Advertisement

ಪಾತ್ರೆ ತೊಳೆದ ನಟ ಶ್ರೀಮುರಳಿ

10:38 AM Apr 28, 2020 | Suhan S |

ಲಾಕ್‌ಡೌನ್‌ ಸಮಯದಲ್ಲಿ ಎಲ್ಲರೂ ಮನೆಯಲ್ಲಿದ್ದಾರೆ. ಈ ಸಮಯದಲ್ಲಿ ಸಿನಿಮಾ ಸ್ಟಾರ್‌ಗಳು ಪ್ರತಿ ದಿನ ಒಂದಲ್ಲ ಒಂದು ಸಿನಿಮಾ ಚಟುವಟಿಕೆಯಲ್ಲೇ ಇದ್ದಾರೆ. ಹಲವರು ಸಿನಿಮಾ ಕಾರ್ಮಿಕರಿಗೆ, ಪೋಷಕ ಕಲಾವಿದರಿಗೆ ಇತರೆ ವಿಭಾಗದ ದಿನಗೂಲಿ ನೌಕರರಿಗೆ ಸಹಾಯ ಹಸ್ತ ಚಾಚಿದ್ದಾರೆ. ಸದ್ಯಕ್ಕೆ ಒಂದಷ್ಟು ಸಿನಿಮಾ ನೋಡುವುದು, ಪುಸ್ತಕ ಓದುವುದು ಸೇರಿದಂತೆ ಹಲವು ಕೆಲಸಗಳಲ್ಲಿ ನಿರತರಾಗಿದ್ದಾರೆ. ಇತ್ತ, ನಟ ಶ್ರೀಮುರಳಿ ಕೂಡ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾರೆ.

Advertisement

ಹೌದು, ನಿತ್ಯವೂ ಒಂದಿಲ್ಲೊಂದು ಕಾರ್ಯಕ್ರಮಗಳು, ಚಿತ್ರೀಕರಣ ಅದು ಇದೂ ಅಂತ ಬಿಝಿಯಾಗಿರುತ್ತಿದ್ದ ಶ್ರೀಮುರಳಿ, ಲಾಕ್‌ ಡೌನ್‌ನಿಂದಾಗಿ ಮನೆಯಲ್ಲೇ ಇದ್ದಾರೆ. ಅವರು ತಮ್ಮ ಮನೆಯಲ್ಲೇ ಮಕ್ಕಳು, ಮಡದಿ, ಅಪ್ಪ, ಅಮ್ಮನೊಂದಿಗೆ ಸಮಯ ಕಳೆಯುತ್ತಿದ್ದಾರೆ. ಅಷ್ಟೇ ಅಲ್ಲ, ಅವರು ಅಡುಗೆ ಮನೆಯಲ್ಲಿ ಪಾತ್ರೆ ತೊಳೆಯುವ ಫೋಟೋವೊಂದನ್ನು ಪೋಸ್ಟ್‌ ಮಾಡಿ, ಪಾತ್ರೆ ತೊಳೆಯದಿದ್ದರೆ ಹೆಂಡತಿ ಊಟ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ನಾನು ಪಾತ್ರೆ ತೊಳೆಯುತ್ತಿದ್ದೇನೆ. ಇದು ಬಹಳ ಕಷ್ಟದ ಕೆಲಸ ನನಗೆ . ಬೆವರು ಬಂದು ಬಿಟ್ಟಿದೆ ಎಂದು ಬರೆದುಕೊಂಡಿದ್ದಾರೆ ಶ್ರೀಮುರಳಿ.

ಸದ್ಯಕ್ಕೆ ಶ್ರೀಮುರಳಿ ಹಂಚಿಕೊಂಡಿರುವ ಫೋಟೋ ಮತ್ತು ಬರಹಕ್ಕೆ ಸಿಕ್ಕಾಪಟ್ಟೆ ಮೆಚ್ಚುಗೆ ಸಿಗುತ್ತಿದೆ. ಅದೇನೆ ಇರಲಿ, ಲಾಕ್‌ಡೌನ್‌ ಎಲ್ಲರಿಗೂ ಒಂದೊಂದು ಪಾಠ ಕಲಿಸಿದೆ. ಅದರಲ್ಲೂ ಮನೆಯ ಹೆಣ್ಣುಮಕ್ಕಳ ಕಷ್ಟ ಏನು ಎಂಬುದನ್ನೂ ಅರಿತುಕೊಳ್ಳುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next