Advertisement

ವಿಜೃಂಭಣೆಯ ಶ್ರೀ ತ್ರಿಪುರ ಸುಂದರಿ ಅಮ್ಮನ ಬಂಡೀ ಉತ್ಸವ

01:03 PM Jan 02, 2018 | Team Udayavani |

ತಿ.ನರಸೀಪುರ: ಸಹಸ್ರಾರು ಭಕ್ತರ ಸಂಭ್ರಮ, ಸಡಗರದೊಂದಿಗೆ ತಾಲೂಕಿನ ಮೂಗೂರು ಗ್ರಾಮದಲ್ಲಿ ಸೋಮವಾರ ಶ್ರೀ ತ್ರಿಪುರ ಸುಂದರಿ ಅಮ್ಮನ ಬಂಡೀ ಉತ್ಸವ ವಿಜೃಂಭಣೆಯಿಂದ ರೋಮಾಂಚನಕಾರಿಯಾಗಿ ನಡೆಯಿತು.

Advertisement

ತಾಲೂಕಿನ ಮೂಗೂರು ಗ್ರಾಮದಲ್ಲಿ ಪುರಾತನ ಪ್ರಸಿದ್ಧ ಗ್ರಾಮದೇವತೆ ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರೋತ್ಸವವು ಹಬ್ಬದ ಸಂಭ್ರಮದೊಂದಿಗೆ ರಂಗೇರುತ್ತಿದ್ದು, ಅಲಂಕಾರಗೊಂಡ ಬಂಡಿಗೆ ಜೋಡಿ ಎತ್ತುಗಳನ್ನು ಕಟ್ಟಿ ರಭಸವಾಗಿ ಓಡಿಸುವ ಉತ್ಸವವನ್ನು ಭಕ್ತಿ ಭಾವದಿಂದ ನೆರೆದಿದ್ದ ಜನಸ್ತೋಮ ಕಣ್ತುಂಬಿಕೊಂಡರು.

ಬಂಡಿ ಉತ್ಸವ: ಹೊಸ ವರ್ಷದ ದಿನದಂದು ಈ ಬಾರಿ ಬಂಡಿ ಉತ್ಸವ ನಡೆದ ಹಿನ್ನೆಲೆಯಲ್ಲಿ ಅಮ್ಮನವರ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕೈಕಂರ್ಯಗಳು ನಡೆದವು. ರುದ್ರಾಕ್ಷಿ ಮಂಟಪೋತ್ಸವ ನಡೆದ ನಂತರ ರುದ್ರಾಕ್ಷಿ ಮಂಟಪದೊಂದಿಗೆ ಕಬ್ಬು, ಹೊಂಬಾಳೆ, ಪಟಗಳು, ಬಾಳೆಗೊನೆಯಿಂದ ಅಲಂಕಾರಗೊಂಡಿದ್ದ ಬಂಡಿಯನ್ನು ದೇವಾಲಯದ ಮುಂಭಾಗಕ್ಕೆ ತರಲಾಯಿತು.

ದೇವಾಲಯದಿಂದ ಉತ್ಸವ ಮೂರ್ತಿಯನ್ನು ಹೊತ್ತು ತಂದು ಬಂಡಿಗೆ ಎತ್ತುಗಳನ್ನು ಕಟ್ಟಿ ತೀರ್ಥ ಸಂಪ್ರೋಕ್ಷಣೆ ಮಾಡಿ, ರುದ್ರಾಕ್ಷಿ ಮಂಟಪದಲ್ಲಿ ದೇವರನ್ನು ಪ್ರತಿಷ್ಠಾಪಿಸಲಾಯಿತು. ಹರಕೆ ಹೊತ್ತಿದ್ದ ಭಕ್ತರು ಬಂಡಿ ಚಕ್ರಗಳಿಗೆ ಇಡುಗಾಯಿ ಒಡೆದ ಬಳಿಕ ಬಂಡಿ ಬೀದಿಯಲ್ಲಿ ಮೆರವಣಿಗೆ ನಡೆಸಿ ಮಂಟದ ಬಳಿಗೆ ತೆರಳಿ ಮಂಟಪದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ಬಳಿಕ ಬಂಡಿ ಉತ್ಸವ ವಿದ್ಯುಕ್ತವಾಗಿ ಆರಂಭವಾಯಿತು.

ವಾಡಿಕೆಯಂತೆ ಕೆಂಪಣ್ಣ ಕುಟುಂಬ ಮೊದಲ ಬಂಡಿ ಸೇವೆಯನ್ನು ಸಲ್ಲಿಸಿದ ನಂತರ ಎಲ್ಲರೂ ತಮ್ಮ ಎತ್ತುಗಳನ್ನು ಕಟ್ಟಿ ಒಡಿಸುವ ಮೂಲಕ ಬಂಡಿ ಉತ್ಸವಕ್ಕೆ ಕಳೆಯನ್ನು ತಂದರು. ಪ್ರಧಾನ ಅರ್ಚಕ ಎಂ.ಡಿ.ಸುಂದರಪ್ಪ ಸೇರಿದಂತೆ ಆಗಮಿಕರಾದ ರವಿ, ಕುಮಾರ ಹಾಗೂ ನಂಜುಂಡಸ್ವಾಮಿ ತಂಡ ಧಾರ್ಮಿಕ ವಿಧಿವಿಧಾನಗಳನ್ನು ನೇರವೇರಿಸಿದರು.

Advertisement

ತಹಶೀಲ್ದಾರ್‌ ಪೂಜೆ: ತಹಶೀಲ್ದಾರ್‌ ಬಸವರಾಜು ಚಿಗರಿ ಅವರು ಉತ್ಸವದಲ್ಲಿ ಭಾಗವಹಿಸಿ ಪೂಜೆಯನ್ನು ಸಲ್ಲಿಸಿದರು. ಮಂಡಲ ಪಂಚಾಯಿತಿ ಮಾಜಿ ಪ್ರಧಾನ ಎಂ.ಡಿ.ಬಸವರಾಜು ಅವರು ಭಕ್ತರೊಂದಿಗೆ ಉತ್ಸವಮೂರ್ತಿಯನ್ನು ಹೊತ್ತು ತರಲು ಹೆಗಲನ್ನು ನೀಡಿದ್ದರು.

ಮಾಜಿ ಶಾಸಕ ಡಾ.ಎನ್‌.ಎಲ್‌.ಭಾರತೀಶಂಕರ್‌, ಸೋಮನಾಥಪುರ ಜಿಪಂ ಸದಸ್ಯ ಎಂ.ಅಶ್ವಿ‌ನ್‌ಕುಮಾರ್‌ ಅವರು ಕೂಡ ಹಬ್ಬದ ಸಂಭ್ರಮದಲ್ಲಿ ಭಾಗವಹಿಸಿದ್ದರು. ತಾಪಂ ಸದಸ್ಯ ಎಂ.ಚಂದ್ರಶೇಖರ, ಪಾರುಪತ್ತೇಗಾರ್‌ ಎಂ.ಬಿ.ಸಾಗರ್‌, ಮಾಜಿ ಪಾರುಪತ್ತೇಗಾರ್‌ ಎಂ.ಎನ್‌.ಸೋಮಣ್ಣ, ಕನ್ನಡಪರ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ, ಮಾಜಿ ಉಪಪ್ರಧಾನ ಎಂ.ಕೆ.ಸಿದ್ದರಾಜು,

ಬಾಬೂಜಿ ಸಂಘದ ಅಧ್ಯಕ್ಷ ಎಂ.ಸಿದ್ದರಾಜು, ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಎಂ.ನಾಗೇಂದ್ರ, ಗ್ರಾ.ಪಂ ಉಪಾಧ್ಯಕ್ಷ ಎಂ.ಬಿ.ರಮೇಶ, ಉಪನ್ಯಾಸಕ ಕುಮಾರಸ್ವಾಮಿ, ಪಿಎಸಿಸಿಎಸ್‌ ಉಪಾಧ್ಯಕ್ಷ ಎಂ.ಶಿವಮೂರ್ತಿ, ಮುಖಂಡರಾದ ಕುಮಾರಸ್ವಾಮಿ, ಸತೀಶ, ಎಂ.ಎಂ.ಜಯಣ್ಣ, ಎಂ.ಪಿ.ಮರಿಸ್ವಾಮಿ, ಮಾರ್ಕೇಟ್‌ ನಾಗರಾಜು, ಎಂ.ಪಿ.ನಿಂಗಪ್ಪ, ಗೌಡ್ರು ಪ್ರಕಾಶ್‌ ಹಾಗೂ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next