ಶಿಡ್ಲಘಟ್ಟ: ತಾಲೂಕಿನ ಶ್ರೀ ರೇಣುಕಾ ಯಲ್ಲಮ್ಮ ದೇವಿ ಹೂವಿನ ಕರಗ ಮಹೋತ್ಸವವು ವಿಜೃಂ ಭಣೆಯಿಂದ ಹಾಗೂ ಶ್ರದ್ಧಾ ಭಕ್ತಿಯಿಂದ ನಡೆಯಿತು.
ನಗರದ ಟಿ.ಬಿ. ರಸ್ತೆಯ ಕೆ.ಕೆ. ಪೇಟೆಯಲ್ಲಿ ನೆಲೆಸಿರುವ ಶ್ರೀ ರೇಣುಕಾ ಯಲ್ಲಮ್ಮದೇವಿ ಕರಗವನ್ನು ತಲೆ ಮೇಲೆ ಹೊತ್ತ ಸ್ಥಳೀಯ ಪೂಜಾರಿ ರಮೇಶ್ ನಗರದ ಎಲ್ಲ ಬೀದಿಗಳಲ್ಲೂ ಮೆರವಣಿಗೆ ನಡೆಸಿದರು. ವೀರಗಾರರು ಹಾಗೂ ಭಕ್ತರು ಕರಗವನ್ನು ಹಿಂಬಾಲಿಸಿದರೆ, ಮನೆಗಳ ಮುಂದೆ ಸಾರಿಸಿ ರಂಗೋಲೆ ಹಾಕಿ ಭಕ್ತಿಭಾವದಿಂದ ಕರಗವನ್ನು ಬರ ಮಾಡಿಕೊಂಡು ಇಷ್ಟಾರ್ಥ ಈಡೇರಲೆಂದು ಕರಗಕ್ಕೆ ಪೂಜಿಸಿ ಭಕ್ತಿಪೂರ್ವಕವಾಗಿ ನಮಿಸಿದರು. ವಿ
ಶೇಷ ಹೂವಿನ ಅಲಂಕಾರ: ನಗರದಲ್ಲಿ ಎರಡು ಕಡೆ ವಾದ್ಯಗೋಷ್ಠಿ ಏರ್ಪಡಿಸಿದ್ದು, ಅಲ್ಲಿ ತಮಟೆ ಹಲಗೆ ಹಾಗೂ ಚಿತ್ರಗೀತೆಗಳ ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಭಕ್ತರನ್ನು ನಿಂತಲ್ಲೆ ನಿಲ್ಲುವಂತೆ ಮಾಡಿತ್ತು. ನಗರ ಪ್ರದಕ್ಷಿಣೆ ನಂತರ ಕರಗ ಗರ್ಭಗುಡಿ ಸೇರಿತು. ಕರಗ ಮಹೋತ್ಸವ ಅಂಗವಾಗಿ ರೇಣುಕಾ ಎಲ್ಲಮ್ಮ ದೇವಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ವಿಶೇಷ ಪೂಜೆ ಸಲ್ಲಿಸಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು. ಶಾಸಕ ವಿ.ಮುನಿಯಪ್ಪ ಆದಿಯಾಗಿ ಅನೇಕ ಪ್ರಮುಖರು ದೇವಿ ದರ್ಶನ ಪಡೆದರು.
ವೃದ್ಧನೊಂದಿಗೆ ರೊಮ್ಯಾನ್ಸ್ ಮಾಡಿದ ಆರ್ಕೆಸ್ಟ್ರಾ ನಟಿ: ಕರಗ ಮಹೋತ್ಸವ ಅಂಗವಾಗಿ ನಗರದಲ್ಲಿ ಎರಡು ಕಡೆ ವಾದ್ಯಗೋಷ್ಠಿ ಏರ್ಪಡಿಸಿತ್ತು. ಪ್ರಸಿದ್ಧ ಕಲಾವಿದರ ತಂಡಗಳು ಕನ್ನಡ, ತೆಲುಗು, ಹಿಂದಿ ಗೀತೆಗಳಿಗೆ ನೃತ್ಯ ಹಗೂ ಗೀತಗಾಯನ ಮಾಡಿ ಸಭಿಕರ ಮನ ತಣಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ವಾದ್ಯಗೋಷ್ಠಿಯಲ್ಲಿ ವೃದ್ದನೊಂದಿಗೆ ಆರ್ಕೆಸ್ಟ್ರಾ ನಟಿ ರೊಮ್ಯಾನ್ಸ್ ಮಾಡಿದ ದೃಶ್ಯಗಳು ಹಾಗೂ ಒಂದೆರಡು ಹಾಡುಗಳಿಗೆ ಕಡಿಮೆ ಬಟ್ಟೆ ಧರಿಸಿ ಮಾಡಿದ ನೃತ್ಯಕ್ಕೆ ಪಡ್ಡೆ ಹೈಕಳು ಹಿರಿ ಹಿಗ್ಗಿದರಾದರೂ, ಮಹಿಳಾ ಸಭಿಕರು, ಹಿರಿಯರು ಹಾಡು ಮುಗಿಯುವ ತನಕ ತಲೆ ತಗ್ಗಿಸಿಕೊಳ್ಳುವಂತೆ ಮುಜುಗರಕ್ಕೊಳಗಾದರು.