Advertisement

ಪುರಸಭೆ ಉಪಾಧ್ಯಕ್ಷರಾಗಿ ಶ್ರೀದೇವಿ ಲಮಾಣಿ ಆಯ್ಕೆ

02:42 PM Mar 03, 2018 | |

ಬಸವನಬಾಗೇವಾಡಿ: ಪುರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಶ್ರೀದೇವಿ ಲಮಾಣಿ 13 ಮತ ಪಡೆದು ಆಯ್ಕೆಯಾದರು.

Advertisement

ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. 23 ಸದಸ್ಯ ಬಲ ಹೊಂದಿದ ಪುರಸಭೆಯಲ್ಲಿ 10 ಕಾಂಗ್ರೆಸ್‌, 9 ಬಿಜೆಪಿ, 4 ಪಕ್ಷೇತರ ಸದಸ್ಯರು ಇದ್ದಾರೆ. ಶುಕ್ರವಾರ ಜರುಗಿದ ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಕಾಂಗ್ರೆಸ್‌ ನಿಂದ ಶ್ರೀದೇವಿ ಲಮಾಣಿ, ಸಂಜೀವ ಕಲ್ಯಾಣಿ ಹಾಗೂ ಬಿಜೆಪಿ ಯಿಂದ ಶ್ರೀಕಾಂತ ನಾಯಕ ನಾಮಪತ್ರ ಸಲ್ಲಿಸಿದ್ದರು. ಕೊನೆ ಗಳಿಗೆಯಲ್ಲಿ ಸಂಜೀವ ಕಲ್ಯಾಣಿ ನಾಮಪತ್ರ ಹಿಂಪಡೆದರು.

ನಂತರ ಜರುಗಿದ ಚುನಾವಣೆಯಲ್ಲಿ ಶ್ರೀದೇವಿ ಲಮಾಣಿ ಪರವಾಗಿ ಶಾಸಕ ಶಿವಾನಂದ ಪಾಟೀಲ, ಬಿಜೆಪಿಯ ಬಾಗವ್ವ ಹಂಜಗಿ, ಮುರುಗೇಶ ನಾಯ್ಕೋಡಿ, ಮುತ್ತಪ್ಪ ಉಕ್ಕಲಿ, ಗುರಲಿಂಗಪ್ಪ ಬಸರಕೋಡ, ನಜೀರಮ್ಮದ ಗಣಿ, ಗೌರಮ್ಮ ಪೂಜಾರಿ, ಸಂಜೀವ ಕಲ್ಯಾಣಿ, ಬಸಪ್ಪ ತುಂಬಗಿ, ಶ್ರೀದೇವಿ ಲಮಾಣಿ, ಪಕ್ಷೇತರರಾದ ಸಂಗನಬಸಪ್ಪ ಪೂಜಾರಿ, ಪರಜಾನ್‌ ಚೌಧರಿ, ರೇಣುಕಾ ಮೇಲ್ದಾಪುರ, ಸೇರಿದಂತೆ 13 ಸದಸ್ಯರು ಕೈ ಎತ್ತಿದರು.

ಶ್ರೀಕಾಂತ ನಾಯಕ ಪರವಾಗಿ ಕಾಂಗ್ರೆಸ್‌ನ ಕಮಲಾಸಾಬ ಕೊರಬು, ಬೋರಮ್ಮ ಜೀರ, ಪರಸಪ್ಪ ಅಡಗಿಮನಿ, ಸಿದ್ರಾಮಪ್ಪ ಕಿಣಗಿ, ಸತ್ಯವ್ವ ಕೋಳುರ, ನೀಲಪ್ಪ ನಾಯಕ, ಚಂದ್ರಶೇಖರ ಅಂಬಳನೂರ, ಕಮಲಾಬಾಯಿ ಗಾಯಕವಾಡ, ಶ್ರೀಕಾಂತ ನಾಯಕ, ಜ್ಯೋತಿ ನಾಯಕ, ಪಕ್ಷೇತರ ಪ್ರವೀಣ ಪವಾರ ಸೇರಿದಂತೆ 11 ಸದಸ್ಯರು ಕೈ ಎತ್ತಿದರು ಎಂದು ಚುನಾವಣಾಧಿಕಾರಿಯೂ ಆದ ತಹಶೀಲ್ದಾರ್‌ ಎಂ.ಎನ್‌. ಚೋರಗಸ್ತಿ ತಿಳಿಸಿದರು.

ತೀವ್ರ ಕೂತುಹಲ: ಇದುವರೆಗೂ ಉಪಾಧ್ಯಕ್ಷರಾಗಿದ್ದ ಕಾಂಗ್ರೆಸ್‌ನ ಸಂಜೀವ ಕಲ್ಯಾಣಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ ತೆರವುಗೊಂಡ ಸ್ಥಾನಕ್ಕೆ ಜರುಗಿದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಇಬ್ಬರು ಬಿಜೆಪಿಯಿಂದ ಒಬ್ಬರು ನಾಮಪತ್ರ ಸಲ್ಲಿಸಿದ್ದರು. ಕೊನೆಯಲ್ಲಿ ಸಂಜೀವ ಕಲ್ಯಾಣಿ ನಾಮಪತ್ರ ಹಿಂಪಡೆದಿದ್ದರಿಂದ ಕಣದಲ್ಲಿ ಕಾಂಗ್ರೆಸ್‌ನ ಶ್ರೀದೇವಿ ಲಮಾಣಿ, ಬಿಜೆಪಿಯಿಂದ ಶ್ರೀಕಾಂತ ನಾಯಕ ಉಳಿದರು. ನಂತರ ಜರುಗಿದ ಚುನಾವಣೆಯಲ್ಲಿ ಕಾಂಗ್ರೆಸ್‌ ಕೆಲ ಸದಸ್ಯರು ಬಿಜೆಪಿ ಅಭ್ಯರ್ಥಿ ಪರ ಕೈ ಎತ್ತಿದರೆ, ಕೆಲ ಬಿಜೆಪಿ ಸದಸ್ಯರು ಕಾಂಗ್ರೆಸ್‌ ಅಭ್ಯರ್ಥಿ ಪರ ಕೈ ಎತ್ತುವ ಮೂಲಕ ಅಚ್ಚರಿ ಮೂಡಿಸಿದರು. ಕೊನೆಯಲ್ಲಿ ಕಾಂಗ್ರೆಸ್‌
ಅಭ್ಯರ್ಥಿ ಉಪಾಧ್ಯಕ್ಷರಾಗಿ ಆಯ್ಕೆಯಾದರು, 

Advertisement

ವಿಜಯೋತ್ಸವ: ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದಂತೆ ಕಾಂಗ್ರೆಸ್‌ ಕಾರ್ಯರ್ತರು ಶಾಸಕ ಶಿವಾನಂದ ಪಾಟೀಲ ಪರ ಘೋಷಣೆ ಕೂಗಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ನಂತರ ಜರುಗಿದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಆಯ್ಕೆಯಾದ ಶ್ರೀದೇವಿ ಲಮಾಣಿ ಅವರನ್ನು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಹಾಗೂ ಕಾರ್ಯಕರ್ತರು ಸನ್ಮಾನಿಸಿದರು.

ಈ ವೇಳೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಪುರಸಭೆ ಒಟ್ಟು 23 ಸದಸ್ಯರಲ್ಲಿ 13 ಸದಸ್ಯರು ಕಾಂಗ್ರೆಸ್‌ ಪರವಾಗಿದ್ದರು. ಬಿಜೆಪಿ ಕುತಂತ್ರದಿಂದ ಕೆಲ ಸದಸ್ಯರು ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸದರು ಕೂಡ ಕೆಲ ಬಿಜೆಪಿ ಸದಸ್ಯರು ಕಾಂಗ್ರೆಸ್‌ಗೆ ಬೆಂಬಲಿಸುವುದರ ಮೂಲಕ ಬಿಜೆಪಿ ಉಪಾಧ್ಯಕ್ಷ ಸ್ಥಾನ ಪಡೆಯವಲ್ಲಿ ವಿಫಲಾಗಿದೆ ಎಂದರು.

ಶಾಸಕ ಶಿವಾನಂದ ಪಾಟೀಲ ಅವರ ಮಾರ್ಗದರ್ಶನ ಜೊತೆಗೆ ಪುರಸಭೆ ಸದಸ್ಯರ ಬೆಂಬಲದಿಂದ ಮತ್ತೆ ಪುರಸಭೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮುಂದೆ ಎಲ್ಲ ಸದಸ್ಯರು ಪಕ್ಷಾತೀತವಾಗಿ ಪಟ್ಟಣದ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಹರೀಶ ಅಗರವಾಲ, ಬಸವರಾಜ ಕೋಟಿ, ನಿಸಾರ ಚೌಧರಿ, ಶಂಕರಗೌಡ ಬಿರಾದಾರ, ಭರತ ಅಗರವಾಲ, ಸಂಗಮೇಶ ಒಲೇಕಾರ, ಮಹಾಂತೇಶ ಹಂಜಗಿ, ರವಿ ರಾಠೊಡ, ದಯಾನಂದ ಜಾಲಗೇರಿ, ವಿಶ್ವನಾಥ ನಿಡಗುಂದಿ, ಅಜೀಜ್‌ ಭಾಗವಾನ, ಮುತ್ತು ಉಕ್ಕಲಿ, ಕಾಶೀನಾಥ ರಾಠೊಡ, ಸಂಜೀವ ಕಲ್ಯಾಣಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next