Advertisement

ಭಾರತ ವಿರುದ್ಧದ ಟಿ20 ಸರಣಿಗೆ ಬಲಿಷ್ಠ ಸ್ಪಿನ್ ತಂಡ ಕಟ್ಟಿದ ಶ್ರೀಲಂಕಾ

04:16 PM Feb 21, 2022 | Team Udayavani |

ಕೊಲಂಬೋ: ಭಾರತದ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಶ್ರೀಲಂಕಾ ತಂಡ ಪ್ರಕಟಿಸಲಾಗದೆ. 18 ಆಟಗಾರರ ತಂಡ ಪ್ರಕಟ ಮಾಡಲಾಗಿದ್ದು, ದಾಸುನ್ ಶನಕ ತಂಡವನ್ನು ಮುನ್ನಡೆಸಲಿದ್ದಾರೆ.

Advertisement

ಹಿರಿಯ ಆಟಗಾರರಾದ ಕುಸಾಲ್ ಮೆಂಡಿಸ್, ಪಥುಮ್ ನಿಸಾಂಕ, ದಿನೇಶ್ ಚಾಂಡಿಮಾಲ್, ದನುಶ್ಕ ಗುಣತಿಲಕ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಗಾಯಗೊಂಡಿರುವ ಅವಿಶ್ಕ ಫರ್ನಾಂಡೋ, ನುವಾನ್ ತುಶಾರ ಮತ್ತು ರಮೇಶ್ ಮೆಂಡಿಸ್ ಹೊರಬಿದ್ದಿದ್ದಾರೆ.

ಯುವಜನ ಮತ್ತು ಕ್ರೀಡಾ ಸಚಿವ ನಮಲ್ ರಾಜಪಕ್ಸೆ ಅವರು ಈ ತಂಡವನ್ನು ಅನುಮೋದಿಸಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಹೇಳಿಕೆಯಲ್ಲಿ ತಿಳಿಸಿದೆ.

ಭಾರತದ ವಿರುದ್ಧದ ಟಿ20 ಸರಣಿಗೆ ಉತ್ತಮ ಸ್ಪಿನ್ನರ್ ಗಳ ತಂಡವನ್ನೇ ಲಂಕಾ ಕಟ್ಟಿದೆ. ಪ್ರಮುಖ ಸ್ಪಿನ್ನರ್ ವಾನಿಂದು ಹಸರಂಗ, ಮಹೇಶ್ ತೀಕ್ಷಣ, ಜೆಫ್ರಿ ವಾಂಡೆರ್ಸಿ ಮತ್ತು ಆಶಿಯಾನ್ ಡೇನಿಯಲ್ ಸ್ಪಿನ್ ವಿಭಾಗದಲ್ಲಿದ್ದಾರೆ.

ಇದನ್ನೂ ಓದಿ:ವೃದ್ಧಿಮಾನ್ ಸಹಾ ಆರೋಪದಿಂದ ನನಗೆ ಬೇಸರವಿಲ್ಲ, ಆದರೆ…: ಕೋಚ್ ರಾಹುಲ್ ದ್ರಾವಿಡ್

Advertisement

ಲಂಕಾ ಸರಣಿಗೆ ಭಾರತ ತಂಡವನ್ನು ಕಳೆದವಾರ ಪ್ರಕಟಿಸಲಾಗಿತ್ತು. ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಗೆ ವಿಶ್ರಾಂತಿ ನೀಡಲಾಗಿದೆ. ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದು, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ತಂಡಕ್ಕೆ ಮರಳಿದ್ದಾರೆ.

ಲಂಕಾ ತಂಡ: ದಾಸುನ್ ಶನಕ (ನಾ), ಪಥುಮ್ ನಿಸಾಂಕ, ಕುಸಾಲ್ ಮೆಂಡಿಸ್, ಚರಿತ ಅಸಲಂಕ (ಉ.ನಾ), ದಿನೇಶ್ ಚಾಂಡಿಮಾಲ್, ದುನುಶ್ಕ ಗುಣತಿಲಕ, ಕಮಿಲ್ ಮಿಶಾರ, ಜಾನಿತ್ ಲಿಯಾನಗೆ, ವಾನಿಂದು ಹಸರಂಗ, ಚಮಿಕ ಕರುಣರತ್ನೆ, ದುಶ್ಮಂತ ಚಮೀರ, ಲಹಿರು ಕುಮಾರ, ಬಿನೂರ ಫರ್ನಾಂಡೊ, ಶಿರಾನ್ ಫರ್ನಾಂಡೊ, ಮಹೇಶ್ ತೀಕ್ಷಣ, ಜೆಫ್ರಿ ವಾಂಡೆರ್ಸಿ, ಪ್ರವೀಣ್ ಜಯವಿಕ್ರಮ ಮತ್ತು ಆಶಿಯಾನ್ ಡೇನಿಯಲ್.

Advertisement

Udayavani is now on Telegram. Click here to join our channel and stay updated with the latest news.

Next