Advertisement

ಗಾಲೆ ಟೆಸ್ಟ್‌ : 6 ವಿಕೆಟ್‌ಗಳಿಂದ ಗೆದ್ದ ಶ್ರೀಲಂಕಾ

12:39 AM Aug 19, 2019 | Sriram |

ಗಾಲೆ: ಪ್ರವಾಸಿ ನ್ಯೂಜಿಲ್ಯಾಂಡ್‌ ಎದು ರಿನ ಗಾಲೆ ಟೆಸ್ಟ್‌ ಪಂದ್ಯವನ್ನು 6 ವಿಕೆಟ್‌ಗಳಿಂದ ಗೆದ್ದ ಶ್ರೀಲಂಕಾ, ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಸರಣಿಯಲ್ಲಿ ಶುಭಾರಂಭ ಮಾಡಿದೆ.
ಗೆಲುವಿಗೆ 268 ರನ್ನುಗಳ ಗುರಿ ಪಡೆದ ಶ್ರೀಲಂಕಾ 4 ವಿಕೆಟ್‌ ನಷ್ಟದಲ್ಲಿ ಈ ಗುರಿ ಮುಟ್ಟಿತು. 4ನೇ ದಿನದಾಟದ ಕೊನೆಯಲ್ಲಿ ವಿಕೆಟ್‌ ನಷ್ಟವಿಲ್ಲದೆ 133 ರನ್‌ ಗಳಿಸಿದಾಗಲೇ ಲಂಕಾ ಗೆಲುವು ಖಾತ್ರಿಯಾಗಿತ್ತು.

Advertisement

ದಿಮುತ್‌ ಕರುಣರತ್ನೆ 122
71 ರನ್‌ ಮಾಡಿ ನಾಟೌಟ್‌ ಆಗಿ ಉಳಿದಿದ್ದ ಆರಂಭಕಾರ, ತಂಡದ ನಾಯಕನೂ ಆಗಿರುವ ದಿಮುತ್‌ ಕರುಣರತ್ನೆ 122ರ ತನಕ ಬ್ಯಾಟಿಂಗ್‌ ವಿಸ್ತರಿಸಿ ಗೆಲುವನ್ನು ಸುಲಭಗೊಳಿಸಿದರು. ಇದು ಅವರ 9ನೇ ಟೆಸ್ಟ್‌ ಶತಕ. 243 ಎಸೆತಗಳ ಈ ಜವಾಬ್ದಾರಿಯುತ ಇನ್ನಿಂಗ್ಸ್‌ನಲ್ಲಿ ಕೇವಲ 6 ಬೌಂಡರಿ, ಒಂದು ಸಿಕ್ಸರ್‌ ಸೇರಿತ್ತು. ಗೆಲುವಿಗೆ ಭರ್ತಿ 50 ರನ್‌ ಬೇಕಿರುವಾಗ ಕರುಣರತ್ನೆ 3ನೇ ವಿಕೆಟ್‌ ರೂಪದಲ್ಲಿ ಔಟಾದರು.

ಮತ್ತೂಬ್ಬ ಆರಂಭಕಾರ ಲಹಿರು ತಿರಿಮನ್ನೆ 64 ರನ್‌ ಮಾಡಿದರು (163 ಎಸೆತ, 4 ಬೌಂಡರಿ). ಇವರಿಬ್ಬರಿಂದ ಮೊದಲ ವಿಕೆಟಿಗೆ 60.2 ಓವರ್‌ಗಳಿಂದ 161 ರನ್‌ ಒಟ್ಟುಗೂಡಿತು.

ಕುಸಲ್‌ ಮೆಂಡಿಸ್‌ 10, ಕುಸಲ್‌ ಪೆರೆರ 23, ಏಂಜೆಲೊ ಮ್ಯಾಥ್ಯೂಸ್‌ ಅಜೇಯ 28 ರನ್‌ ಹೊಡೆದರು. ಮೊದಲ 3 ದಿನಗಳ ಕಾಲ ಬೌಲಿಂಗಿಗೆ ನೆರವು ನೀಡುತ್ತಿದ್ದ ಗಾಲೆ ಟ್ರ್ಯಾಕ್‌ ಕೊನೆಯ ಹಂತದಲ್ಲಿ ಸಂಪೂರ್ಣವಾಗಿ ಬ್ಯಾಟಿಂಗಿಗೆ ಸಹಕರಿಸಿತು. ನ್ಯೂಜಿಲ್ಯಾಂಡ್‌ ಪರ ಬೌಲ್ಟ್, ಸೌಥಿ, ಸೋಮರ್‌ವಿಲ್ಲೆ ಮತ್ತು ಪಟೇಲ್‌ ಒಂದೊಂದು ವಿಕೆಟ್‌ ಕೆಡವಿದರು.

ಸರಣಿಯ 2ನೇ ಹಾಗೂ ಅಂತಿಮ ಟೆಸ್ಟ್‌ ಆ. 22ರಿಂದ ಕೊಲಂಬೋದಲ್ಲಿ ಆರಂಭವಾಗಲಿದೆ.

Advertisement

ಸಂಕ್ಷಿಪ್ತ ಸ್ಕೋರ್‌
ನ್ಯೂಜಿಲ್ಯಾಂಡ್‌-249 ಮತ್ತು 285. ಶ್ರೀಲಂಕಾ-267 ಮತ್ತು 4 ವಿಕೆಟಿಗೆ 268.
ಪಂದ್ಯಶ್ರೇಷ್ಠ: ದಿಮುತ್‌ ಕರುಣರತ್ನೆ.

Advertisement

Udayavani is now on Telegram. Click here to join our channel and stay updated with the latest news.

Next