Advertisement

ಹೊನಲು ಬೆಳಕಿನಲ್ಲಿ ರೋಮಾಂಚನಕಾರಿ ಸಾಹಸ ಪ್ರದರ್ಶನ

10:03 PM Dec 16, 2019 | Sriram |

ಕಲ್ಲಡ್ಕ : ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವಾರ್ಷಿಕ ಹೊನಲು ಬೆಳಕಿನ ಕ್ರೀಡಾಕೂಟ ಡಿ. 15ರಂದು ನಡೆಯಿತು.ಸುಮಾರು 3,399 ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ, ಮೈನವಿರೇಳಿಸುವ ಪ್ರದರ್ಶನ ನೀಡಿದರು.

Advertisement

ಅಯೋಧ್ಯೆಯಲ್ಲಿ ನಿರ್ಮಾಣವಾಗುವ ಶ್ರೀರಾಮ ಮಂದಿರದ ಆಚಾರದಲ್ಲಿ ಕುಳಿತು, ಹೊನಲು ಬೆಳಕಿನಲ್ಲಿ ಮಿಂಚಿದರು. ಬಣ್ಣದ ದಿರಿಸಿನಲ್ಲಿ ವಿದ್ಯಾರ್ಥಿ ನಿಯರು ಮೂರು ಸುತ್ತಿನ ಹೆದ್ದೆರೆ ಮಾದರಿಯ ನೃತ್ಯ ಪ್ರದರ್ಶನ ನೀಡಿದರು. ಭಗವಾಧ್ವಜ ಹಿಡಿದು ಬೈಕ್‌ ಸಾಹಸಗಳನ್ನೂ ಪ್ರದರ್ಶಿಸಿದರು. ಮೇಜಿನ ಮೇಲೆ ಬಾಟಲಿ, ಅದರ ಮೇಲೆ ಸ್ಟೂಲ್‌ – ಹೀಗೆ ನಾಲ್ಕು ಅಂತಸ್ತುಗಳ ಮೇಲೆ ಹಲಗೆಯಿಟ್ಟು ನಡೆಸಿದ ಕೂಪಿಕಾ ಪ್ರದರ್ಶನ ಪ್ರೇಕ್ಷಕರು ಉಸಿರು ಬಿಗಿ ಹಿಡಿಯುವಂತೆ ಮಾಡಿತು. ಮಲ್ಲಕಂಬದ ಸಾಹಸಗಳೂ ಅದ್ಭುತವಾಗಿದ್ದವು.

ಬೆಂಕಿಯ ವೃತ್ತದ ನಡುವೆ ಮೂವರು ವಿದ್ಯಾರ್ಥಿಗಳು ಏಕಕಾಲಕ್ಕೆ ಜಿಗಿದುಬಂದಿದ್ದು ಕುತೂಹಲ ಮೂಡಿಸಿತು. ವಿದ್ಯಾರ್ಥಿಗಳ ಪಥಸಂಚಲನ, ಶಿಶು ನೃತ್ಯ, ಘೋಷ್‌ ಪ್ರದರ್ಶನ, ನಿಯುದ್ಧ, ಯೋಗಾಸನ, ಪ್ರಾಥಮಿಕ ವಿದ್ಯಾರ್ಥಿಗಳಿಂದ ಶಿವಲಿಂಗ-ಓಂಕಾರ- ತಾವರೆ ಚಿತ್ತಾರಗಳ ರಚನೆ, ಕೋಲಿ¾ಂಚು ಪ್ರದರ್ಶನ, ನೃತ್ಯ ಭಜನೆ, ದೀಪಾರತಿ, ಘೋಷ್‌ ಚಕ್ರ ಸಮತೋಲನ, ಕೇರಳ ಚೆಂಡೆ ವಾದನ, ರಂಗೋಲಿ ಕುಣಿತ, ಚಂದ್ರಯಾನ ಉಡಾವಣೆ, ಆಡ್ವಾಣಿಯವರ ಆಯೋಧ್ಯಾ ರಥಯಾತ್ರೆ, ರಾಮಮಂದಿರದ ಚಿತ್ರಣಗಳು ಮನಸೂರೆಗೊಂಡವು.

ಗಣ್ಯರ ಮೆಚ್ಚುಗೆ
ಪುದುಚೇರಿ ರಾಜ್ಯಪಾಲೆ ಡಾ| ಕಿರಣ್‌ ಬೇಡಿ ಪೂರ್ಣ ಪ್ರದರ್ಶನ ವೀಕ್ಷಿಸಿ, ಇಂತಹ ಪ್ರದರ್ಶನವನ್ನು ತನ್ನ ಜೀವಮಾನದಲ್ಲಿ ಕಂಡಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್‌ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕರ್ನಾಟಕ ತುಳು ಸಾಹಿತ್ಯ ಪರಿಷತ್‌ ಅಧ್ಯಕ್ಷ ದಯಾನಂದ ಕತ್ತಲಸಾರ್‌, ಬ್ಯಾರಿ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ, ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ, ಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು, ಬಳ್ಳಾರಿ ಶಾಸಕ ರಾಜಶೇಖರ್‌, ಉದ್ಯಮಿ ಶಶಿಧರ ಶೆಟ್ಟಿ, ರಾಘವೇಂದ್ರ ರಾವ್‌, ಆರೆಸ್ಸೆಸ್‌ ಕಾರ್ಯವಾಹರಾದ ಬಸವರಾಜ್‌, ಶ್ರೀಧರ್‌, ಝಾರ್ಖಂಡ್‌ ಸಚಿವ ಓಂಪ್ರಕಾಶ್‌, ಪ್ರಸಾದ್‌ ನೇತ್ರಾಲಯದ ಡಾ| ಪ್ರಸಾದ್‌, ದೇಹದಾಡ್ಯì ಪಟು ರವಿ ಮಾತನಾಡಿದರು.

Advertisement

ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಎ., ಚಿತ್ರನಟ ಪ್ರಣೀತ್‌ ಸುಭಾಷ್‌, ಸಂಸದರಾದ ಕೆ.ಸಿ. ರಾಮಮೂರ್ತಿ, ಅಣ್ಣಾಸಾಹೇಬ್‌ ಜೊಲ್ಲೆ, ಉಮೇಶ್‌ ಜಾಧವ್‌, ಶಾಸಕರಾದ ಪಿ. ರಾಜೀವ್‌, ಅವಿನಾಶ್‌ ಜಾಧವ್‌, ಗುಜರಾತ್‌ ಶಾಸಕ ಜಿನರಾಜ ಪೂಜಾರಿ, ದಯಾನಂದ ಭಜಂತ್ರಿ, ವಿಧಾನ ಪರಿಷತ್‌ ಸದಸ್ಯರಾದ ಎಲ್‌.ಎಸ್‌. ಭೋಜೇಗೌಡ, ಧರ್ಮೇಗೌಡ, ಉದ್ಯಮಿಗಳಾದ ಡಾ| ಅನಂತರಾಮ, ಶಶಿರಾಜ ಶೆಟ್ಟಿ ಬರೋಡಾ, ವಿಜಯ ಅಹುಜಾ, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ಬಿ. ನಾರಾಯಣ ಸೋಮಯಾಜಿ, ಸಹಸಂಚಾಲಕ ರಮೇಶ್‌ ಎನ್‌., ಪ್ರಾಂಶುಪಾಲ ಕೃಷ್ಣಪ್ರಸಾದ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next