ಉಡುಪಿ: ಶ್ರೀ ಅದಮಾರು ಮಠ ಎಜುಕೇಶನ್ ಕೌನ್ಸಿಲ್ ನಡೆಸುತ್ತಿರುವ ಅನೇಕ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ 1966ರಲ್ಲಿ ಸ್ಥಾಪನೆಗೊಂಡ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಸೇರಿದೆ. ಏಕ ಕಾಲದಲ್ಲಿ ದುಡಿಮೆ ಮತ್ತು ಶಿಕ್ಷಣ ಮುಂದುವರಿಕೆಯು ಸಾಧ್ಯವಾಗುವಂತೆ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಮೂಲೋದ್ದೇಶದೊಂದಿಗೆ ಸ್ಥಾಪನೆಗೊಂಡ ಈ ಸಂಧ್ಯಾ ಕಾಲೇಜು ತನ್ನ 53 ಸಾರ್ಥಕ ವಿದ್ಯಾದಾನ ವರ್ಷಗಳನ್ನು ಪೂರೈಸಿದೆ.
ಇಲ್ಲಿ ಬಿಎ/ಬಿಕಾಂ/ಎಂಕಾಂ ಕೋರ್ಸುಗಳ ಪ್ರವೇಶಾತಿಗೆ ಅವಕಾಶವಿದೆ. ಪರಿಣಿತ ಶಿಕ್ಷಕರು, 50 ಸಾವಿರಕ್ಕೂ ಮಿಕ್ಕಿ ಪುಸ್ತಕಗಳನ್ನೊಳಗೊಂಡ ಗ್ರಂಥಾಲಯವೂ ಸೇರಿದಂತೆ ಉತ್ತಮ ಸೌಲಭ್ಯಗಳಿವೆ. ಪ.ಜಾತಿ/ಪ.ಪಂ. ಮತ್ತಿತರ ಅರ್ಹ ಸಮುದಾಯಗಳಿಗೆ ಸರಕಾರ ನೀಡುವ ವಿದ್ಯಾರ್ಥಿ ವೇತನಗಳು ಮತ್ತು ಶುಲ್ಕ ವಿನಾಯಿತಿ ಇದೆ. ಸಿಎ/ಸಿಪಿಟಿ ಮತ್ತು ಸಿಎ ಫೌಂಡೇಶನ್, ಐಪಿಸಿಸಿ/ಸಿಎ ಇಂಟರ್ ಮೀಡಿಯೇಟ್ ಮತ್ತು ಸಿಎಸ್ ಫೌಂಡೇಶನ್ ತರಬೇತಿ ತರಗತಿಗಳು ಅತಿ ಕಡಿಮೆ ಶುಲ್ಕದೊಂದಿಗೆ
ನಡೆಸಲಾಗುತ್ತದೆ.
ಬುಕ್ ಬ್ಯಾಂಕ್ ಯೋಜನೆಯಡಿ ವರ್ಷಾಂತ್ಯದ ವರೆಗೆ ಪುಸ್ತಕಗಳನ್ನು ಉಳಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ, ಹಗಲು ಕಾಲೇಜಿಗೆ ಪರ್ಯಾಯವಾಗಿ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್‌ಗೆ ವಿಶೇಷ ಅವಕಾಶ, ಕಲಿಕೆಯಲ್ಲಿ ನಿರೀಕ್ಷಿತ ಮಟ್ಟದ ಪ್ರಗತಿ ತೋರಿಸದ ವಿದ್ಯಾರ್ಥಿಗಳಿಗೆ ರೆಮಿಡಿಯಲ್ ಕೋರ್ಸ್‌ನ ವ್ಯವಸ್ಥೆ, ಕಡಿಮೆ ಶುಲ್ಕದಲ್ಲಿ ಬ್ಯಾಂಕಿಂಗ್ ಪರೀಕ್ಷಾ ತರಬೇತಿ, ಬಿಎ ವಿದ್ಯಾರ್ಥಿಗಳಿಗೆ ಕೌಶಲಾಭಿವೃದ್ಧಿ ಕೋರ್ಸ್, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸನ್ನದ್ಧತೆ ತರಬೇತಿ, ಬಿಎ ಕೋರ್ಸ್ ಸೇರಬಯಸುವ ಎಲ್ಲ ವಿದ್ಯಾರ್ಥಿಗಳು ಮತ್ತು ಎಲ್ಲ ಕೋರ್ಸ್ ಗಳಿಗೆ ಎಸ್ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿಯಲ್ಲಿ ವಿಶೇಷ ರಿಯಾಯಿತಿ ಇದೆ.
ಪ್ರಸಿದ್ದ ಕಂಪೆಗಳು ಕ್ಯಾಂಪಸ್ ಸೆಲೆಕ್ಷನ್‌ಗಾಗಿ ಆಯ್ಕೆ ಮಾಡಿಕೊಂಡಿರುವ ಪ್ರತಿಷ್ಠಿತ ಕಾಲೇಜುಗಳಲ್ಲಿ ಈ ಕಾಲೇಜು ಒಂದಾಗಿದ್ದು, ದೂರದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಮತ್ತು ವಸತಿ ವ್ಯವಸ್ಥೆ ಮಾಡಿಕೊಡಲಾಗುವುದು. ಹೆಚ್ಚಿನ ವಿವರಗಳಿಗೆ ಕಾಲೇಜನ್ನು ಸಂಪರ್ಕಿಸ ಬಹುದೆಂದು ಪ್ರಕಟನೆ ತಿಳಿಸಿದೆ.