Advertisement

ತೀರ್ಥಹಳ್ಳಿ: ಶ್ರೀ ರಾಮೇಶ್ವರ ಕ್ಷೇತ್ರದಲ್ಲಿ ಎಳ್ಳಮಾವಾಸ್ಯೆ ಜಾತ್ರೆ: ಭಕ್ತರಿಂದ ತೀರ್ಥಸ್ನಾನ

10:09 AM Jan 11, 2024 | Team Udayavani |

ತೀರ್ಥಹಳ್ಳಿ: ಪುರಾಣ ಪ್ರಸಿದ್ಧ ಐತಿಹಾಸಿಕ ಹಿನ್ನೆಲೆ ಇರುವ ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆ ಮಂಗಳವಾರದಿಂದ ಆರಂಭವಾಗಿದ್ದು ಗುರುವಾರ ತುಂಗಾನದಿ ಮಧ್ಯದಲ್ಲಿರುವ ಪರಶುರಾಮ ಕೊಂಡದಲ್ಲಿ ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ತೀರ್ಥ ಸ್ನಾನ ಮಾಡಿದರು.

Advertisement

ಗುರುವಾರ ನಸುಕಿನಲ್ಲಿ ಶ್ರೀ ರಾಮೇಶ್ವರ ದೇವರ ಪಲ್ಲಕ್ಕಿ ಉತ್ಸವ ನದಿ ದಡಕ್ಕೆ ಆಗಮಿಸಿ ರಾಮಕೊಂಡಕ್ಕೆ ಪೂಜೆ ಸಲ್ಲಿಸಿದ ನಂತರ ಭಕ್ತರು ನದಿಯಲ್ಲಿ ಮಿಂದು ಶ್ರೀ ರಾಮೇಶ್ವರ ದೇವರ ದರ್ಶನ ಪಡೆದು ಪುನೀತರಾದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್ ಮತ್ತು ತೆಪ್ಪೋತ್ಸವ ಸಮಿತಿಯ ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ ತಹಸೀಲ್ದಾರ್ ಜಕ್ಕಣ್ಣ ಗೌಡರ್ ,ಪ ಪಂ ಸದಸ್ಯರಾದ ಸುಶೀಲಾ ಶೆಟ್ಟಿ ಹಾಗೂ ಜಾತ್ರಾ ಸಮಿತಿಯ ಸದಸ್ಯರು ಸೇರಿದಂತೆ ಸಾವಿರಾರು ಭಕ್ತರು ಉಪಸ್ಥಿತರಿದ್ದರು.

ಇತ್ತೀಚಿನ ಕೆಲವು ಬೆಳವಣಿಗೆ ಹಿನ್ನೆಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಡಿವೈಎಸ್ಪಿ ಗಜಾನನ ವಾಮನ ಸುತಾರ ಮಾರ್ಗದರ್ಶನದಲ್ಲಿ
ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು.

ತೀರ್ಥ ಸ್ನಾನ ಎಂದರೆ ಏನು?

Advertisement

ಪರಶುರಾಮ ತಂದೆಯ ಆದೇಶದಂತೆ ತಾಯಿ ರೇಣುಕಾದೇವಿಯ ಶಿರಚ್ಛೇದನ ಮಾಡುತ್ತಾನೆ. ಆನಂತರ ಮಾತೃಹತ್ಯಾದೋಷದಿಂದ ತನ್ನ ಮುಕ್ತಿ
ಹೇಗೆಂದು ತಂದೆಯನ್ನೇ ಕೇಳುತ್ತಾನೆ. “ನೀನು ಕೊಡಲಿಯನ್ನು ಎಲ್ಲಾ ನದಿಗಳಲ್ಲಿಯೂ ಅದ್ದಿ ತೊಳೆಯತ್ತಾ ಹೋಗು. ನಿನ್ನ ಪರಶುವಿನಲ್ಲಿ
ಅಂಟಿದ ರಕ್ತದ ಕಲೆ ಪೂರ್ತಿ ತೊಳೆಯುತ್ತದೋ ಅಲ್ಲಿಗೆ ದೋಷ ಕಳೆದಂತೆ. ಆ ನೀರು ಪವಿತ್ರ ತೀರ್ಥವಾಗುತ್ತದೆ’ ಎಂದು ಜಮದಗ್ನಿ ಹೇಳುತ್ತಾನೆ.
ತಂದೆಯ ಮಾತಿನಂತೆ ಪರಶುರಾಮ ಸಂಚಾರ ಹೊರಟು ಎಲ್ಲಾ ನದಿ, ತೀರ್ಥಗಳಲ್ಲೂ ತನ್ನ ಪರಶುವನ್ನು ತೊಳೆದರೂ ಅದರಲ್ಲಿ ಅಡಗಿದ್ದ ಎಳ್ಳು
ಕಾಳಿನಷ್ಟು ರಕ್ತದ ಕಲೆ ಹಾಗೆಯೇ ಉಳಿಯಿತಂತೆ. ಕೊನೆಗೆ ತುಂಗೆಯ ಈ ಪ್ರದೇಶದಲ್ಲಿ ಕೊಡಲಿಯನ್ನು ತೊಳೆದಾಗ ಅದರಲ್ಲಿದ್ದ ಎಳ್ಳಿನ ಕಾಳಿನಷ್ಟು ಗಾತ್ರದ ಕಲೆ ಮಾಯವಾಯಿತಂತೆ. ಅದು ಮಾರ್ಗಶಿರ ಬಹುಳ ಅಮಾವಾಸ್ಯೆ.

ಪರಶುರಾಮನ ಮಾತೃಹತ್ಯಾದೋಷವನ್ನು ಪರಿಹಾರ ಮಾಡಿದ ಈ ತುಂಗಾ ನದಿಯಲ್ಲಿ ಸರ್ವಶಕ್ತಿಯೂ ಪ್ರವಹಿಸುತ್ತದೆ. ಜನರ ಪಾಪವನ್ನೆಲ್ಲಾ ತೊಳೆದು ಪುನೀತರನ್ನಾಗಿಸುತ್ತದೆ ಎಂಬ ಪ್ರತೀತಿಬೆಳೆಯಿತು. ಈ ಕಾರಣಕ್ಕಾಗಿ ಲಕ್ಷಾಂತರ ಜನರು ರಾಮಕೊಂಡದಲ್ಲಿ ಮುಳುಗಿ ತೀರ್ಥಸ್ನಾನ ಮಾಡಿ ಪಾವನರಾಗುತ್ತಾರೆ.

ಇದನ್ನೂ ಓದಿ: Bantwal: ಬೆಳಂಬೆಳಿಗ್ಗೆ ತಾಯಿ, ಮಗಳಿಗೆ ಚಾಕು ತೋರಿಸಿ ನಗನಗದು ದೋಚಿದ ಮುಸುಕುಧಾರಿಗಳು

Advertisement

Udayavani is now on Telegram. Click here to join our channel and stay updated with the latest news.

Next