Advertisement

ಸಿದ್ದೇಶ್ವರ ಶ್ರೀಗಳಿಂದ ಮಹತ್ಕಾರ್ಯ

01:04 PM Mar 10, 2017 | |

ಧಾರವಾಡ: ವಿಜಯಪುರದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಶ್ರೀಗಳು ನಾಡಿನೆಲ್ಲೆಡೆ ಪ್ರವಚನ ಮೂಲಕ ಧಾರ್ಮಿಕ ಕ್ರಾಂತಿ ಮಾಡುತ್ತಿದ್ದು, ಜನರ ಅಧ್ಯಾತ್ಮ ಹಸಿವು ತಣಿಸುತ್ತಿದ್ದಾರೆ ಎಂದು ಧರ್ಮಸ್ಥಳ ಧರ್ಮಾಧಿಧಿಕಾರಿ ಡಾ|ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು. 

Advertisement

ಸಿದ್ದೇಶ್ವರ ಶ್ರೀಗಳ ಪ್ರವಚನ ಪ್ರಯುಕ್ತ ಕರ್ನಾಟಕ ಕಾಲೇಜ್‌ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ “ಅಹಿಂಸಾ ಜೀವನ ದರ್ಶನ’ ಕುರಿತ ಚಿಂತನ-ಮಂಥನದಲ್ಲಿ ಅವರು ಆಶೀರ್ವಚನ ನೀಡಿದರು. ಮನುಷ್ಯ ಇಂದು ಅನೇಕ ಸಮಸ್ಯೆಗಳ ಪರಿಹಾರಕ್ಕಾಗಿ ನವವಿಧದಿಂದ ಪೂಜೆ, ಪ್ರಾರ್ಥನೆ, ಭಕ್ತಿ, ಆರಾಧನೆ ಹಾಗೂ ಹರಕೆ ಮೂಲಕ ದೇವರನ್ನು ಪ್ರಾರ್ಥಿಸುತ್ತಾನೆ. 

ದಿಢೀರ್‌ ಭಕ್ತಿ, ಕ್ಷಣಿಕ ಭಕ್ತಿ, ಜಿಜ್ಞಾಸೆ ತಣಿಸುವ ಭಕ್ತಿಗಿಂತ ಶಾಶ್ವತ ಭಕ್ತಿ ಮುಖ್ಯ. ಅಂತಹ ಶುದ್ಧ ಜ್ಞಾನ ದಾಸೋಹವನ್ನು ಲಕ್ಷಾಂತರ ಜನರಿಗೆ ಉಣಬಡಿಸುತ್ತಿರುವ ಸಿದ್ದೇಶ್ವರ ಶ್ರೀಗಳ ಕಾರ್ಯ ಶ್ಲಾಘನೀಯ ಎಂದರು. ಇಂದು ನಾವು ವಿದೇಶಗಳಿಗೆ ಜ್ಞಾನದ ರಫು¤ ಮಾಡುತ್ತಿದ್ದರೆ, ಅನೇಕರು ಅಲ್ಲಿಗೂ ಹೋಗಿ ತಮ್ಮ ಜ್ಞಾನವನ್ನು ಹಂಚುತ್ತಿದ್ದಾರೆ. ಇದು ಜ್ಯಾತ್ಯತೀತವಾಗಿದೆ.

ಯೋಗ ಕೂಡ ಧರ್ಮಾತೀತವಾಗಿದೆ. ನಾವು ಆಚಾರಕ್ಕೆ ಒತ್ತು ಕೊಡದೆ ವಿಚಾರಕ್ಕೆ ಆದ್ಯತೆ ನೀಡಬೇಕು. ಅಂತಹ ಮಹಾನ್‌ ಕಾರ್ಯವನ್ನು ಸಿದ್ದೇಶ್ವರ ಶ್ರೀ ಮಾಡುತ್ತಿದ್ದು, ಬದುಕಿಗೆ ಉಪಯುಕ್ತವಾಗುವ ವಿಷಯವನ್ನು ಜನರಿಗೆ ತಿಳಿಸುತ್ತಿದ್ದಾರೆ ಎಂದರು. ವರೂರಿನ ಗುಣಧರ ನಂದಿ ಮಹಾರಾಜರು ಅಹಿಂಸೆ ಜೀವನ ದರ್ಶನ ಕುರಿತು ಉಪನ್ಯಾಸ ನೀಡಿ, ಸಿದ್ದೇಶ್ವರ ಶ್ರೀಗಳು  ಪ್ರವಚನ ಜ್ಞಾನಯೋಗವಿದ್ದಂತೆ. ಅವರು ಜನರಿಗೆ ಜ್ಞಾನಾಮೃತ ಉಣಬಡಿಸುತ್ತಿದ್ದಾರೆ.

ಹರಿದು ಬರುತ್ತಿರುವ ಜನಸಾಗರವೇ ಇದಕ್ಕೆ ಸಾಕ್ಷಿ ಎಂದರು. ಆತ್ಮಾನಂದ ಶ್ರೀಗಳು, ಶ್ರದ್ಧಾನಂದ ಶ್ರೀಗಳು, ತಪೋವನದ ಶ್ರೀಗಳು, ಸಾಹಿತಿ ಡಾ|ಗುರುಲಿಂಗ ಕಾಪಸೆ, ಸೇರಿದಂತೆ ನಾಡಿನ ಹತ್ತಾರು ಮಠಾಧೀಶರು, ಸಹಸ್ರಾರು ಜನರು ಇದ್ದರು.  ಮೃತ್ಯುಂಜಯ ಅಗಡಿ ಪ್ರಾರ್ಥಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಸಕ ಅರವಿಂದ ಬೆಲ್ಲದ ವಂದಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next