Advertisement

ಶ್ರೀದೇವಿ ಏಕೆ ಅಜ್ಜಿ ಆಗೋಲ್ಲ? 53ರ ನಟಿಯ 4 ಫೇಸ್‌ಪ್ಯಾಕ್‌ ಗುಟ್ಟು

03:45 AM Jul 19, 2017 | Harsha Rao |

ಶ್ರೀದೇವಿ ಅವರ ವಯಸ್ಸು 53. ಬಹುಶಃ ಈ ವಯಸ್ಸಿನ ಸ್ತ್ರೀಯರಲ್ಲಿ ಮುಪ್ಪಿನ ಕೆಲವು ಚಹರೆಗಳು ಮುತ್ತಿಕೊಳ್ಳುವುದು ಸಹಜ. ಆದರೆ, ಶ್ರೀದೇವಿ ಅಂಥ ಅಪಾಯದಿಂದ ಬಚಾವಾಗಿದ್ದಾದರೂ ಹೇಗೆ? ಅವರೇ ಹೇಳಿರುವ 4 ಫೇಸ್‌ಪ್ಯಾಕ್‌ನಲ್ಲಿ ಚಿರಯವ್ವನದ ಗುಟ್ಟುಗಳಿವೆ… 

Advertisement

ವಯಸ್ಸಿಗೆ ಬಂದ ಮಗಳು ಝಾನ್ವಿ ಇನ್ನೇನು ತೆರೆಮೇಲೆ ಮಿಂಚಲಿದ್ದಾಳೆ. ಆದರೆ, ಈಗಿನ ನಟಿಯರ ಸೌಂದರ್ಯಕ್ಕೆ ಸವಾಲೊಡ್ಡುವಂತೆ ಝಾನ್ವಿಯ ತಾಯಿ, ಬಾಲಿವುಡ್‌ನ‌ ಹಿರಿಯ ನಟಿ ಶ್ರೀದೇವಿ ನಳನಳಿಸುತ್ತಿದ್ದಾರೆ. ಅವರ ಮೊಗದಲ್ಲಿ ಒಂದು ನೆರಿಗೆಯೂ ಮೂಡಿಲ್ಲವೆನ್ನುವುದು ಭಾರತದ ಎಲ್ಲ ನಾರಿಯರಿಗೆ ಈಗಲೂ ಅಚ್ಚರಿಯಾಗುವ ಸಂಗತಿ. 1970  - 80ರ ದಶಕದಲ್ಲಿರುವಂತೆ ಅವರ ಅಂದಚೆಂದ ಈಗಲೂ ಹಸಿರಾಗಿದೆ.

ಅಂದಹಾಗೆ, ಶ್ರೀದೇವಿ ಅವರ ವಯಸ್ಸು 53. ಬಹುಶಃ ಈ ವಯಸ್ಸಿನ ಸ್ತ್ರೀಯರಲ್ಲಿ ಮುಪ್ಪಿನ ಕೆಲವು ಚಹರೆಗಳು ಮುತ್ತಿಕೊಳ್ಳುವುದು ಸಹಜ. ಆದರೆ, ಶ್ರೀದೇವಿ ಅಂಥ ಅಪಾಯದಿಂದ ಬಚಾವಾಗಿದ್ದಾದರೂ ಹೇಗೆ? ಇತ್ತೀಚೆಗೆ ತಮ್ಮ ಬ್ಯೂಟಿ ಸೀಕ್ರೆಟ್‌ ಬಗ್ಗೆ ಶ್ರೀದೇವಿ ಹೇಳಿಕೊಂಡರು. ದಿನಕ್ಕೆ ಏನಿಲ್ಲವೆಂದರೂ 3 ಲೀಟರ್‌ ನೀರು ಕುಡಿಯುತ್ತಾರೆ ಅನ್ನೋದು ಅವರ ಸೌಂದರ್ಯದ ಮೊದಲ ಗುಟ್ಟು. ಇದಲ್ಲದೆ, ಶ್ರೀದೇವಿ ಅವರು ವಾರದಲ್ಲಿ 4 ರೀತಿಯ ಫೇಸ್‌ಪ್ಯಾಕ್‌ ಮಾಡಿಕೊಳ್ತಾರಂತೆ. ಅವ್ಯಾವುವು ಅಂದ್ರೆ…

1. ಇಪತ್ತೈದು ಮಿ.ಲೀ. ಕಿತ್ತಳೆ ರಸದೊಂದಿಗೆ ಒಂದು ಗಳಿತ ಬಾಳೇಹಣ್ಣನ್ನು ಕಿವುಚಿಕೊಂಡು ಪೇಸ್ಟ್‌ ಮಾಡಬೇಕು. ಇದಕ್ಕೆ ತುಸು ಜೇನುರಸವನ್ನು ಬೆರೆಸಿ, ಈ ಪೇಸ್ಟ್‌ ಅನ್ನು ಮುಖಕ್ಕೆ ಹಚ್ಚಿಕೊಳ್ಳಬೇಕು. 20 ನಿಮಿಷದ ಬಳಿಕ ಮುಖವನ್ನು ಉಗುರು ಬೆಚ್ಚನೆಯ ನೀರಿನಲ್ಲಿ ತೊಳೆದುಕೊಳ್ಳಬೇಕು. ಬಾಳೇಹಣ್ಣಿನ ಮಾಯಿಶ್ಚರೈಸರ್‌ ಗುಣ, ಕಿತ್ತಳೆಯಲ್ಲಿನ “ಸಿ’ ವಿಟಮಿನ್‌, ಜೇನುತುಪ್ಪದ ಆ್ಯಂಟಿ ಬ್ಯಾಕ್ಟೀರಿಯಲ್‌ ಗುಣ ಮುಖದ ತ್ವಚೆಯನ್ನು ಕಾಪಾಡುತ್ತವೆ.

2. ಮೂವತ್ತು ಗ್ರಾಮ್‌ ಕಪ್ಪುದ್ರಾಕ್ಷಿಯನ್ನು ಒಂದು ಟೀ ಚಮಚ ಆಲಿವ್‌ ಎಣ್ಣೆಯೊಂದಿಗೆ ಕಿವುಚಬೇಕು. ಇಲ್ಲವೇ, ಅದು ಮೃದುವಾಗುವ ತನಕ ಮಿಕ್ಸಿಯಲ್ಲಿ ರುಬ್ಬಬೇಕು. ಮುಖವನ್ನು ಚೆನ್ನಾಗಿ ತೊಳೆದುಕೊಂಡು, ಅದರ ಮೇಲೆ ಈ ಪೇಸ್ಟ್‌ ಅನ್ನು ಲೇಪಿಸಿಕೊಳ್ಳಬೇಕು. 10 ನಿಮಿಷದ ಬಳಿಕ ಮುಖ ತೊಳೆದುಕೊಳ್ಳಬೇಕು. ಇವೆರಡರ ವಿಟಮಿನ್‌ “ಇ’ ಅಂಶ ಚರ್ಮವನ್ನು ಮೃದುವಾಗಿಸುವುದಲ್ಲದೆ, ಡೆಡ್‌ ಸ್ಕಿನ್‌ ಅನ್ನೂ ದೂರವಾಗಿಸುತ್ತದೆ.

Advertisement

3. ಬೆಣ್ಣೆ ಹಣ್ಣನ್ನು ಚೆನ್ನಾಗಿ ಕಿವುಚಿಕೊಂಡು, ಇದಕ್ಕೆ ಮೊಟ್ಟೆಯ ಹಳದಿ ಭಾಗ ಮತ್ತು ಮೊಸರನ್ನು ಬೆರೆಸಬೇಕು. ಇದನ್ನು ತಿರುಗಿಸಬೇಕು. ಮುಖ ಮತ್ತು ಕತ್ತಿನ ಭಾಗದಲ್ಲಿ ಈ ಪೇಸ್ಟ್‌ ಅನ್ನು ಹಚ್ಚಿಕೊಂಡು, 15 ನಿಮಿಷದ ಬಳಿಕ ತೊಳೆದುಕೊಳ್ಳಬೇಕು. ಮೊಟ್ಟೆಯ ಹಳದಿ ಭಾಗ ವಿಟಮಿನ್‌, ಬೆಣ್ಣೆ ಹಣ್ಣಿನ ಫ್ಯಾಟಿ ಆ್ಯಸಿಡ್‌, ಮೊಸರಿನ ಪ್ರೊಟೀನ್‌ಗಳ ಒಣ ಚರ್ಮ ಸಮಸ್ಯೆಯನ್ನು ನಿವಾರಿಸುತ್ತವೆ.

4. ಅರ್ಧ ಕಪ್‌ ಸ್ಟ್ರಾಬೆರ್ರಿ ಪೇಸ್ಟ್‌, ಓಟ್‌ಮೀಲ್‌ ಪುಡಿಯನ್ನು ಚೆನ್ನಾಗಿ ಮಿಕ್ಸ್‌ ಮಾಡಿಕೊಂಡ ಮೇಲೆ ಅದಕ್ಕೆ ಒಂದು ಟೀ ಚಮಚ ಲಿಂಬೆಹಣ್ಣಿನ ರಸವನ್ನು ಬೆರೆಸಬೇಕು. ಇದನ್ನು ಅರ್ಧ ನಿಮಿಷ ಚೆನ್ನಾಗಿ ತಿರುಗಿಸಬೇಕು. ಈ ಪೇಸ್ಟ್‌ ಅನ್ನು ಮುಖಕ್ಕೆ ಲೇಪಿಸಿಕೊಂಡು, 20 ನಿಮಿಷದ ಬಳಿಕ ಚೆನ್ನಾಗಿ ತೊಳೆದುಕೊಳ್ಳಬೇಕು. ಇವುಗಳಲ್ಲಿನ ವಿಟಮಿನ್‌, ಆ್ಯಂಟಿ ಆಕ್ಸಿಡೆಂಟ್ಸ್‌ ಅಂಶಗಳು ಎಣ್ಣೆ ಚರ್ಮ, ಮೊಡವೆ, ಕಪ್ಪುಕಲೆಗಳನ್ನು ದೂರ ಮಾಡುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next