Advertisement

ತೆಲುಗು ಸಿನಿಮಾದಲ್ಲಿ ಶ್ರೀಲೀಲಾ ಮಿಂಚು

04:38 PM Apr 30, 2021 | Team Udayavani |

ಕನ್ನಡದಲ್ಲಿ “ಕಿಸ್‌’, “ಭರಾಟೆ’ ಸಿನಿಮಾಗಳ ಮೂಲಕ ಸಿನಿ ಪ್ರಿಯರ ಗಮನ ಸೆಳೆದಿದ್ದನಾಯಕಿ ಶ್ರೀಲೀಲಾ, ಸದ್ಯ ಧನ್ವೀರ್‌ ಜೊತೆ “ಬೈ ಟು ಲವ್‌’ ಚಿತ್ರದಲ್ಲಿಕಾಣಿಸಿಕೊಳ್ಳುತ್ತಿದ್ದಾರೆ.

Advertisement

ಇದರ ನಡುವೆಯೇ ತೆಲುಗಿನತ್ತಲೂ ಮುಖ ಮಾಡಿರುವಶ್ರೀಲೀಲಾ, ಸದ್ದಿಲ್ಲದೆ ತೆಲುಗು ಚಿತ್ರವೊಂದರಲ್ಲಿ ಅಭಿನಯಿಸಿದ್ದಾರೆ.ಅಂದಹಾಗೆ, ಶ್ರೀಲೀಲಾ ಅಭಿನಯಿಸಿರುವ ಮೊದಲ ತೆಲುಗುಚಿತ್ರದ ಹೆಸರು “ಪೆಳ್ಳಿ ಸಂದಡಿ’. ತೆಲುಗು ನಟ ಶ್ರೀಕಾಂತ್‌ ಪುತ್ರರೋಶನ್‌ ನಾಯಕನಾಗಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿಶ್ರೀಲೀಲಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇಬಿಡುಗಡೆಯಾಗಿರುವ “ಪೆಳ್ಳಿ ಸಂದಡಿ’ ಚಿತ್ರದ ಪೋಸ್ಟರ್‌ಗಳಲ್ಲಿ,ಶ್ರೀಲೀಲಾ ಲುಕ್‌ ತೆಲುಗು ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

ಸದ್ಯ ಶೂಟಿಂಗ್‌ಮುಗಿಸಿ, ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿರುವ “ಪೆಳ್ಳಿ ಸಂದಡಿ’ ಚಿತ್ರದಮೊದಲ ಲಿರಿಕಲ್‌ ವಿಡಿಯೋ ಇತ್ತೀಚೆಗೆ ಬಿಡುಗಡೆಯಾಗಿದೆ. ಸದ್ಯಬಿಡುಗಡೆಯಾಗಿರುವ “ಪೆಳ್ಳಿ ಸಂದಡಿ’ ಚಿತ್ರದ ಮೊದಲ ಲಿರಿಕಲ್‌ವಿಡಿಯೋ ಕೂಡ ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿದ್ದು,ಶ್ರೀಲೀಲಾ ಮೊದಲ ತೆಲುಗು ಚಿತ್ರಕ್ಕೆ ಭರ್ಜರಿ ಓಪನಿಂಗ್‌ ಸಿಗುವ ಎಲ್ಲಲಕ್ಷಣಗಳೂ ಕಾಣುತ್ತಿದೆ.

ಇನ್ನು ಸದ್ಯ ಶ್ರೀಲೀಲಾ ಕನ್ನಡದಲ್ಲಿ ಅಭಿನಯಿಸುತ್ತಿರುವ “ಬೈ ಟು ಲವ್‌’ಚಿತ್ರ ತೆಲುಗಿಗೆ ರಿಮೇಕ್‌ ಆಗಲಿದೆ ಎನ್ನಲಾಗುತ್ತಿದೆ. ಕನ್ನಡ ಮತ್ತು ತೆಲುಗುಎರಡೂ ಭಾಷೆಗಳಿಗೂ ಈ ಚಿತ್ರದ ಕಥೆ ಕನೆಕ್ಟ್ ಆಗುವುದರಿಂದ,ಚಿತ್ರವನ್ನು ಕನ್ನಡದ ಜೊತೆ ತೆಲುಗಿನಲ್ಲೂ ಬಿಡುಗಡೆ ಮಾಡಲುಚಿತ್ರತಂಡ ಯೋಚಿಸುತ್ತಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next