ನವದೆಹಲಿ: ಮುಂದಿನ ವಾರ ಶ್ರೀಲಂಕಾಕ್ಕೆ ಕೋವಿಡ್ -19 ಲಸಿಕೆಗಳ ‘ಉಡುಗೊರೆ’ ಕಳುಹಿಸುವುದಾಗಿ ಭಾರತ ಹೇಳಿದೆ.
ಭಾರತದ ಕೋವಿಡ್ ಲಸಿಕೆ ಜನವರಿ 27 ರಂದು ದೇಶಕ್ಕೆ ತಲುಪಲಿದೆ. ದೇಶವು 500,000 ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ಪಡೆಯಲಿದೆ ಎಂದು ಶ್ರೀಲಂಕಾದ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ಹೇಳಿದ್ದಾರೆ. ಆ ಮೂಲಕ ಶ್ರೀಲಂಕಾವು ಭಾರತದ ಕೋವಿಡ್ 19 ಲಸಿಕೆಗಳನ್ನು ಉಡುಗೊರೆಯಾಗಿ ಪಡೆದ ಎಂಟನೇ ರಾಷ್ಟ್ರವಾಗಲಿದೆ.
ಇದನ್ನೂ ಓದಿ : ಈ ಬಾರಿ ಸರಳ ಗಣರಾಜ್ಯೋತ್ಸವ ಆಚರಣೆ: ಮಾಣೆಕ್ ಶಾ ಮೈದಾನಕ್ಕೆ ಸಾರ್ವಜನಿಕ ಪ್ರವೇಶವಿಲ್ಲ
ಶ್ರೀಲಂಕಾದ ಭಾರತೀಯ ರಾಯಭಾರಿ ಕಚೇರಿಯು ಈ ಬೆಳವಣಿಗೆಯನ್ನು ಸ್ವಾಗತಿಸಿ, ಲಸಿಕೆಯನ್ನು ಭಾರತದಿಂದ ಎಲ್ಕಾಗೆ ತಲುಪಿಸುವ ವೇಳಾಪಟ್ಟಿಯನ್ನು ಸ್ಪಷ್ಟಪಡಿಸಿರುವುದನ್ನು ತನ್ನ ಟ್ವೀಟರ್ ಖಾತೆಯಲ್ಲಿ ಹೇಳಿಕೊಂಡಿದೆ. ಮೊದಲ ಹಂತದ ಲಸಿಕೆಗಳನ್ನು ದೇಶದ ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುವುದು. ಭಾರತದಲ್ಲಿ ತಯಾರಿಸಿದ ಲಸಿಕೆಗಳನ್ನು ಮುಂದಿನ ದಿನಗಳಲ್ಲಿ ಕೊಲೊಂಬೊ ಪಡೆಯುವ ನಿರೀಕ್ಷೆಯಿದೆ.
ಜ. 19 ಮತ್ತು 20ರಂದು ಭಾರತ 13 ದೇಶಗಳ ವೈದ್ಯಕೀಯ ಸಿಬ್ಬಂದಿಗಳಿಗೆ ಕೊರೋನಾ ವ್ಯಾಕ್ಸಿನ್ ನೀಡುವ ತರಬೇತಿಯನ್ನು ನೀಡಿತ್ತು. ಅದರಲ್ಲಿ ಶ್ರೀಲಂಕಾದ ಇಬ್ಬರು ಕೂಡ ಭಾಗವಹಿಸಿದ್ದರು.
ಇದನ್ನೂ ಓದಿ : ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ, ಅಕ್ರಮ ಗಣಿಗಾರಿಕೆ ತಕ್ಷಣ ನಿಲ್ಲಿಸಬೇಕು: ಬಿಎಸ್ ವೈ