Advertisement
ನವಚಂಡಿಯಾಗಕ್ಕೆ ತಯಾರಿಶ್ರೀಲಂಕಾ ಪ್ರಧಾನಿ ಶುಕ್ರವಾರ ನಡೆಯಲಿರುವ ನವಚಂಡಿಯಾಗದ ಪೂರ್ಣಾಹುತಿಯಲ್ಲಿ ಭಾಗವಹಿಸುವರು.ಪೊಲೀಸ್ ವರಿಷ್ಠಾ ಧಿಕಾರಿ ನಿಶಾ ಜೇಮ್ಸ್, ಡಿವೈಎಸ್‌ಪಿ ದಿನೇಶ್ ಕುಮಾರ್, ಬೈಂದೂರು ವೃತ್ತ ಪೊಲೀಸ್ ಅ ಧಿಕಾರಿಗಳ ತಂಡವು ದೇಗುಲದ ಕಾರ್ಯ ನಿರ್ವಹಣಾಧಿ ಕಾರಿ ಎಚ್. ಹಾಲಪ್ಪ ಅವರೊಡನೆ ಎರಡು ವರುಷಗಳಿಂದ ಶ್ರೀಲಂಕಾ ಪ್ರಧಾನಿಯವರ ವಿಶೇಷ ಪೂಜೆ ಸಂದರ್ಭದ ವ್ಯವಸ್ಥೆಗಳು, ಭಾಗವಹಿಸುವವರ ಮಾಹಿತಿ ಸಂಗ್ರಹಿಸಿದರಲ್ಲದೆ ಪ್ರತಿಯೊಬ್ಬರಿಗೂ ಗುರುತು ಚೀಟಿ ನೀಡುವ ಬಗ್ಗೆ ಚರ್ಚಿಸಿದರು.
ದರ್ಶನ ಸಮಯ ಬದಲುಶುಕ್ರವಾರ ಬೆಳಗ್ಗೆ 9 ಗಂಟೆ ತನಕ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ವಿರಲಿದೆ. ಬಳಿಕ ಶ್ರೀಲಂಕಾ ಪ್ರಧಾನಿ ಯವರ ನವಚಂಡಿಯಾಗದ ಪೂರ್ಣಾಹುತಿ ತನಕ ಭಕ್ತರ ಪ್ರವೇಶಕ್ಕೆ ನಿರ್ಬಂಧವಿದೆ. ಬೆಳಗ್ಗೆ 9ರಿಂದ ಮಧ್ಯಾಹ್ನ 2ರ ತನಕ ಕೊಲ್ಲೂರಿನ ಎಲ್ಲ ಅಂಗಡಿ ಮುಂಗಟ್ಟುಗಳು, ವಸತಿ ಸಮುಚ್ಚಯ ಸಂಪೂರ್ಣ ಬಂದ್ ಮಾಡಲಾಗುವುದು. ವಾಹನಸಂಚಾರ ಸಹಿತ ಪಾದಚಾರಿಗಳ ಸಂಚಾರಕ್ಕೆ ಈ ಅವ ಧಿಯಲ್ಲಿ ನಿರ್ಬಂಧವಿರಲಿದೆ. ಭಕ್ತರು ಸಹಕರಿಸಬೇಕು ಎಂದು ದೇಗುಲದ ಕಾರ್ಯನಿರ್ವಹಣಾಧಿ ಕಾರಿ ಎಚ್. ಹಾಲಪ್ಪ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್‌ಕುಮಾರ್ ಶೆಟ್ಟಿ ಮನವಿ ಮಾಡಿದ್ದಾರೆ.
ರಾಜ್ಯ, ಕೇಂದ್ರ ಸ್ತರದಿಂದ ಈಗಾಗಲೇ ಆಗಮಿಸಿರುವ ವಿಶೇಷ ಪೊಲೀಸ್ ತಂಡಗಳು ಕೊಲ್ಲೂರು ಸಹಿತ ಆಸುಪಾಸಿನ ಗ್ರಾಮಗಳ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿವೆ.
ಮಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಕೊಲ್ಲೂರಿನ ಅರೆಶಿರೂರು ಹೆಲಿಪ್ಯಾಡಿಗೆ ಆಗಮಿಸಲಿರುವ ಶ್ರೀಲಂಕಾ ಪ್ರಧಾನಿಯ ಭದ್ರತೆಯ ನಿಟ್ಟಿನಲ್ಲಿ ಹೆಲಿಪ್ಯಾಡ್ ಸಹಿತ ಕೊಲ್ಲೂರಿಗೆ ವಾಹನದಲ್ಲಿ ಸಾಗುವ ದಾರಿಯುದ್ದಕ್ಕೂ ವಿಶೇಷ ಪೊಲೀಸ್ ಪಡೆ ನಿಯೋಜಿಸಲಾಗುವುದು. ಹವಾಮಾನ ವೈಪರೀತ್ಯವಿದ್ದಲ್ಲಿ ಮಂಗಳೂರಿನಿಂದ ಕೊಲ್ಲೂರಿಗೆ ಅವರು ರಸ್ತೆ ಮಾರ್ಗವಾಗಿ ಪ್ರಯಾ ಣಿಸುವ ಹಿನ್ನೆಲೆಯಲ್ಲಿ ಆ ಬಗ್ಗೆಯೂ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ.