Advertisement
ಗುರು ಎಂಬುದು ಜಗತ್ತಿನಲ್ಲಿಯೇ ಬೆಲೆ ಕಟ್ಟಲಾಗದ ಶಕ್ತಿ. ಗುರುವು ಶಿಷ್ಯರಿಗೆ ನಿಜವಾದ ದೇವರಾಗಿರುತ್ತಾರೆ. ಅಂತಹ ಗುರುವಿನ ಸ್ಥಾನಕ್ಕೆ ಎಂದೂ ಚ್ಯುತಿ ಬಾರದಂತೆ ನೋಡಿಕೊಂಡು ಶಿಷ್ಯರನ್ನು ಬೆಳೆಸಬೇಕು. ಆಗ ಮಾತ್ರ ಸಮಾಜ ಗುರುವನ್ನು ಗುರುತಿಸಿ ನೀಡುವ ಸತ್ಕಾರ ಮತ್ತು ಗೌರವಕ್ಕೆ ಬೆಲೆ ಕಟ್ಟಲಾಗದು ಎಂದು ಗುರುವನ್ನು ನೀರಿಗರ ಹಾಗೂ ಶಿಷ್ಯರನ್ನು ಮೀನಿಗೆ ಹೋಲಿಸಿ ಗುರು ಶಿಷ್ಯರ ಬಾಂಧವ್ಯವನ್ನು ವಿವರಿಸಿದರು.
Related Articles
Advertisement
ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ.ನಾಡಗೌಡ ಮಾತನಾಡಿ, ನಮ್ಮ ಕುಟುಂಬ ಬಹು ಹಿಂದಿನಿಂದಲೂ ಮಠದ ಪೂಜ್ಯರನ್ನು ಆರಾಧಿಸುತ್ತ ಬಂದಿದೆ. ಮೇಲಣಗವಿ ಮಠದ ಪೂಜ್ಯರು ನಮ್ಮ ಉತ್ತರ ಕರ್ನಾಟಕ ಭಾಗದವರಾಗಿದ್ದು, ಕ್ರೀಯಾಶೀಲರು, ವಾಗ್ಮಿಗಳು, ಸಾಧಕರಾಗಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಸಿದ್ಧಗಂಗಾ ಮಠದ ವತಿಯಿಂದ ಶ್ರೀ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ಸಿದ್ಧಲಿಂಗ ಸ್ವಾಮೀಜಿ ಗೌರವಿಸಿದರು.
ಮೇಲಣಗವಿ ಮಠದಿಂದ ಸಿದ್ಧಗಂಗಾ ಮಠದ ಪೂಜ್ಯರನ್ನು ಗೌರಸಲಾಯಿತು. ಮೇಲಣಗವಿ ಮಠದ ಶ್ರೀಮಲಯಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಪ್ರಸ್ತಾವಿಕವಾಗಿ ಮಾತನಾಡಿದರು. ಅಂಧ ಕಲಾದರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ನೆನಪಿಗಾಗಿ ಬೆಂಗಳೂರು ಮಲ್ಲೇಶ್ವರಂನ ರೆಡ್ ಕ್ರಾಸ್ ಸಂಸ್ಥೆಯಿಂದ ರಕ್ತದಾನ ಶಿಬಿರವನ್ನು ನಡೆಸಲಾಯಿತು.
ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ.ನಾಡಗೌಡ, ಕಲಾವಿದ ನಾಗರಾಜಮೂರ್ತಿ, ಹಾಲು ಒಕ್ಕೂಟದ ನಿರ್ದೇಶಕ ಎಂ.ಜಿ.ತಿಮ್ಮರಾಜು ಇತರರನ್ನು ಸಿದ್ದಲಿಂಗ ಸ್ವಾಮೀಜಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ತಿಪಟೂರು ಮಠದ ಷಡಾಕ್ಷರ ಸ್ವಾಮೀಜಿ, ಕವಲೆದುರ್ಗದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಬೇಬಿ ಮಠದ ತ್ರಿನೇತ್ರ ಶಿವಯೋಗಿ ಸ್ವಾಮೀಜಿ, ಬೆಟ್ಟಳ್ಳಿ ಮಠದ ಚಂದ್ರಶೇಖರ ಸ್ವಾಮೀಜಿ, ಬಳ್ಳಾರಿ ಕಲ್ಯಾಣ ಮಠದ ಕಲ್ಯಾಣ ಸ್ವಾಮೀಜಿ, ಗುಳೇದಗುಡ್ಡದ ಕಾಡಸಿದ್ದೇಶ್ವರ ಸ್ವಾಮೀಜಿ, ಸಜ್ಜಲಗುಡ್ಡ ಮಠದ ದೊಡ್ಡಬಸವಾಚಾರ್ಯ ತಾತನ ಸ್ವಾಮೀಜಿ, ಮುಖಂಡರಾದ ಮರಿಸ್ವಾಮಿ, ರುದ್ರೇಶ್, ಗ್ರಾಪಂ ಅಧ್ಯಕ್ಷ ಹನುಮಂತರಾಜು ಸೇರಿದಂತೆ ಮತ್ತಿತರ ಮುಖಂಡರು ಭಾಗವಹಿಸಿದ್ದರು.