Advertisement

19 ಭಾಷೆಗಳಲ್ಲಿ ಶ್ರೀ ಸಿದ್ಧಾಂತ ಶಿಖಾಮಣಿ ಗ್ರಂಥ ಬಿಡುಗಡೆ

10:45 PM Feb 16, 2020 | Lakshmi GovindaRaj |

ವಾರಾಣಸಿ: ವಾರಾಣಸಿಯಲ್ಲಿರುವ ಜಂಗಮ ವಾಡಿ ಮಠದ ಜಗದ್ಗುರು ವಿಶ್ವಾರಾಧ್ಯ ಗುರುಕುಲ ಶತಮಾನೋತ್ಸವ ಆಚರಿಸಿಕೊಳ್ಳುತ್ತಿ ರುವುದು, 21ನೇ ಶತಮಾನದ ಹೊಸ ದಶಕದಲ್ಲಿ ಜಗತ್ತಿಗೆ ಭಾರತದ ಮಹತ್ವ ಸಾರುವ ನಿಟ್ಟಿನಲ್ಲಿ ಪ್ರಮುಖವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

Advertisement

ಉತ್ತರ ಪ್ರದೇಶದ ವಾರಾಣಸಿಯಲ್ಲಿ ಭಾನುವಾರ ಜಂಗಮವಾಡಿ ಮಠದ ಜಗದ್ಗುರು ವಿಶ್ವಾರಾಧ್ಯ ಗುರುಕುಲದ ಶತಮಾನೋತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿ ಸಿದ ಪ್ರಧಾನಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಧಾನಿಯವರು ಹತ್ತೂಂಭತ್ತು ಭಾಷೆಗಳಲ್ಲಿ ಮುದ್ರಣಗೊಂಡಿ ರುವ ಶ್ರೀ ಸಿದ್ಧಾಂತ ಶಿಖಾಮಣಿ ಗ್ರಂಥವನ್ನೂ ಬಿಡುಗಡೆ ಮಾಡಿದರು.

ಮೊಬೈಲ್‌ ಆ್ಯಪ್‌ ಮೂಲಕವೂ ಶ್ರೀ ಸಿದ್ಧಾಂತ ಶಿಖಾಮಣಿ ಗ್ರಂಥವನ್ನು ಓದಲು ಅವಕಾಶ ಮಾಡಿಕೊಡಲಾಗಿದೆ. ಇದರಿಂದಾಗಿ ವಿಶೇಷವಾಗಿ ಯುವ ಸಮುದಾಯದವರಿಗೆ ಹೆಚ್ಚು ಸ್ಫೂರ್ತಿಯಾಗಲಿದೆ ಎಂಬ ವಿಶ್ವಾಸವನ್ನು ಮೋದಿ ವ್ಯಕ್ತಪಡಿಸಿದ್ದಾರೆ. ಇದರ ಜತೆಗೆ ವಾರ್ಷಿಕವಾಗಿ ಗ್ರಂಥದಲ್ಲಿ ಉಲ್ಲೇಖಗೊಂಡಿರುವ ವಿಚಾರಗಳನ್ನು ಆಧರಿಸಿ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲು ಸಲಹೆ ನೀಡಿದ್ದಾರೆ.

“ಪ್ರಜೆಯಾಗಿ ನಾವು ನಡೆದುಕೊಳ್ಳುವ ರೀತಿ ದೇಶದ ಭವಿಷ್ಯತ್ತನ್ನು ಮತ್ತು ಹೊಸ ದಿಕ್ಕನ್ನು ನಿರ್ಧರಿಸಲಿದೆ’ ಎಂದು ಹೇಳಿದ್ದಾರೆ. ಸಂತರು ಹಾಕಿಕೊಟ್ಟ ಮಾರ್ಗವನ್ನು ನಾವು ಅನುಸರಿಸಬೇಕು. ಈ ಮೂಲಕ ದೇಶ ನಿರ್ಮಾಣ ಕಾರ್ಯದಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು ಎಂದಿದ್ದಾರೆ.  ಸ್ವತ್ಛ ಭಾರತದ ಬಗ್ಗೆ ಪ್ರಸ್ತಾಪಿಸಿದ ಅವರು ಶುಚಿತ್ವದ ಬಗ್ಗೆ ಜನರು ನೀಡಿದ ಕೊಡುಗೆಯನ್ನು ಶ್ಲಾಘಿಸಿದರು.

ಇದರ ಜತೆಗೆ ಭಾರತದಲ್ಲಿಯೇ ಉತ್ಪಾದಿಸಲಾಗುವ ವಸ್ತುಗಳನ್ನೇ ಬಳಕೆ ಮಾಡುವಂತೆ ಅವರು ಮನವಿ ಮಾಡಿಕೊಂಡರು. ನೀರು ಉಳಿಸಲು ವಿಶೇಷವಾಗಿ ಆಯೋಜನೆ ಮಾಡಲಾಗಿರುವ “ಜಲ ಜೀವನ್‌ ಮಿಷನ್‌’ನಲ್ಲಿ ಎಲ್ಲರೂ ಭಾಗವಹಿಸಿ ಅದನ್ನು ಯಶಸ್ಸುಗೊಳಿಸುವಂತೆಯೂ ಕರೆ ನೀಡಿದರು. ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿ ಬೆನ್‌ ಪಟೇಲ್‌, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಉಪಸ್ಥಿತರಿದ್ದರು.

Advertisement

ಕನ್ನಡದಲ್ಲಿ ಮಾತನಾಡಿದ ಪ್ರಧಾನಿ: ಕಾರ್ಯಕ್ರಮದಲ್ಲಿ ಪ್ರಧಾನಿಯವರು ಕನ್ನಡದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಅಲ್ಲಿ ಸೇರಿದ್ದವರೆಲ್ಲ ಕರತಾಡನ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದರ ಜತೆಗೆ ತೆಲುಗು, ಮರಾಠಿಗಳಲ್ಲಿಯೂ ಕೂಡ ಅವರು ಕೊಂಚ ಹೊತ್ತು ಮಾತನಾಡಿದರು. ವೀರಶೈವ ಸಂಪ್ರದಾಯ ಜನರನ್ನು ಪರಸ್ಪರ ಗೌರವಿಸುವಂತೆ ಮಾಡಿದೆ ಎಂದರು. ದೇಶ ಕೇವಲ ಆಡಳಿತದಿಂದ ಸಾಗದು. ಅದಕ್ಕೆ ಜತೆಯಾಗಿ ಸಂಸ್ಕೃತಿಯೂ ಬೇಕು. ಯುವಜನತೆಗೆ ಭಕ್ತಿಯ ಪಥದ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದರು. ಜಂಗಮವಾಡಿ ಮಠ ವಾರಾಣಸಿಯಲ್ಲಿರುವ ಅತ್ಯಂತ ಹಳೆಯ ಮಠವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next