ಕೊಲೊಂಬೋ: ಕಂಡು ಕೇಳರಿಯದ ಆರ್ಥಿಕ ದುಸ್ಥಿತಿಗೆ ತುತ್ತಾಗಿರುವ ಶ್ರೀಲಂಕಾದಲ್ಲಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಮಾಡಲಾಗಿದೆ.
ಪ್ರತಿ ಲೀಟರ್ ಪೆಟ್ರೋಲ್‌ಗೆ 50 ಶ್ರೀಲಂಕಾ ರೂಪಾಯಿ, ಪ್ರತಿ ಲೀಟರ್ ಡೀಸೆಲ್‌ಗೆ 60 ಶ್ರೀಲಂಕಾ ರೂಪಾಯಿಯಷ್ಟು ಏರಿಕೆ ಮಾಡಲಾಗಿದೆ.
ದೇಶದ ಪೆಟ್ರೋಲ್ ಬಂಕ್‌ಗಳಲ್ಲಿ ಸಂಗ್ರಹ ಬರಿದಾಗುತ್ತಿರುವಂತೆಯೇ ಈ ನಿರ್ಧಾರ ಕೈಗೊಳ್ಳಲಾಗಿದೆ.
ಹೀಗಾಗಿ, ಅಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 470 ಶ್ರೀಲಂಕಾ ರೂಪಾಯಿ, ಪ್ರತಿ ಲೀಟರ್ ಡೀಸೆಲ್‌ಗೆ 460 ಶ್ರೀಲಂಕಾ ರೂಪಾಯಿ ಆಗಲಿದೆ. ಅಂದ ಹಾಗೆ, ಎರಡು ತಿಂಗಳ ಅವಧಿಯಲ್ಲಿ ಮೂರನೇ ಬಾರಿಗೆ ದರ ಹೆಚ್ಚಳ ಮಾಡಲಾಗುತ್ತಿದೆ.
Related Articles
ದ್ವೀಪರಾಷ್ಟ್ರದಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಲಂಕಾ) ಕೂಡ ದರ ಏರಿಕೆ ಮಾಡಿದೆ.
ಇನ್ನೊಂದೆಡೆ, ರಷ್ಯಾದಿಂದ ಕಚ್ಚಾ ತೈಲ ಖರೀದಿ ಮಾಡುವುದರ ಬಗ್ಗೆಯೂ ಚಿಂತನೆ ನಡೆಸಿದೆ.