Advertisement

ಸಮಚಿತ್ತದ ಬಹುನಿಧಿ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ

12:54 AM Dec 15, 2023 | Team Udayavani |

ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ 60 ತುಂಬುತ್ತಿರುವ ಹಿನ್ನೆಲೆಯಲ್ಲಿ ಡಿ.16ರಂದು ಉಡುಪಿಯಲ್ಲಿ ಷಷ್ಟ್ಯ ಬ್ದ ಅಭಿವಂದನ ಸಮಾರಂಭ ಜರಗುತ್ತಿದೆ. 1964ರ ಮಾರ್ಚ್‌ 3ರಂದು ಮಂಗಳೂರು ತಾಲೂಕು ಪಕ್ಷಿಕೆರೆಯಲ್ಲಿ ಜನಿಸಿದ ದೇವಿದಾಸರು 1988ರ ಫೆಬ್ರವರಿ 20ರಂದು ಸನ್ಯಾಸಾಶ್ರಮ ಸ್ವೀಕರಿಸಿ ಶ್ರೀವಿಶ್ವೇಶತೀರ್ಥ ಶ್ರೀಪಾದರ ಉತ್ತರಾಧಿಕಾರಿಗಳಾಗಿ ಶ್ರೀವಿಶ್ವಪ್ರಸನ್ನತೀರ್ಥರಾದರು.ಶ್ರೀಗಳಿಗೆ 60 ಸಂವತ್ಸರ ಆಗುವಾಗ ಅಯೋಧ್ಯೆ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿಯಾಗಿ ನಿಯುಕ್ತಿಗೊಂಡಿರುವುದು ವಿಶೇಷ.

Advertisement

ಭಗವದ್ಗೀತೆಯಲ್ಲಿ ಸಮಚಿತ್ತ ಎಂಬ ಪದ ಪ್ರಯೋಗ ಬಹಳ ಮಹತ್ವ ಪಡೆದುಕೊಂಡಿದೆ. ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರಲ್ಲಿ ಚತುರ್ವೇದ, ಸಂಸ್ಕೃತ ಸಾಹಿತ್ಯ, ವೇದಾಂತ, ಯೋಗಪಟುತ್ವ, ಈಜುತಜ್ಞ, ಪಕ್ಷಿ- ಪ್ರಾಣಿಗಳ ಜ್ಞಾನ ಹೀಗೆ ಅನೇಕಾನೇಕ ನಿಧಿಗಳಿ ದ್ದರೂ ಅವರು ಸದಾ “ಸಮಚಿತ್ತ’ರಂತೆ ಕಂಡು ಬರುತ್ತಾರೆ. ಇದು ಅವರ ಜನ್ಮಜಾತ ಗುಣವಿರ ಬಹುದು ಎಂಬುದು ಪೂರ್ವಾಶ್ರಮದಲ್ಲಿಯೇ ಕಂಡುಬರುತ್ತಿತ್ತು.
1986 -87ರಲ್ಲಿ ಕೊಕ್ಕರ್ಣೆ ಸಮೀಪದ ಸೂರಾ ಲಿನ ಮಣ್ಣಿನ ಅರಮನೆಯಲ್ಲಿ ಪೂರ್ಣಪ್ರಜ್ಞ ಕಾಲೇಜು ಹಾಗೂ ಸಂಧ್ಯಾ ಕಾಲೇಜುಗಳ ಸುಮಾರು 250 ವಿದ್ಯಾರ್ಥಿಗಳ ಎನ್ನೆಸ್ಸೆಸ್‌ ವಾರ್ಷಿಕ ಶಿಬಿರ ನಡೆಯುತ್ತಿತ್ತು. ಸುಮಾರು 300 ಎಕ್ರೆ ಬಯಲಿಗೆ ಮಳೆಗಾಲವಿಡೀ ನೀರುಣಿಸುವ 4 ಕಿ.ಮೀ. ದೂರದ ಬೃಹತ್‌ ಕಣಿದಂಡೆಯ ಹೂಳೆತ್ತುವ ಕೆಲಸ. ಅವಿಸ್ಮರಣೀಯ ಕ್ಯಾಂಪ್‌ನಲ್ಲಿ ಸಂಧ್ಯಾಕಾಲೇಜಿನ ವಿದ್ಯಾರ್ಥಿ ದೇವೀದಾಸ ಭಟ್ಟ ಉಗ್ರಾಣದ ಇನ್‌ಚಾರ್ಜ್‌. ಕೆಲವು ದಿನಗಳಾದ ಮೇಲೆ ತಿಳಿಯಿತು ಬರೇ ಅವಲಕ್ಕಿ ತಿಂದು ನೀರು ಕುಡಿದುಕೊಂಡು ಇರುವವ ಈ ವಿದ್ಯಾರ್ಥಿ ಅಂತ. ಸಂಜೆ ಮನೋರಂಜನ ಕಾರ್ಯಕ್ರಮದಲ್ಲಿ ಅಂಗಾತ ಮಲಗಿ ಹೊಟ್ಟೆಯ ಮೇಲೆ ಮೂರು ಚಿಕ್ಕ ಮಕ್ಕಳನ್ನು ಕುಳ್ಳಿರಿಸಿಕೊಂಡು ಯೋಗಾಸನ ಪ್ರದರ್ಶನ ಮಾಡುತ್ತಿದ್ದ. ಊಟದ ಬಗ್ಗೆ ಕೇಳಿದರೆ ನಾನು ಹೀಗೆಯೇ ಇರುವುದು ಎನ್ನುವ ನಗು ಮೊಗದ ಉತ್ತರ ಬಂತು.

ಸಂಜೆ ಉಡುಪಿ ಕಾಲೇಜಿನಲ್ಲಿ ಕ್ಲಾಸಿಲ್ಲದಿದ್ದರೆ ಡೇ ಕಾಲೇಜಿನ ನನ್ನೊಂದಿಗೆ ಖಗೋಳ ವಿಜ್ಞಾನ, ಪಂಚಾಂಗ, ಭೌತ ವಿಜ್ಞಾನದ ಬಗ್ಗೆ ಚರ್ಚೆ ನಡೆಸುತ್ತಿದ್ದ. ಆ ವರ್ಷ ನಮ್ಮ ಟೀಚರ್ ಡೇ ದಿವಸ ತಾನೇ ಮಾಡಿದ ಗ್ರೀಟಿಂಗ್‌ ಕಾರ್ಡ್‌ನಲ್ಲಿ ನನಗೆ ಶುಭಾಶಯ ಕೋರಿದ್ದ.

ಪರಿಚಯವಾದ ಕೆಲವು ಸಮಯದ ಅನಂತರ ಒಂದು ದಿನ ಬಂದು ನಾಳೆ ನಾನು ಸನ್ಯಾಸ ದೀಕ್ಷೆ ತೆಗೆದುಕೊಳ್ಳುವೆ ಎಂದಾಗ ನನಗೆ ಅದೇನೋ ಸಂಕಟವೆನಿಸಿತು. ಇದು ಸಾಧ್ಯವೇ ಎಂದಾಗ ತಾನು ಸುಮಾರು 10 ವರ್ಷದಿಂದ ಸ್ವಾಮಿ ಗಳೊಂದಿಗೆ ಇದ್ದೇನೆ. ಪ್ರಯತ್ನಿಸುವೆ ಎಂಬ ನಮ್ರ ತೆಯ ಉತ್ತರವಿತ್ತ. ಈತನೇ ಪೇಜಾವರ ಮಠದ ವಾಮನರೂಪಿ, ತ್ರಿವಿಕ್ರಮ ಸಾಧಕ ಶ್ರೀವಿಶ್ವೇ ಶತೀರ್ಥ ಶ್ರೀಪಾದರ ಉತ್ತರಾಧಿಕಾರಿ ಶ್ರೀವಿಶ್ವ ಪ್ರಸನ್ನತೀರ್ಥ ಶ್ರೀಪಾದರು, ಈಗಂತೂ ಅಯೋ ಧ್ಯೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ದಕ್ಷಿಣ ಭಾರತದ ಏಕೈಕ ಟ್ರಸ್ಟಿ.

ಪಾದಯಾತ್ರೆಗೆ 30 ವರ್ಷ
ಸನ್ಯಾಸ ದೀಕ್ಷೆಯ ಅನಂತರ ಒಮ್ಮೆ ಪೂಜೆಯ ಸಮಯವಾದ ಕಾರಣ ತಿರುಪತಿ ಬೆಟ್ಟವನ್ನು ಹತ್ತುವ ಅವಕಾಶ ದೊರಕಲಿಲ್ಲ. ಅಲ್ಲೇ ಅವರು ನಿಶ್ಚಯಿಸಿದರು ಪಾದಯಾತ್ರೆಯನ್ನು. ಉಡುಪಿ ಯಿಂದ ದೇವರ ಪೆಟ್ಟಿಗೆ ಹೊತ್ತುಕೊಂಡು ತಿರು ಪತಿಗೆ ಪಾದಯಾತ್ರೆ ಪ್ರಾರಂಭಿಸಿದರು. ಅಲ್ಲಿಂದ ಅನಂತರ ನಡೆದುಕೊಂಡೇ ಇಡೀ ಭಾರತದಲ್ಲಿ ಅನೇಕ ಬಾರಿ ಪಾದಯಾತ್ರೆ ನಡೆಯಿತು. ನಡೆದು ಯಾತ್ರೆ ಮಾಡುವಾಗ ಮೈ ಮನ ಆ ಸ್ಥಳಗ ಳೊಂದಿಗೆ ಸ್ಪಂದಿಸುತ್ತವೆ ಎನ್ನುತ್ತಿದ್ದರು. ಪ್ರತೀ ಬಾರಿ ಸುಮಾರು 300 ಕಿ.ಮೀ. ಎಂಟು ಹತ್ತು ದಿನಗಳಲ್ಲಿ ಕ್ರಮಿಸುವುದು, ದಿನಕ್ಕೆ ಸುಮಾರು 40 ಕಿ.ಮೀ. ನಡೆಯುವುದು. ಅದೇ ವ್ರತ. ಇವರು ಏನೇ ಕಾರ್ಯ ಕೈಗೊಂಡರೂ ಅದೊಂದು ವ್ರತವೇ. ದೂರದೂರದ ನಡಿಗೆಗಳಲ್ಲಿ ಪ್ರಕೃತಿಯೊಂದಿಗೆ ಜನಜೀವನ ನೋಡುತ್ತಾ ನದಿತಟ, ಶಾಲೆ, ದೇವ ಸ್ಥಾನಗಳಲ್ಲಿ ವಿಶ್ರಮಿಸಿ ನಡೆಯುವುದು ಅತ್ಯಂತ ಪ್ರೀತಿಯ ಸಂತೋಷದ ಪೂಜೆ. ಅವರ ನಡಿಗೆ ಅಂದರೆ ಬರಿಗಾಲಿನಲ್ಲಿ. ಇದರಿಂದ ದೇಹಕ್ಕೆ ತುಸು ಕಷ್ಟವಾದರೂ ಅವರು ಸ್ವಸಂತೋಷದಿಂದ ಸ್ವೀಕರಿ ಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಜವಾಬ್ದಾರಿ ಹೆಚ್ಚಿಗೆಯಾದ ಕಾರಣ ವರ್ಷಕ್ಕೆ ಒಮ್ಮೆ ಉಡುಪಿ ಯಿಂದ ನೀಲಾವರದ ಗೋಶಾಲೆವರೆಗೆ ಮಾತ್ರ ಪಾದಯಾತ್ರೆ ನಡೆಸುತ್ತಾರೆ. ಶ್ರೀಪಾದರಿಗೆ 60 ವರ್ಷ ತುಂಬುವಾಗ 1993ರಿಂದ ನಡೆಯು ತ್ತಿರುವ ಪಾದಯಾತ್ರೆಗೆ 30 ವರ್ಷ ತುಂಬುತ್ತಿದೆ.

Advertisement

ಯೋಗಾಸನ ಲೀಲಾಜಾಲ
ಪಾದಯಾತ್ರೆಯಲ್ಲೊಮ್ಮೆ ಮಗುವೊಂದು ಕೇಳಿತೆಂದು ಅನೇಕ ವಿಧದ ಯೋಗಾಸನಗಳನ್ನು ಎಲ್ಲರ ಎದುರೇ ಲೀಲಾಜಾಲವಾಗಿ ಮಾಡಿದ್ದರು. ಸುಮಾರು ನೂರರವರೆಗೂ ಆಸನಗಳು ಅವರಿಗೆ ಕರತಲಾಮಲಕ. ನಾನೊಮ್ಮೆ ಇದನ್ನು ರೆಕಾರ್ಡ್‌ ಮಾಡಬೇಕೆಂದಾಗ “ಇವೆಲ್ಲ ಪ್ರದರ್ಶನಕ್ಕಲ್ಲ’ ಎಂದಿದ್ದರು. ಆದರೂ ನನ್ನ ಹಠ ಬಿಡದಾಗ ಅನೇಕ ಆಸನಗಳನ್ನು ಹಾಗೂ ಈಜಾಟದಲ್ಲಿ ಅನೇಕ ಕಠಿನ ಸ್ಟ್ರೋಕ್‌ಗಳನ್ನು, ಜಲಸ್ತಂಭನಗಳನ್ನು ಮಾಡಿದ್ದರು. ಯೋಗಾಸನ, ಈಜಿನ ಸ್ಟ್ರೋಕ್‌ ವೈವಿಧ್ಯಗಳನ್ನು ಈ ವಯಸ್ಸಿನಲ್ಲಿಯೂ ಲೀಲಾಜಾಲವಾಗಿ ಮಾಡು ತ್ತಾರೆ. ದೇಹವು ನಾವು ಹೇಳಿದಂತೆ ಕೇಳುತ್ತದೆ ಎಂಬ ಸಿದ್ಧಾಂತವನ್ನು ಪ್ರಾಯೋಗಿಕವಾಗಿ ಕಂಡ ವರು ಇವರು.

ಸಸ್ಯಶಾಸ್ತ್ರ-ಪ್ರಾಣಿಶಾಸ್ತ್ರಾಸಕ್ತಿ
ಸಸ್ಯ ಶಾಸ್ತ್ರ ತಜ್ಞ ದಿ| ಡಾ| ಗೋಪಾಲಕೃಷ್ಣ ಭಟ್ಟರು ಒಮ್ಮೆ ಸ್ವಾಮೀಜಿಗಳ ಗಿಡಗಳ ಬಗ್ಗೆ ಇರುವ ಜ್ಞಾನದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿ ಡಾಕ್ಟರೆಟ್‌ ಪಡೆದವರಿಗೂ ಸಸ್ಯಗಳ ಇಷ್ಟು ಪರಿಚಯವಿರುವುದಿಲ್ಲ ಎಂದಿದ್ದರು. ಮಧ್ವ ಸರೋವರಕ್ಕೆ ಬೆಳಗಿನ ಜಾವ ಅನೇಕ ಪಕ್ಷಿಗಳು ಬರುವುದನ್ನು ಗಮನಿಸಿ ಒಮ್ಮೆ ಒಂದು ಗಿಡುಗನ ಜಾತಿಯ ದೊಡ್ಡ ಪಕ್ಷಿ ಬಂದಾಗ ಅದರ ಬಗ್ಗೆ ಸವಿವರ ಮಾಹಿತಿಯನ್ನು ಪಕ್ಷಿ ಶಾಸ್ತ್ರ ತಜ್ಞ ಡಾ| ಎನ್‌. ಎ. ಮಧ್ಯಸ್ಥರಿಂದ ಪಡೆದುಕೊಂಡಿದ್ದರಂತೆ. ಸ್ವಾಮಿಗಳ ಆಸಕ್ತಿ ಮಧ್ಯಸ್ಥರಿಗೆ ಅಚ್ಚರಿ ತಂದಿತ್ತು. ಮೈಸೂರಿನ ಜನ ನಿಬಿಡ ರಸ್ತೆಯಲ್ಲಿ ಚಕ್ರದಡಿ ಸಿಕ್ಕಿದ ಸರ್ಪದಿಂದಾಗಿ ಟ್ರಾಫಿಕ್‌ ಜಾಮ್‌ ಆಗಿತ್ತು. ಸ್ವಾಮಿಗಳು ಕಾರಿಂದ ಇಳಿದು ಅಲ್ಲಿಗೆ ಹೋಗಿ ಪೇಪರ್‌ನಿಂದ ಅದನ್ನು ಹಿಡಿದು ಅದರ ಆರೋಗ್ಯ ಪರಿಶೀಲಿಸಿ ದೂರ ಬಿಟ್ಟಿದ್ದರು.

ಗೋಶಾಲೆಗಳು: ಒಮ್ಮೆ ಕಟುಕರು ಹಿಡಿದ ದನಗಳನ್ನು ಪೋಲಿಸ್‌ ಸ್ಟೇಶನ್‌ನಲ್ಲಿ ನೋಡಿದರಂತೆ. ಕಣ್ಣೀರು ಸುರಿಸುತ್ತಿದ್ದ ಆ ದನಗಳನ್ನು ನೋಡಿ ಅವರಲ್ಲಿ ಕೇಳಿ ಗೋ ಶಾಲೆ ಪ್ರಾರಂಭಿಸಿಯೇ ಬಿಟ್ಟರು. ಅದೀಗ ಸಾವಿರಾರು ದನಗಳ ಅನೇಕ ಗೋ ಶಾಲೆಗಳಾಗಿವೆ. ಅವರ ಗುರುಗಳಿಗೇ ಆಶ್ಚರ್ಯ. ತಮ್ಮ ಶಿಷ್ಯರ ಗೋ ಪಾಲನೆ ಬಗೆಗೆ ಗುರುಗಳು ಸದಾ ಮೆಚ್ಚುಗೆ ಸೂಚಿಸುತ್ತಿದ್ದರು. ತಮಗೆ ಬಂದ ಕಾಣಿಕೆಗಳಲ್ಲಿ ಬಹುಅಂಶವನ್ನು ಗೋಶಾಲೆಗಾಗಿಯೇ ಮೀಸಲಿ ಡುತ್ತಾರೆ. ನೀಲಾವರದಂತೆ ಕೊಡವೂರು, ಹೆಬ್ರಿ ಕಬ್ಬಿನಾಲೆಯಲ್ಲಿಯೂ ಗೋಶಾಲೆಗಳಿವೆ.

“ಶಿಷ್ಯೋತ್ತಮತೀರ್ಥರು”
ವರ್ಷ ಅರವತ್ತಾದರೂ, ಸನ್ಯಾಸಾಶ್ರಮ ಸ್ವೀಕರಿಸಿ 35 ವರ್ಷವಾಗಿದ್ದರೂ ಪರ್ಯಾಯ ಪೀಠವೇರುವ ಸಂದರ್ಭ ಬಂದಾಗ ಗುರುಗಳ ಪಂಚಮ ಪರ್ಯಾಯ ಮಾಡಿಸಿ ಶಿಷೊÂàತ್ತಮ ರಾದವರು ಶ್ರೀವಿಶ್ವಪ್ರಸನ್ನರು. ಗುರು ಶ್ರೀವಿಶ್ವೇ ಶತೀರ್ಥ ಶ್ರೀಪಾದರು 1980ರಿಂದ ಅಯೋ ಧ್ಯೆಯ ರಾಮಜನ್ಮಭೂಮಿ ಆಂದೋಲನದಲ್ಲಿ ಸಕ್ರಿಯರಾಗಿದ್ದವರು. 1992ರ ಡಿ. 7ರ ಪ್ರಾತಃ ಕಾಲ ಅಚಾನಕ್ಕಾಗಿ ಶ್ರೀವಿಶ್ವೇಶತೀರ್ಥ ಶ್ರೀಪಾದ ರಿಗೆ ರಾಮಲಲ್ಲಾನನ್ನು ಪ್ರತಿಷ್ಠಾಪಿಸುವ ಭಾಗ್ಯ ಒದಗಿತ್ತು. ಇದೀಗ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಟ್ರಸ್ಟಿಯಾಗಿ ಅಯೋಧ್ಯೆಯಲ್ಲಿ ಶ್ರೀ ರಾಮನ ಮಂದಿರದ ಪ್ರತಿಷ್ಠಾಪನೆಯ ಸಂಪೂ ರ್ಣ ಹೊಣೆ ಶಿಷ್ಯ ಶ್ರೀವಿಶ್ವಪ್ರಸನ್ನತೀರ್ಥರಿಗೆ ಲಭಿ ಸಿದೆ. ಅಯೋಧ್ಯೆಯಲ್ಲಿ ರಾಮದೇವರ ವೈಭವ ಪುನಃಸ್ಥಾಪನೆಯಾಗುವಾಗ ಉಡುಪಿಯ, ಕರ್ನಾ ಟಕದ ಅಳಿಲು ಸೇವೆ ಸಲ್ಲುತ್ತಿರುವುದು ದಕ್ಷಿಣ ಕನ್ನಡಿಗರು, ಕನ್ನಡಿಗರು, ದಕ್ಷಿಣ ಭಾರತೀಯರಿಗೆ ಹೆಮ್ಮೆ.

ಡಾ| ಎ.ಪಿ. ಭಟ್‌, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next