ಕೊಲಂಬೊ: ಶ್ರೀಲಂಕಾ ಕ್ರಿಕೆಟಿಗರಾದ ಲಸಿತ ಮಾಲಿಂಗ ಮತ್ತು ಇಸುರು ಉದಾನ ಐಪಿಎಲ್ ಕೂಟದ ಆರಂಭದ ಕೆಲವು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.
ಆಗಸ್ಟ್ -ಸೆಪ್ಟಂಬರ್‌ನಲ್ಲಿ ಶ್ರೀಲಂಕಾ ತನ್ನ ಚೊಚ್ಚಲ ‘ಲಂಕಾ ಪ್ರೀಮಿಯರ್ ಲೀಗ್’ (ಎಲ್‌ಪಿಎಲ್) ಆಯೋಜಿಸುತ್ತಿರುವುದೇ ಇದಕ್ಕೆ ಕಾರಣ.
13ನೇ ಐಪಿಎಲ್ ಪಂದ್ಯಾವಳಿಯನ್ನು ಸೆ. 19ರಿಂದ ಯುಎಇಯಲ್ಲಿ ಆರಂಭಿಸಲು ಬಿಸಿಸಿಐ ನಿರ್ಧರಿಸಿದೆ. ಆದರೆ ಸೆ. 20ರಂದು ಎಲ್‌ಪಿಎಲ್ ಫೈನಲ್ ಏರ್ಪಡಲಿದೆ.
ಹಾಗೆಯೇ ಲಂಕಾ ಕ್ರಿಕೆಟ್ ಮಂಡಳಿಯ ನಿಯಮದಂತೆ, ಯಾವ ಆಟಗಾರರೂ ತವರಿನ ಕೂಟದ ನಡುವೆ ಬೇರೊಂದು ವಿದೇಶಿ ಕ್ರಿಕೆಟ್ ಲೀಗ್‌ನಲ್ಲಿ ಪಾಲ್ಗೊಳ್ಳುವಂತಿಲ್ಲ.
Related Articles
ಹೀಗಾಗಿ ಮಾಲಿಂಗ, ಉದಾನ ಸೆ. 20ರ ಬಳಿಕವೇ ಯುಎಇಗೆ ಆಗಮಿಸಬೇಕಿದೆ. ದುಬಾೖಗೆ ಬಂದಿಳಿದ ಬಳಿಕ ಕೋವಿಡ್-19 ಟೆಸ್ಟ್‌ಗೆ ಒಳಗಾಗಬೇಕಿದೆ. 72 ಗಂಟೆಗಳ ಐಸೊಲೇಶನ್ ಅವಧಿ ಕೂಡ ಇದೆ. ನೆಗೆಟಿವ್ ಫಲಿತಾಂಶ ಬಂದರಷ್ಟೇ ಆಟಗಾರರು ಐಪಿಎಲ್‌ನಲ್ಲಿ ಆಡಬಹುದಾಗಿದೆ.
ಉದಾನ ಆರ್‌ಸಿಬಿ ಆಟಗಾರ
ಲಸಿತ ಮಾಲಿಂಗ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಬೌಲರ್ ಆಗಿದ್ದಾರೆ. 122 ಐಪಿಎಲ್ ಪಂದ್ಯ ಗಳನ್ನಾಡಿರುವ ಮಾಲಿಂಗ 19.8ರ ಸರಾಸರಿಯಲ್ಲಿ 170 ವಿಕೆಟ್ ಉಡಾಯಿಸಿದ್ದಾರೆ. ಇದೇ ಮೊದಲ ಸಲ ಐಪಿಎಲ್ ಆಡುತ್ತಿರುವ ಇಸುರು ಉದಾನ ಆರ್‌ಸಿಬಿ ತಂಡದ ಸದಸ್ಯನಾಗಿದ್ದಾರೆ.
ಲಂಕಾದಂತೆ ಆಸ್ಟ್ರೇಲಿಯ ಮತ್ತು ಇಂಗ್ಲೆಂಡಿನ ಕೆಲವು ಆಟಗಾರರೂ ಮೊದಲ ಹಂತದ ಕೆಲವು ಐಪಿಎಲ್ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ. ಆಗ ಇತ್ತಂಡಗಳ ನಡುವೆ ಏಕದಿನ ಸರಣಿ ಮುಗಿದು 3 ದಿನಗಳಷ್ಟೇ ಆಗಲಿದ್ದು, ಆಟಗಾರರು ಯುಎಇಗೆ ಬಂದ ಬಳಿಕ ಕೋವಿಡ್ 19 ಪರೀಕ್ಷೆಗೆ ಒಳಗಾಗಬೇಕಿದೆ.