Advertisement

ಶ್ರೀಧರಾನಂದ ಸ್ವಾಮೀಜಿ ಪೀಠಾರೋಹಣ ಸಂಭ್ರಮ

03:21 PM Apr 19, 2017 | |

ವಾಡಿ: ಉಡುಪಿ ಶ್ರೀಕೃಷ್ಣ ಮಠದ ವಿಶ್ವೇಶತೀರ್ಥ ಸ್ವಾಮೀಜಿಗಳಿಂದ ಧರ್ಮಾಧಿಕಾರ ಧೀಕ್ಷೆ ಸ್ವೀಕರಿಸಿದ ಕೊಂಚೂರು ಸವಿತಾ ಮಹರ್ಷಿ ಪೀಠದ ಶ್ರೀ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ ಅವರ ಪೀಠಾರೋಹಣ ಹಾಗೂ ಸವಿತಾ ಮಹರ್ಷಿ ಜಯಂತಿ ಕಾರ್ಯ ಸಂಭ್ರಮದಿಂದ ನೆರವೇರಿತು. 

Advertisement

ಕೊಂಚೂರು ಗ್ರಾಮದ ಹೊರ ವಲಯದ ಸವಿತಾ ಮಠದ ಜಮೀನಿನಲ್ಲಿ ಮಂಗಳವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಹೋಮ ಹವನಗಳು ನಡೆದು ಮಂತ್ರೋಪದೇಶಗಳ ಪಠಣದ ನಂತರ ಪೀಠಾರೋಹಣದ ವಿಧಾನಗಳನ್ನು ನೆರವೇರಿಸಲಾಯಿತು. 

ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದಿಂದ ಮಠದ ವರೆಗೆ ಸವಿತಾ ಮಹರ್ಷಿ ಭಾವಚಿತ್ರ ಮೆರವಣಿಗೆ ಸಾವಿರಾರು ಜನ ಭಕ್ತರ ಸಮ್ಮುಖದಲ್ಲಿ ನಡೆಯಿತು. ರಾವೂರ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಹಳಕರ್ಟಿ ಕಟ್ಟಿಮನಿ ಹಿರೇಮಠದ ಶ್ರೀ ಮುನೀಂದ್ರ ಸ್ವಾಮೀಜಿ ಹಾಗೂ ಸವಿತಾ ಪೀಠದ ಶ್ರೀಧರಾನಂದ ಸರಸ್ವತಿ ಸ್ವಾಮೀಜಿಗಳು ಸವಿತಾ ಮಹರ್ಷಿ ಭಾವಚಿತ್ರ ಮೆರವಣಿಗೆ ನೇತೃತ್ವ ವಹಿಸಿದ್ದರು. 

ಮೆರವಣಿಗೆಯುದ್ದಕ್ಕೂ ಜಯಘೋಷಗಳು ಮೊಳಗಿದವು. ಸ್ವಾಗತ ಸಮಿತಿ ಅಧ್ಯಕ್ಷ ಲಿಂಗಾರೆಡ್ಡಿಗೌಡ ಬಾಸರೆಡ್ಡಿ, ಸವಿತಾ ಸಮಾಜದ ತಾಲೂಕು ಅಧ್ಯಕ್ಷ ರಾಜು ಶಿವುಪುರ, ಪುರಸಭೆ ಸದಸ್ಯರಾದ ಭೀಮಶಾ ಜಿರೋಳಿ, ಶರಣು ನಾಟೀಕಾರ, ಮಲ್ಲಯ್ಯ ಗುತ್ತೇದಾರ, ಅಂಬ್ರಿàಶ ಕಡದರಾಳ, ಮುಖಂಡರಾದ ಜುಮ್ಮಣ್ಣ ಪೂಜಾರಿ, ಮಲ್ಲಣ್ಣಗೌಡ ಪೊಲೀಸ್‌ ಪಾಟೀಲ,

ಪರಶುರಾಮ ನಸಲವಾಯಿ, ರಮೇಶ ಚಿನ್ನಾಕರ, ಭೀಮರೆಡ್ಡಿಗೌಡ ಕುರಾಳ, ಶರಣಪ್ಪ ಬಳ್ಳಾರಿ, ವೀರಣ್ಣ ಯಾರಿ, ಶ್ರೀನಿವಾಸ ನಾಲವಾರಕರ, ಮಹಮದ ಅಶ್ರಫ್‌, ಅಂಬ್ರಿàಶ ಸಿಂಧನೂರ, ರಾಘವೇಂದ್ರ ಭಂಡಾರಿ, ಗಣೇಶ ಹುಬ್ಬಳಿ ಹಾಗೂ ಕಲಬುರಗಿ, ಯಾದಗಿರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸವಿತಾ ಸಮಾಜದ ಜನರು ಪಾಲ್ಗೊಂಡಿದ್ದರು. 

Advertisement

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸವಿತಾ ಸಮಾಜದ 21 ಜನ ಸಾಧಕರಿಗೆ ಸವಿತಾ ಪೀಠ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಲಬುರಗಿ ಚಿರಾಯು ಆಸ್ಪತ್ರೆ ಸಹಯೋಗದಲ್ಲಿ ವೈದ್ಯಕೀಯ ಶಿಬಿರ ಏರ್ಪಡಿಸಲಾಗಿತ್ತು. ಸ್ವಾಮೀಜಿಗಳು ಸೇರಿದಂತೆ ಅನೇಕ ಮುಖಂಡರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. 

Advertisement

Udayavani is now on Telegram. Click here to join our channel and stay updated with the latest news.

Next