ಡೊಂಬಿವಲಿ, ಮಾ. 13: ಶ್ರೀ ಸಾಯಿನಾಥ ಮಿತ್ರ ಮಂಡಳ ಡೊಂಬಿವಲಿ ಇದರ 13ನೇ ವಾರ್ಷಿಕೋತ್ಸವ ಸಮಾರಂಭವು ಮಾ. 8 ರಂದು ಡೊಂಬಿವಲಿ ಪೂರ್ವದ ಠಾಕೂರ್ ಸಭಾಗೃಹದಲ್ಲಿ ನಡೆಯಿತು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್. ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸಮಾರಂಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ವಿಜಯ ಕುಮಾರ್ ಶೆಟ್ಟಿ, ಖ್ಯಾತ ಸಾಮಾಜಿಕ ಕಾರ್ಯಕರ್ತ ಯಕ್ಷಕಲಾ ಸಂಸ್ಥೆ, ಶ್ರೀ ಜಗದಂಬಾ ಮಂದಿರದ ಡೊಂಬಿವಲಿ ಅಧ್ಯಕ್ಷ ಹರೀಶ್ ಶೆಟ್ಟಿ, ಹೊಟೇಲ್ ಕಾರ್ಮಿಕ ನಾರಾಯಣ ಶೆಟ್ಟಿ ಅವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರವನ್ನಿತ್ತು ಸಮ್ಮಾನಿಸಿ ಗೌರವಿಸಲಾಯಿತು. ಮಂಡಳದ ಗೌರವಾಧ್ಯಕ್ಷ ಗಣೇಶ್ ಮೊಗವೀರ ದಂಪತಿ, ಅಧ್ಯಕ್ಷ ಮೋಹನ್ ಸಾಲ್ಯಾನ್ ದಂಪತಿ, ದಾಂಪತ್ಯ ಜೀವನದ ಸುವರ್ಣ ಮಹೋತ್ಸವ ಆಚರಿಸಿದ ಆರ್. ಬಿ. ಶೆಟ್ಟಿ ದಂಪತಿ, ಸಮಾಜ ಸೇವಕ ರವಿ ಸನಿಲ್ ಅವರನ್ನು ಗೌರವಿಸಲಾಯಿತು.
ಓಂದಾಸ್ ಕಣ್ಣಂಗಾರ್, ವಸಂತ ಸುವರ್ಣ, ಅಶೋಕ್ ಶೆಟ್ಟಿ ಸಮ್ಮಾನ ಪತ್ರ ವಾಚಿಸಿದರು. ಅತಿಥಿಗಳಾಗಿ ಸಮಾಜ ಸೇವಕ, ಸಂಘಟಕ ಪ್ರಭಾಕರ ಹೆಗ್ಡೆ, ಭಂಡಾರಿ ಸೇವಾ ಸಮಿತಿಯ ಅಧ್ಯಕ್ಷ ನ್ಯಾಯವಾದಿ ಆರ್. ಎಂ. ಭಂಡಾರಿ,ತೀಯಾ ಸಮಾಜ ಮುಂಬಯಿ ಮಾಜಿ ಅಧ್ಯಕ್ಷ ಚಂದ್ರಶೇಖರ ಬೆಳ್ಚಡ, ಜೈ ಭವಾನಿ ಶ್ರೀ ಶನೀಶ್ವರ ಮಂದಿರ ಹಾಗೂ ಬಿರುವೆರ್ ಕುಡ್ಲ ಡೊಂಬಿವಲಿ ಘಟಕದ ಅಧ್ಯಕ್ಷ ರವಿ ಮುದ್ದು ಸುವರ್ಣ, ಸಾಯಿನಾಥ ಮಿತ್ರ ಮಂಡಳಿಯ ಅಧ್ಯಕ್ಷ ಮೋಹನ್, ಸಂಸ್ಥೆಯ ಇತರ ಪದಾಧಿಕಾರಗಳಾದ ಗಣೇಶ್ ಮೊಗವೀರ, ರವಿ ಪೂಜಾರಿ, ಆರ್. ಬಿ. ಶೆಟ್ಟಿ, ಸುರೇಶ್ ಶೆಟ್ಟಿ, ಅಶೋಕ್ ಶೆಟ್ಟಿ, ಭಾಸ್ಕರ್ ಪೂಜಾರಿ, ಸುರೇಶ್ ಮೊಗವೀರ, ವಾಸು ಮೊಗವೀರ, ವಸಂತ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಸುಕೇಶ್ ಮೊಗವೀರ ಅವರು ಸಂಸ್ಥೆಯು ನಡೆದು ಬಂದ ದಾರಿಯ ಸಾಧನೆ ಹಾಗೂ ಸಿದ್ಧಿಗಳನ್ನು ವಿವರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ವಿವಿಧ ಸಂಘಟನೆಗಳಿಂದ ನೃತ್ಯ ವೈವಿಧ್ಯ ನಡೆಯಿತು. ನಾರಾಯಣ ಪೂಜಾರಿ ಪ್ರಾರ್ಥನೆಗೈದರು. ಗಣ್ಯರು ದೀಪ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಚಿನ್ಮಯ್ ಸಾಲ್ಯಾನ್ ನಿರ್ವಹಿಸಿದರು. ಸಭಾ ಕಾರ್ಯಕ್ರಮವನ್ನು ವಸಂತ ಸುವರ್ಣ ಅವರು ನಿರ್ವಹಿಸಿದರು.
ಚಿತ್ರ-ವರದಿ: ಗುರುರಾಜ ಪೋತನೀಸ್