Advertisement
ದುಬೈನಲ್ಲಿ ಸಂಬಂಧಿಯ ಮದುವೆ,ಗಣ್ಯರೆಲ್ಲಾ ಸೇರಿದ್ದರು ಎಲ್ಲರೂ ನಗುನಗುತ್ತಾ ಪರಸ್ಪರ ಕುಶಲೋಪರಿಗಳನ್ನು ಮಾತನಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಅದಾಗಲೇ ಹೃದಯಾಘಾತದಿಂದ ಪ್ರಾಣಪಕ್ಷಿ ಹಾರಿ ಹೋಗಿತ್ತು.ಯಾರೂ ಆಕೆ ಇಹಲೋಕ ತ್ಯಜಿಸಿದ್ದಾರೆ ಎಂದು ನಂಬಲಿಲ್ಲ. ಆಸ್ಪತ್ರೆಗೆ ಕರೆದೊಯ್ದಾಗ ಅದು ಧೃಡವಾಯಿತು.
Related Articles
Advertisement
4 ರ ಮಗುವಿದ್ದಾಗಲೆ ತುನೈವನ್ ಎಂಬ ತಮಿಳು ಚಿತ್ರದಲ್ಲಿ ಮುರುಗ ಪಾತ್ರ ಮಾಡುವ ಮೂಲಕ ಬಣ್ಣದ ಬದುಕಿಗೆ ಕಾಲಿರಿಸಿದ್ದ ಶ್ರೀದೇವಿ ಆನಂತರ ಭಾರೀ ಬೇಡಿಕೆಯ ನಟಿಯಾಗಿ ಬೆಳೆದಿದ್ದು ಈಗ ಗತ ಚರಿತ್ರೆ.
1975 ರಲ್ಲಿ ಜ್ಯೂಲಿ ಚಿತ್ರದಲ್ಲಿ ಸಹನಟಿಯಾಗಿ ಬಾಲಿವುಡ್‌ಗೆ ಕಾಲಿರಿಸಿದ್ದ ಅವರು ನೂರಕ್ಕೂ ಹೆಚ್ಚಕ್ಕು ಚಿತ್ರಗಳಲ್ಲಿ ಮಿಂಚಿದ್ದರು.
ಮೇರು ನಟರಾದ ಕಮಲಹಾಸನ್ ಮತ್ತು ರಜನಿಕಾಂತ್ ಅವರೊಂದಿಗೆ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದರು.
1974 ರಲ್ಲಿ ಬಿಡುಗಡೆಯಾಗದ ಕನ್ನಡ ಚಿತ್ರ ಭಕ್ತ ಕುಂಬಾರದಲ್ಲಿ ಬಾಲ ನಟಿಯಾಗಿ ನಟಿಸಿದ್ದ ಶ್ರೀದೇವಿ ಅವರು ಕನ್ನಡ ಚಿತ್ರರಂಗದೊಂದಿಗೆ ಉತ್ತಮ ನಂಟನ್ನು ಹೊಂದಿದ್ದರು.
ಉತ್ತಮ ನೃತ್ಯಗಾತಿಯಾಗಿದ್ದ ಶ್ರೀದೇವಿ ಹಲವು ಯುವ ಹೃದಯಗಳಿಗೆ ಕಿಚ್ಚು ಹಚ್ಚಿದ್ದರು.
ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಕನ್ನಡ ಸೆರಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಸಿ 5 ಬಾರಿ ಫಿಲ್ಮ್ ಫೇರ್ ಪ್ರಶಸ್ತಿಗೆ ಭಾಜನರಾಗಿದ್ದ ಶ್ರೀದೇವಿ ಅವರು ಹಲವು ಉನ್ನತ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.
1996 ರಲ್ಲಿ ಚಿತ್ರ ನಿರ್ಮಾಪಕ ಬೋನಿ ಕಪೂರ್ ಅವರನ್ನು ವಿವಾಹವಾಗಿದ್ದ ಶ್ರೀದೇವಿ ಅವರಿಗೆ ಜಾಹ್ನವಿ ಮತ್ತು ಖುಷಿ ಎಂಬ ಇಬ್ಬರು ಪುತ್ರಿಯರಿದ್ದಾರೆ.