ಕುಂಬಳೆ: ಶ್ರೀಲಂಕಾ ಪ್ರಧಾನಿ ರಣಿಲ್ ವಿಕ್ರಮ ಸಿಂಘೆ ಅವರು ಪತ್ನಿ ಮೈತ್ರಿ ಸಿಂಘೆ ಅವರೊಂದಿಗೆ ಜು.27 ರಂದು ಕಾಸರಗೋಡು ಜಿಲ್ಲೆಯ ಗ್ರಾಮೀಣ ಪ್ರದೇಶವಾದ ನೀರ್ಚಾಲು ಬಳಿಯ ಬೇಳ ಕುಮಾರ ಮಂಗಲ ಶ್ರೀ ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ ನೀಡಿದರು. ಕ್ಷೇತ್ರದಲ್ಲಿ ಬೆಳಗ್ಗೆ ಪ್ರದಾನಿಗಾಗಿ ಗಣಪತಿಹೋಮ,ನವಕಾಭಿÐಕ,ಆಶ್ಲೇಷ ಬಲಿ,ಅಲಂಕಾರ ಪೂಜೆಯ ಬಳಿಕ ಮಹಾಪೂಜೆ ಜರುಗಿಸಲಾಯಿತು.ಹಿಂದಿನ ದಿನ ರಾತ್ರಿ ರಂಗಪೂಜೆ ನಡೆಸಲಾಯಿತು. ಪ್ರದಾನಿಯವರ ಅಭೀಷ್ಟದಂತೆ ಕುಟುಂಬ ಮತ್ತು ದೇಶದ ಪ್ರಜೆಗಳ ಕ್ಷೇಮಕ್ಕಾಗಿ ದೇವರಲ್ಲಿ ಪ್ರಾರ್ಥಿಸಲಾಯಿತು.ಬೇಳ ಪದ್ಮನಾಭ ಶರ್ಮ ಹಿಂದೆ ಲಂಕಾ ಪ್ರದಾನಿಯವರ ಮನೆಯಲ್ಲಿ ಪ್ರಶ್ನೆ ಚಿಂತನೆ ಇರಿಸಿದಾಗ ಕಂಡ ದೋಷ ಪರಿಹಾರಕ್ಕಾಗಿ ತನ್ನ ಮಾರ್ಗದರ್ಶದ ಮೇರೆ ಗೆ ಇಲ್ಲಿಗೆ ಆಗಮಿಸಿ ದೆವರಿಗೆ ಸೇವೆ ಸಲ್ಲಿಸಿರುವುದಾಗಿ ಶರ್ಮ ಉದಯವಾಣಿಗೆ ತಿಳಿಸಿದರು.ಹಿಂದಿನ ಕಾಲ ದಲ್ಲಿ ಹುಲಿ ಮತ್ತು ದನ ಒಟ್ಟಿಗೆ ಆಟವಾಡುತ್ತಿದ್ದ ಪ್ರಸಿದ್ಧ ಪುರಾಣ ಪುಣ್ಯ ಐಕ್ಯಮತ್ಯ ಸ್ಥಳದಲ್ಲಿ ಪರಿಹಾರ ಕ್ರಮ ಸೂಕ್ತವೆಂಬುದಾಗಿ ಜ್ಯೋತಿಷಿಯವರು ಪ್ರದಾನಿಯಗುವ ಮುನ್ನವೇ ಸಲಹೆ ನೀಡಿ ಈ ಸ್ಥಳ ಪ್ರಶಸ್ತವೆಂಬುದಾಗಿ ತಿಳಿಸಿದ್ದರಂತೆ.ಆದರಂತೆ ಇಲ್ಲಿಗೆ ಆಗಮಿಸಿ ಸೇವೆ ಸಲ್ಲಿಸಿದ್ದರೆ,.ಆಶ್ಲೇಷ ಬಲಿ ಸೇವೆಯಿಂದಆರೋಗ್ಯ,ಸಂಪತ್ತು,ಸಂತಾನ ಅಭಿವೃದ್ಧಿಯ ನಂಬಿಕೆಯಿಂದ ಪ್ರದಾನಿಯವರು ಸೇವೆ ನೆರವೇಸಿಸಿದ್ದಾರೆ. ವಿಷ್ಣು ಅಸ್ರ ಉಳಿಯ, ಬೇಳ ರಾಮಚಂದ್ರ ಅಡಿಗ,ಕಿಳಿಂಗಾರು ಗೋಪಾಲಕೃಷ್ಣ ಭಟ್,ಮುರಳೀಕೃಷ್ಣ ಅಸ್ರ ವೈದಿಕ ಕಾರ್ಯಕ್ರಮಗಳನ್ನು ವಿದ್ಯುಕ್ತವಾಗಿ ನೆರವೇರಿಸಿದರು. ಜ್ಯೋತಿಷಿ ಬೇಳ ಪದ್ಮನಾಭ ಶರ್ಮ, ಕ್ಷೇತ್ರ ಆಡಳಿತ ಸಮಿತಿ ಯ ಬಿ. ವಸಂತಪೈ ಬದಿಯಡ್ಕ,ಶ್ರಿಧರ ಪ್ರಸಾದ್ ಉಪಸ್ಥಿತರಿದ್ದರು.
ಸಕಲ ಸರಕಾರಿ ಗೌರವ
ಕಾಸರಗೋಡು ಜಿಲ್ಲೆಗೆ ಪ್ರಥಮವಾಗಿ ಆಗಮಿಸಿದ ಶ್ರೀಲಂಕಾ ಪ್ರಧಾನಿ ದಂಪತಿಯನ್ನು ಸಕಲ ಸರಕಾರಿ ಗೌರವಗಳೊಂದಿಗೆ ಸ್ವಾಗತಿಸ ಲಾಯಿತು.ಕಾಸರಗೋಡು ಎಸ್‌ಪಿ.ಜೇಮ್ಸ್ ಥೋಮಸ್,ಡಿ.ವೈ.ಎಸ್.ಪಿ.ಶಿಲ್ಪಾ ಡಿ,ಸಹಾಯಕ ಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್ ಅವರ ನೇತೃತ್ವದಲ್ಲಿ ಬಿಗಿ ಪೋಲೀಸ್ ಬಂದೋಬಸ್ತಿನಲ್ಲಿ ಪ್ರದಾನಿ ಅಗಮಿಸಿದರು. ದೇಗುಲಕ್ಕೆ ಬೆಳಗ್ಗೆ 8 .50 ಕ್ಕೆ ಆಗಮಿಸಿ 9.40 ಕ್ಕೆ ಮರಳಿದರು.ಖಾಸಗಿ ಕಾರ್ಯಕ್ರಮವಾದ ಕಾರಣ ಭಕ್ತರಿಗೆ ಮತ್ತು ಪತ್ರಕರ್ತರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಕ್ಷೇತ್ರದ ಹೊರಭಾಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ನೆರೆದಿದ್ದರು.ಪ್ರದಾನಿ ಮತ್ತು ಪತ್ನಿ ದೇಗುಲದಿಂದ ಮರಳುವಾಗ ಅಭಿಮಾನಿಗಳಿಗೆ ಕಾರಿನಿಂದಲೇ ಕೈಮುಗಿದರು. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಮತ್ತು ಚಾರ್ಲಿ ಪೊಲೀಸ್ ನಾಯಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.