸ್.ಎನ್. ದೇಶಪಾಂಡೆ ಸೇರಿದಂತೆ ಹಲವರು ಇದ್ದರು. ತೇಜಸ್ವಿನಗರದ ತೇಜಸ್ವಿ ಮಹಿಳಾ ಮಂಡಳದವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಂಗಳ್ಳೋತ್ಸವ ಪ್ರಯುಕ್ತ ಮೇ 26 ರವರೆಗೆ ದಿನನಿತ್ಯ ವಿವಿಧ ಕಾರ್ಯಕ್ರಮ ಜರುಗಲಿವೆ.