ಯಲಹಂಕ: ವಹ್ನಿಕುಲ ಕ್ಷತ್ರಿಯರ ಆರಾಧ್ಯ ದೈವ, ಇತಿಹಾಸ ಪ್ರಸಿದ್ಧ ಶ್ರೀ ಮಹೇಶ್ವರಮ್ಮ ದೇವಿಯ ಕರಗ ಮಹೋತ್ಸವ ಬುಧವಾರ (ಮೇ 22) ರಾತ್ರಿ ನೆರವೇರಲಿದೆ.
ಯಲಹಂಕ ಸುತ್ತಮುತ್ತಲ ಗ್ರಾಮಗಳ 25 ದೇವರುಗಳ ಮತ್ತಿನ ಪಲ್ಲಕ್ಕಿಗಳು ಕರಗಕ್ಕೆ ಸಾಥ್ ನೀಡಲಿದ್ದು, ಯಲಹಂಕದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಮಂಗಳವಾರ ರಾತ್ರಿ ಮಹಿಳೆಯರು ಆರತಿ ದೀಪಗಳ ಸಮೇತ ಅಗ್ನಿಕುಂಡ ತುಳಿಯುವ ಕಾರ್ಯಕ್ರಮ ನಡೆಯಲಿದೆ.
ಮುನಿರಾಜು ಎಂಬುವರು 2 ಬಾರಿ ಕರಗವನ್ನು ಹೊರಲಿದ್ದು, ಹಳೇ ಯಲಹಂಕ, ಗಾಂಧಿನಗರ, ಮಾರುತಿನಗರ ವೆಂಕಟಾಲಗಳಲ್ಲಿನ ಮೆರವಣಿಗೆ ನಂತರ ಗುರುವಾರ ಬೆಳಗ್ಗೆ 7 ಗಂಟೆಗೆ ಕರಗವು ದೇವಾಲಯದ ಸನ್ನಿಧಿ ತಲುಪಲಿದೆ. 500ಕ್ಕೂ ಹೆಚ್ಚು ವೀರಕುಮಾರರು ಪಾಲ್ಗೊಳ್ಳಲಿದ್ದಾರೆ.
Advertisement
ದೇವಿಯ ಹಸಿ ಕರಗ ಉತ್ಸವ ಸೋಮವಾರ ಮುಂಜಾನೆ 5 ಗಂಟೆಗೆ ನೆರವೇರಿದ್ದು, ಮಂಗಳವಾರ (ಮೇ 21) ಆರತಿ, ಬಾಯಿಕಟ್ಟುವುದು ಹಾಗೂ ಅಗ್ನಿಕುಂಡ ಪ್ರವೇಶ ನಡೆಯಲಿದೆ. 22ರಂದು ರಾತ್ರಿ 12 ಗಂಟೆಗೆ ಮಹೇಶ್ವರಮ್ಮ ದೇವಿ ಹೂವಿನ ಕರಗ ಮಹೋತ್ಸವ ಮತ್ತು ಪಲ್ಲಕ್ಕಿ ಉತ್ಸವಗಳು ನಡೆಯಲಿವೆ.