Advertisement
ವಿಜಯ ರಥಾರೂಢಳಾದ ಶ್ರೀ ಮಹಾಲಸಾ ದೇವಿಯ ಮೃಗಯಾತ್ರಾ ಮಹೋತ್ಸವವು ನಡೆದ ಬಳಿಕ ಸ್ವರ್ಣ ರಥೋತ್ಸವವು ಜರಗಿತು.
ಎ. 11ರಂದು ಶ್ರೀ ವೆಂಕಟ್ರಮಣ ದೇವರ ಮತ್ತು ಶ್ರೀ ಮಹಾಲಸಾ ನಾರಾಯಣಿ ದೇವಿಯ ಬ್ರಹ್ಮ ರಥೋತ್ಸವ ನಡೆಯಲಿದೆ. ಬೆಳಗ್ಗೆ ಪ್ರಾರ್ಥನೆಯಿಂದ ಮೊದಲ್ಗೊಂಡು ಪಂಚಾಮೃತಾಭಿಷೇಕ, ಶತಕ ಲಶಾಭಿಷೇಕ, ಕನಕಾಭಿಷೇಕ, ಗಂಗಾಭಿಷೇಕ, ಮಹಾಪೂಜೆ ನಂತರ ಯಜ್ಞಮಂಟಪದಲ್ಲಿ ಪೂರ್ಣಾಹುತಿ, ಆರತಿ, ಮಹಾಬಲಿ, ಬಳಿಕ ರಥಪೂಜೆ ನಡೆಸಿ, ಶ್ರೀ ದೇವರು ಬ್ರಹ್ಮರಥದಲ್ಲಿ ವಿರಾಜಮಾನರಾಗಿ ವೈವಭದಲ್ಲಿ ಬ್ರಹ್ಮರಥೋತ್ಸವವು ಸಂಪನ್ನವಾಗಲಿದೆ. ಎ. 12ರಂದು ಧ್ವಜಪೂಜೆ, ಚೂರ್ಣೋತ್ಸವ, ವಸಂತ ಪೂಜೆ, ಅವಭೃಥೋತ್ಸವ, ಧ್ವಜ ವಿಸರ್ಜನೆ, ಅಂಕುರ ಪ್ರಸಾದ ವಿತರಣೆ, ಸಂಪ್ರೋಕ್ಷಣೆ ಮತ್ತು ಮಹಾಪೂಜೆ ನಡೆಯಲಿದೆ.