Advertisement

ತಮಿಳುನಾಡು : ಶ್ರೀಲಂಕಾ ನೌಕ ಪಡೆಯಿಂದ ಭಾರತೀಯ 60 ಮೀನುಗಾರಿಕಾ ಬೋಟ್ ಗಳ ಮೇಲೆ ಕಲ್ಲು ತೂರಾಟ

02:02 PM Aug 22, 2021 | Team Udayavani |

ರಾಮೇಶ್ವರ  : ನಿನ್ನೆ(ಶನಿವಾರ, ಆಗಸ್ಟ್ 21) ತಡರಾತ್ರಿ ಶ್ರೀಲಂಕಾ ನೌಕಾಪಡಯ ಸಿಬ್ಬಂದಿಗಳು ನಡೆಸಿದ ಕಲ್ಲು ತೂರಾಟದ ನಡೆಸಿವೆ ಎಂದು ವರದಿಯಾಗಿದೆ.

Advertisement

ಈ ಬಗ್ಗೆ ಪ್ರತಿಕ್ರಿಯಿಸಿದ ಮೀನುಗಾರಿಕೆ ಇಲಾಖೆಯ ಅಧಿಕಾರಿಯೊಬ್ಬರು,  ಸುಮಾರು 60 ಭಾರತೀಯ ಮೀನುಗಾರಿಕಾ ದೋಣಿಗಳು ಹಾನಿಗೀಡಾಗಿವೆ ಎಂದು ಇಂದು(ಭಾನುವಾರ, ಆಗಸ್ಟ್ 22) ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಶ್ರೀಹಯಗ್ರೀವ ದೇವರಿಗೆ ಹಯಗ್ರೀವ ಜಯಂತೀಯ ಪ್ರಯುಕ್ತ ವಿಷ್ಣುಸಹಸ್ರ ನಾಮಾರ್ಚನೆ

ಸುಮಾರು ಐದು ಹಡುಗುಗಳ ಮೂಲಕ ಭಾರತೀಯ ಮೀನುಗಾರಿಕಾ ಬೋಟ್ ಗಳ ಮೇಲೆ ಶ್ರೀಲಂಕಾ ನೌಕಾ ಸಿಬ್ಬಂದಿಗಳು ದಾಳಿ ಮಾಡಿದ್ದಾರೆ. ಮೀನುಗಾರಿಕೆಯಲ್ಲಿ ತೊಡಗಿದ್ದ 25 ದೋಣೆಗಳಲ್ಲಿನ ಮೀನುಗಾರಿಕಾ ಬಲೆಗಳನ್ನೂ ಕಚ್ಚತೀವು ಸಮೀಪ ಲಂಕಾದ ನೌಕಾ ಸಿಬ್ಬಂದಿಗಳು ಹಾಳುಗೈದಿದ್ದಾರೆಂದು ತಿಳಿಸಿದ್ದಾರೆ.

ಇನ್ನು, ನಿನ್ನೆ ರಾತ್ರಿ ಸುಮಾರು 556 ದೋಣಿಗಳೊಂದಿಗೆ ಮೀನುಗಾರರು ಮೀನಗಾರಿಕೆಗೆಂದು ತೆರಳಿದ್ದರು. ದಾಳಿಯ ಸಂದರ್ಭದಲ್ಲಿ ಯಾವುದೇ ಮೀನುಗಾರರಿಗೆ ಏಟಾಗಿಲ್ಲ ಎಂದಿದ್ದಾರೆ.

Advertisement

ಇನ್ನು, ಮೀನುಗಾರರ ಸಂಘದ ಪ್ರತಿನಿಧಿ ಎಸ್‌. ಎಮೆರಿಟ್‌ ಪ್ರತಿಕ್ರಿಯಿಸಿ, ಮೀನುಗಾರಿಕೆಗೆಂದು ತೆರಳಿದ್ದ 556 ಬೋಟ್ ಗಳಲ್ಲಿ ಕೆಲವು ಶ್ರೀಲಂಕಾ ನೌಕಾ ಪಡೆಯ ದಾಳಿಗೆ ಗುರಿಯಾಗಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಧ್ಯ ಪ್ರವೇಶಿಸಿ, ಈ ರೀತಿಯ ಘಟನೆಗಳು ಪುನಃ ಸಂಭವಿಸದಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ತಮಿಳುನಾಡಿನ ಮೀನುಗಾರರಿಗೆ ಶ್ರೀಲಂಕಾ ನೌಕಾಪಡೆಗಳಿಂದ ಆಗುತ್ತಿರುವ ಉಪಟಳದ ಹಿನ್ನೆಲೆಯಲ್ಲಿ ಈ ಹಿಂದೆ ತಮಿಳುನಾಡಿನ ಮುಖ್ಯಮಂತ್ರಿ ಎಂ ಕೆ ಸ್ಟ್ಯಾಲಿನ್, ವಿದೇಶಿ ರಾಜಕೀಯ ಬಿಕ್ಕಟ್ಟನ್ನು ಅಥವಾ ವೈಷಮ್ಯವನ್ನು ಬಗೆಹರಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು.

ಇದನ್ನೂ ಓದಿ : ಯುನೈಟೆಡ್ ಕಿಂಗ್‌ ಡಂ ನ ಮಹಿಳೆಯರು ಅಲ್ಲಿನ ವ್ಯವಸ್ಥೆಯ ಬಗ್ಗೆ ನಂಬಿಕೆ ಕಳೆದುಕೊಂಡಿರುವುದ್ಯಾಕೆ..?

Advertisement

Udayavani is now on Telegram. Click here to join our channel and stay updated with the latest news.

Next