Advertisement

ಅಯೋಧ್ಯೆ ರಾಮ ಮಂದಿರದ ನಿರ್ಮಾಣ ಕಾರ್ಯ ಬಿರುಸು

10:22 PM May 31, 2021 | Team Udayavani |

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಈ ಬಗ್ಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಸೋಮವಾರ ಟ್ವೀಟ್‌ ಮಾಡಿದೆ.

Advertisement

ಮಂದಿರ ನಿರ್ಮಾಣಕ್ಕೆ ಅಗತ್ಯವಾಗಿರುವ ತಳಹದಿಯನ್ನು “ರೋಲರ್‌ ಕಾಂಪಾಕ್ಟೆಡ್‌ ಕಾಂಕ್ರಿಟ್‌ ಟೆಕ್ನಿಕ್‌’ ಅನ್ನು ಉಪಯೋಗಿಸಿಕೊಂಡು ಸಿದ್ಧಪಡಿಸಲಾಗುತ್ತಿದೆ. 1,20,000 ಕ್ಯೂಬಿಕ್‌ ಮೀಟರ್‌ಗಳಷ್ಟು ಅವಶೇಷಗಳನ್ನು ತೆರವುಗೊಳಿಸಲಾಗಿದೆ.

4-5 ದಿನಗಳ ಒಳಗಾಗಿ ಒಂದು ಹಂತದ ಕಾಂಕ್ರೀಟ್‌ ಹಾಕಲು ಸಮಯ ಬೇಕಾಗಲಿದೆ ಎಂದು ಹೇಳಿದ್ದಾರೆ. 40-45 ಹಂತಗಳಷ್ಟು ಕಾಂಕ್ರೀಟ್‌ ಹಂತಗಳನ್ನು ಹಾಕಿ ತಳಹದಿ ಸಿದ್ಧಗೊಳಿಸಲಾಗುತ್ತದೆ. ಇದರ ಜತೆಗೆ, ಸ್ಥಳದಲ್ಲಿ ಕೆಲಸ ಮಾಡುವವರ ಆರೋಗ್ಯ ಸ್ಥಿತಿಯ ಮೇಲೆ ನಿಗಾ ಇರಿಸಲಾಗಿದೆ. ಸೋಂಕು ನಿಯಂತ್ರಣ ಕ್ರಮಗಳನ್ನು ಪಾಲನೆ ಮಾಡಲಾಗುತ್ತಿದೆ ಟ್ರಸ್ಟ್‌ ಹೇಳಿದೆ.

ಇದನ್ನೂ ಓದಿ :ಕೋವಿಡ್ 19 : ಸೋಂಕು ನಿವಾರಣೆಗೆ ಏಳು ದಿನ ಲಕ್ಷದ್ವೀಪದಲ್ಲಿ ಲಾಕ್ ಡೌನ್ ವಿಸ್ತರಣೆ   

Advertisement

Udayavani is now on Telegram. Click here to join our channel and stay updated with the latest news.

Next