Advertisement
ಧರ್ಮಸ್ಥಳದಲ್ಲಿ ಸಂಭ್ರಮ-ಸಡಗರ, ಹಬ್ಬದ ವಾತಾವರಣ ಮೂಡಿದ್ದು ಶುಭ ಹಾರೈಕೆಯ ಮಹಾಪೂರವೇ ಹರಿದುಬಂತು. ಮುಂಜಾನೆ ಡಾ| ಹೆಗ್ಗಡೆ ಅವರು ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ ಹಾಗೂ ಭಗವಾನ್ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ಹೃದ್ರೋಗ ತಜ್ಞ ಡಾ| ಬಿ.ಎಂ.ಹೆಗ್ಡೆ ದೂರವಾಣಿ ಮೂಲಕ ಹೆಗ್ಗಡೆಯವರಿಗೆ ಶುಭಾಶಂಸನೆ ಮಾಡಿದರು.
Related Articles
ಡಾ| ಹೆಗ್ಗಡೆಯವರು ಪ್ರತಿಯೊಬ್ಬರ ಯೋಗ-ಕ್ಷೇಮ ವಿಚಾರಿಸಿ ಆಶೀರ್ವದಿಸಿ ಸಂತಸ ವ್ಯಕ್ತಪಡಿಸಿದರು. ಪಟ್ಟಾಭಿಷೇಕ ವರ್ಧಂತಿ ಆಚರಣೆ ಪ್ರಯುಕ್ತ ದೇಗುಲದ ನೌಕರರಿಗೆ ವಿವಿಧ ಸ್ಪರ್ಧೆಗಳು, ಹಿರಿಯ ನೌಕರರ ಸಮ್ಮಾನ, ಸಾಂಸ್ಕೃತಿ ಕಾರ್ಯಕ್ರಮ, ಹೆಗ್ಗಡೆಯವರಿಂದ ಹೊಸ ಯೋಜನೆಗಳ ಪ್ರಕಟ ಮೊದಲಾದ ಕಾರ್ಯಕ್ರಮ ಆಯೋಜಿಸಲಾಗಿದೆ.
Advertisement
1968ರ ಅ. 24ರಂದು ತನ್ನ ಇಪ್ಪತ್ತನೆ ಪ್ರಾಯದಲ್ಲಿ ಅಂದಿನ ವೀರೇಂದ್ರ ಕುಮಾರ್ ನೆಲ್ಯಾಡಿ ಬೀಡಿನಲ್ಲಿ ಧರ್ಮ ಸ್ಥಳದ ಸಂಪ್ರದಾಯದಂತೆ 21ನೇ ಧರ್ಮಾಧಿಕಾರಿಯಾಗಿ ಪಟ್ಟಾಭಿ ಷಿಕ್ತರಾದರು. ಅನಂತರ ಪ್ರತೀ ವರ್ಷ ಅ.24 ರಂದು ದೇಗುಲ ನೌಕರವೃಂದ ಮತ್ತು ಊರಿನವರು ಸೇರಿ ಪಟ್ಟಾಭಿಷೇಕ ವರ್ಧಂತಿಯನ್ನು ಆಚರಿಸುತ್ತಾರೆ.