Advertisement

ಶ್ರೀ ರಾಮನವಮಿ ಸಂಭ್ರಮ, ದೀಕ್ಷಾ ದಿವಸ್‌ ಆಚರಣೆ

08:22 PM Apr 15, 2019 | Sriram |

ಮೂಡುಬಿದಿರೆ: ಕೋಟ್ಯಂತರ ವರ್ಷಗಳ ಬಳಿಕವೂ ಕೂಡ ಭಾರತೀ ಯರಲ್ಲಿ ರಾಮ ಸೀತೆ ಇವರ ವಂಶವಾಹಿ ನಿಯ ಪ್ರಭಾವ ಕಾಣುತ್ತಿದೆ. ಶ್ರೀರಾಮನ ಜೀವನ ಆದರ್ಶಗಳನ್ನು ಮುನ್ನಡೆ ಸಿ ಕೊಂಡು ಹೋಗಬೇಕಾಗಿದೆ ಎಂದು ಯೋಗಗುರು ಡಾ| ರವಿ ಕುಮಾರ್‌ ಹೇಳಿದರು.

Advertisement

ಅವರು ಮೂಡುಬಿದಿರೆಯ ಬ್ರಹ್ಮಶ್ರೀ ಗುರು ನಾರಾಯಣ ಸೇವಾ ಸಂಘದ ಕಾಮ ಧೇನು ಸಭಾಂಗಣದಲ್ಲಿ ರವಿವಾರ ಮೂಡು ಬಿದಿರೆ ತಾಲೂಕು ಪತಂಜಲಿ ಯೋಗ ಸಮಿತಿ, ಭಾರತ್‌ ಸ್ವಾಭಿ ಮಾನ್‌ ಟ್ರಸ್ಟ್‌ ವತಿಯಿಂದ ಜರಗಿದ ಶ್ರೀರಾಮ ನವಮಿ ಸಂಭ್ರಮ,ಯೋಗ ಗುರು ಬಾಬಾ ರಾಮದೇವ್‌ಜೀಯವರ ದೀಕ್ಷಾ ದಿವಸ್‌ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಯೋಗ ವಿಸ್ತಾರಕ ರಾಘವೇಂದ್ರ ಗುರೂಜಿ ಅವರು, ಸಂಸ್ಕಾರ, ಸಂಸ್ಕೃತಿಯ ಮಹತ್ವದ ಜತೆಗೆ ಇತ್ತೀಚೆಗೆ ಅಗಲಿದ ಯೋಗ ಬಂಧು ಆನಂದ ಕೋಟ್ಯಾನ್‌ ಅವರ ಕೊಡುಗೆ, ಸಾಧನೆಗಳನ್ನು ಸ್ಮರಿಸಿಕೊಂಡರು.

ಕೊಡ್ಯಡ್ಕ ಪುತ್ತಿಗೆ ಶ್ರೀಧರ್ಮಶಾಸ್ತಾ ಭಜನ ಮಂಡಳಿಯವರಿಂದ ಕುಣಿತ ಭಜನೆ, ಸಂಕೀರ್ತನ ಸೇವೆ ಜರಗಿತು.ಸ್ಥಾಪಕ ಪ್ರಮುಖ ರಾದ ಯತಿರಾಜ ಶೆಟ್ಟಿ , ಪ್ರೊ| ರವೀಶ್‌ ಕುಮಾರ್‌, ಪ್ರಕಾಶ್‌ ಅಮೀನ್‌, ಅನಿಲ್‌ ಕೋಟ್ಯಾನ್‌, ವಸಂತ ಸುವರ್ಣ, ಜಯಶ್ರೀ ಸುಧಾಕರ್‌, ಪ್ರಭಾವತಿ ಮತ್ತಿತರರು ಹಾಜರಿದ್ದರು. ಪ್ರಸಾದ್‌ ನಾಯಕ್‌ ಶ್ರೀ ರಾಮ ನಾಮ ಪಠನ, ಸಂಕೀ ರ್ತನೆ ನಡೆಸಿದರು.ಸಾಮೂಹಿಕ ಸೂರ್ಯ ನಮಸ್ಕಾರ, ಯೋಗ ತರಗತಿ ನಡೆಯಿತು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next